ಉಪಯುಕ್ತ ಮಾಹಿತಿ

ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಏಕೆ ವಡೆಯುತ್ತಾರೆ

ನಮಸ್ಕಾರ ವೀಕ್ಷಕರೆ ನಮ್ಮ ಹಿಂದೂ ಧರ್ಮದಲ್ಲಿ ತೆಂಗಿನಕಾಯಿ ಗೆ ಅತಿ ಹೆಚ್ಚು ಮಹತ್ವವನ್ನು ನೀಡಲಾಗಿದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಒಂದು ಪೂಜೆ ಕೂಡ ಪೂರ್ಣವಾಗಲು ಸಾಧ್ಯವೇ ಇಲ್ಲ. ಯಾಕೆ ಅಂತ ಅಂದರೆ ನಾವು ತೆಂಗಿನಕಾಯಿಯನ್ನು ದೇವರ ಸ್ವರೂಪ ಎಂದು ಹೇಳಲಾಗುತ್ತದೆ. ಜೊತೆಗೆ ನಾವು ಪೂಜೆಯನ್ನು ಮಾಡುವಂತಹ ಸಂದರ್ಭದಲ್ಲಿ ತೆಂಗಿನಕಾಯಿಯನ್ನು ಅರ್ಪಿಸಲು ಬೇಕು.

ಇಲ್ಲ ಅಂದ್ರೆ ಪೂಜೆಯನ್ನು ಅಪೂರ್ಣ ಎಂದು ಹೇಳಲಾಗುತ್ತದೆ. ತೆಂಗಿನಕಾಯಿ ಇಲ್ಲದೆ ಯಾವುದೇ ಪೂಜೆ ಅಥವಾ ಶುಭಕಾರ್ಯಗಳು ನೆರವೇರದೆ ಇಲ್ಲ. ಈ ಕಾರಣದಿಂದಾಗಿ ಇದನ್ನು ಶ್ರೀಫಲ ಅಂತ ಸಹ ಹೇಳಲಾಗುತ್ತದೆ. ಪುರಾಣಗಳ ಪ್ರಕಾರ ತೆಂಗಿನಕಾಯಿಯನ್ನು ಅತ್ಯಂತ ಪವಿತ್ರವಾದ ಹಣ್ಣು ಅಂತ ಪರಿಗಣಿಸಲಾಗುತ್ತೆ.

ಏಕೆ ಅಂತ ಅಂದರೆ ಬ್ರಹ್ಮ ವಿಷ್ಣು ಮತ್ತು ಮಹೇಶ್ವರ ರೂ ಇದರಲ್ಲಿ ವಾಸಿಸುತ್ತಾರೆ ಅಂತ ಹೇಳಲಾಗುತ್ತೆ. ದೇವರಿಗೆ ತೆಂಗಿನಕಾಯಿ ಅರ್ಪಣೆ ಮಾಡುವುದರಿಂದ ಭಕ್ತರ ಎಲ್ಲ ದುಃಖಗಳು ಮತ್ತು ನೋವುಗಳು ದೂರವಾಗುತ್ತೆ ಎಂದು ಸಹ ಹೇಳಲಾಗುತ್ತೆ. ಶುಭ ಸಮಾರಂಭದಲ್ಲಿ ತೆಂಗಿನಕಾಯಿಯನ್ನು ಹೊಡೆಯುವುದರಿಂದ ತೆಂಗಿನಕಾಯಿಯನ್ನು ಮುಖ್ಯವಾಗಿ ಪ್ರಸಾದಲ್ಲಿ ಬಳಸಲಾಗಿದೆ.

ಇದಲ್ಲದೇ ಹಲವು ದಿನಗಳ ಕಾಲ ನಡೆಯುತ್ತಿರುವಂತಹ ಉಪವಾಸದ ಸಂಕಲ್ಪವನ್ನು ಕೂಡ ಭಗವಂತನಿಗೆ ತೆಂಗಿನಕಾಯನ್ನು ಅರ್ಪಿಸುವ ಮೂಲಕ ಮಾಡಲಾಗುತ್ತೆ. ಇನ್ನು ಪೂಜೆಯಲ್ಲಿ ತೆಂಗಿನಕಾಯಿಯನ್ನು ಹೊಡೆಯುವ ಅರ್ಥ ಏನಪ್ಪಾ ಅಂದರೆ ಆ ವ್ಯಕ್ತಿ ದೇವರ ಪಾದದಲ್ಲಿ ತನ್ನನ್ನು ಅರ್ಪಿಸಿಕೊಂಡು ಇದ್ದಾನೆ ಅಂತ ಅರ್ಥ ಜೊತೆಗೆ ಹಿಂದಿನ ಕಾಲದಲ್ಲಿ ನಡೆದುಕೊಂಡು ಬಂದಾ ಬಲಿ ಕೊಡುವ ಸಂಪ್ರದಾಯವನ್ನು ಮುರಿದು ಹಾಕುವ ಸಲುವಾಗಿ ಈ ತೆಂಗಿನಕಾಯಿಯನ್ನು ಹೊಡೆಯಲಾಗುತ್ತದೆ.

ಇದು ದೇವರಿಗೆ ಕೊಡುವಂತಹ ಬಲಿ ಅಥವಾ ನೈವೇದ್ಯ ಅಂತ ಹೇಳಲಾಗುತ್ತದೆ. ಇನ್ನು ತೆಂಗಿನ ಮರ ಯಾಕೆ ಮಂಗಳಕರ ಅನ್ನುವುದು ಬಹಳಷ್ಟು ಮುಖ್ಯ. ಯಾಕೆ ಅಂತ ಅಂದರೆ ಇದರಲ್ಲಿ ಭಗವಾನ್ ವಿಷ್ಣು ಇರುತ್ತಾನೆ. ಭೂಮಿಯ ಮೇಲೆ ಆತ ಅವತರಿಸಿದಾಗ ತನ್ನೊಂದಿಗೆ ಲಕ್ಷ್ಮಿಯನ್ನು ತೆಂಗಿನ ಮರ ಮತ್ತು ಕಾಮಧೇನು ಗಳನ್ನು ಸಹ ತಂದ್ ಇದ್ದಾನಂತೆ. ತೆಂಗಿನ ಮರವನ್ನು ಕಲ್ಪವೃಕ್ಷ ಸಹ ಕರೆಯಲಾಗುತ್ತದೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button