ENTERTAINMENT

ಟಾಪ್ ನಟಿಯಾಗಿ ಮಿಂಚಿದ್ದ ಧಾಮಿನಿ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ದೂರ ಉಳಿಯಲು ಕಾರಣವೇನು.?

ಚಿತ್ರರಂಗ ಎಂಬ ಮಾಯಾ ಲೋಕವೇ ಹಾಗೆ ಕೆಲವರಿಗೆ ಕೈ ಹಿಡಿದು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಇನ್ನು ಕೆಲವರಿಗೆ ಪ್ರಾರಂಭದಲ್ಲೇ ಕೈ ಹಿಡಿದು ಎತ್ತರಕ್ಕೆ ಕರೆದುಕೊಂಡು ಹೋಗಿ ನಂತರ ಪಾತಾಳಕ್ಕೆ ತುಳಿದು ಬಿಡುತ್ತದೆ.. ಇನ್ನುಳಿದವರಿಗೆ ಸತತ ಪ್ರಯತ್ನಗಳು ಮಾಡಿದರೂ ವಿಜಯಲಕ್ಷ್ಮಿ ಮಾತ್ರ ಒಲಿದು ಬರುವುದಿಲ್ಲ … ಇದೀಗ ಈ ಸಾಲಿಗೆ ಕನ್ನಡದ ಹೆಮ್ಮೆಯ ನಟಿ, ತನ್ನ ಚಿಕ್ಕ ವಯಸ್ಸಿನಲ್ಲೇ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದ ನಟಿ ದಾಮಿನಿ ಕೂಡ ಒಬ್ಬರು ಎಂದರೆ ತಪ್ಪಾಗಲಾರದು.

ಉಪೇಂದ್ರ, ಶಿವರಾಜ್ ಕುಮಾರ್, ಶಶಿಕುಮಾರ್ ಅಂತಹ ಖ್ಯಾತ ನಟರ ಜೊತೆ ಅಭಿನಯಿಸಿರುವ ಧಾಮಿನಿ ಅವರು ತಮ್ಮ ಅಮೋಘ ನಟನೆಯಿಂದ ಕನ್ನಡ ಚಿತ್ರರಂಗದಲ್ಲಿ ಹೆಸರು ವಾಸಿಯಾಗಿದ್ದಾರೆ. ಹೌದು, ತಮ್ಮ ಹದಿಹರೆಯದ ವಯಸ್ಸಿನಲ್ಲಿ ಉಪೇಂದ್ರ ಅವರು ನಿರ್ದೇಶಿಸಿ, ನಟಿಸಿದ ಉಪೇಂದ್ರ ಚಿತ್ರದಲ್ಲಿ ತಮ್ಮ ಸಿನಿ ವೃತ್ತಿ ಜೀವನವನ್ನು ಪ್ರಾರಂಭಿಸಿ ತಮ್ಮ ಅಮೋಘ ನಟನೆಯಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದರು. ಅಲ್ಲದೇ ಈ ಸಿನಿಮಾದ ನಟನೆಯಿಂದ ಅವರಿಗೆ ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಕೂಡ ಬಂದಿತ್ತು.

ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಿದ ಚಿತ್ರವೆಂದರೆ ಉಪೇಂದ್ರ.. ಈ ಚಿತ್ರದ ಮೂರು ನಾಯಕಿಯರಲ್ಲಿ ದಾಮಿನಿ ಅವರು ಕೂಡ ಒಬ್ಬರು..ತಾವು ಅಭಿನಯಿಸಿದ ಮೊದಲ ಚಿತ್ರದಲ್ಲೇ ಅಪಾರ ಯಶಸ್ಸನ್ನು ಕಂಡವರು ಧಾಮಿನಿ. ಈ ಚಿತ್ರ ಸೂಪರ್ ಹಿಟ್ ಆದ ಮೇಲೆ ಅವರಿಗೆ ಸಿನಿಮಾಗಳ ಆಫರ್ ಸುರಿಮಳೆಯೇ ಹರಿದು ಬಂದಿತ್ತು..ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಸಿನಿ ಪಂಡಿತರು ಮತ್ತು ಸಿನಿ ರಸಿಕರು ಫುಲ್ ಮಾರ್ಕ್ಸ್ ನೀಡಿದ್ದರು..ಇಷ್ಟೆಲ್ಲ ಖ್ಯಾತಿ ಪಡೆದರು ಧಾಮಿನಿ ಅವರು ಇದ್ದಕ್ಕಿದ್ದಂತೆ ಚಿತ್ರದಲ್ಲಿ ಯಾಕೆ ಕಾಣಿಸಿಕೊಳ್ಳುತ್ತಿಲ್ಲ ಅವರು ಈಗ ಏನು ಮಾಡುತ್ತಿದ್ದಾರೆ ಎಂಬುದು ಹಲವರಿಗೆ ತಿಳಿದಿಲ್ಲ ..ಹಾಗಾದರೆ ಅವರು ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಮುಂದೇ ಓದಿ.

ನಟಿ ಧಾಮಿನಿ ಅವರು ಉಪೇಂದ್ರ ಚಿತ್ರದ ಹಿಟ್ ಬಳಿಕ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ. ಆದರೆ ಉಪೇಂದ್ರ ಸಿನಿಮಾ ಬಿಟ್ಟರೆ ಮತ್ತ್ಯಾವ ಸಿನಿಮಾಗಳು ಅವರ ಲೈಫ್ ನಲ್ಲಿ ಹಿಟ್ ಲಿಸ್ಟ್ ನಲ್ಲಿ ಸೇರಲಿಲ್ಲ..ಅವಕಾಶಗಳು ಒಂದರ ಮೇಲೆ ಒಂದು ಬಂದರೂ ಯಶಸ್ಸು ಮಾತ್ರ ಕಾಣಲಿಲ್ಲ ..ಆಕೆ ಕನ್ನಡ ಚಲನಚಿತ್ರರಂಗದಿಂದ ದೂರ ಉಳಿಯಲು ಬಹುಮುಖ್ಯವಾದ ಕಾರಣ ಒಂದಿದೆ. ಅದೇನೆಂದರೆ ಅವರಿಗೆ ಒಳ್ಳೆಯ ಕಥೆ ಸಿಗದೇ ಇರುವುದು.. ಸಿಕ ಸಿನಿಮಾಗಳಲೆಲ್ಲಾ ಅಭಿನಯಿಸುವುದು..ಕಥೆಯ ಅಯ್ಕೆಯಲ್ಲಿ ಎಡವಿದ್ದು, ಇವೆಲ್ಲ ಕಾರಣದಿಂದ ಅವರ ಸಿನಿಮಾಗಳು ಹಿಟ್ ಆಗಲಿಲ್ಲ ಆದ್ದರಿಂದ ಚಿತ್ರರಂಗದಿಂದ ದೂರ ಉಳಿದಿದ್ದಾರೆ ಎನ್ನುತ್ತಾರೆ ಕೆಲವರು..

ನಂತರ ಸತತ ಸೋಲನ್ನು ಕಂಡಿದ್ದ ಧಾಮಿನಿ ಅವರಿಗೆ ಚಿತ್ರದಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಬರುತ್ತದೆ.. ಅಲ್ಲದೇ ಪರ ಭಾಷೆಯ ಚಿತ್ರರಂಗದಲ್ಲಿ ತಮ್ಮ ಲಕ್ ಪರೀಕ್ಷಿಸಲು ಕೆಲವೊಂದು ಸಿನಿಮಾಗಳಲ್ಲಿ ಅಭಿನಯಿಸುತ್ತಾರೆ.. ಆದರೆ ಕಲಾದೇವಿ ಅಲ್ಲಿಯೂ ಕೂಡ ಕೈ ಹಿಡಿಯುವುದಿಲ್ಲ ..ನಂತರ ಹುಚ್ಚ ವೆಂಕಟ್ ಅವರ ನಿರ್ದೇಶನದ ಸ್ವಾತಂತ್ರ ಪಾಳ್ಯ ಎಂಬ ಚಿತ್ರದಲ್ಲಿ ಅಭಿನಯಿಸುತ್ತಾರೆ .. ಈ ಚಿತ್ರದ ಸಮಯದಲ್ಲಿ ನಿರ್ಮಾಪಕರ ಜೊತೆ ಎಂಬತ್ತು ಸಾವಿರ ಹಣದ ವಿಚಾರವಾಗಿ ದೊಡ್ಡ ಜಗಳವನ್ನು ಮಾಡಿಕೊಳ್ಳುತ್ತಾರೆ .. ಮೊದಲೇ ಯಾವ ಚಿತ್ರಗಳು ಯಶಸ್ಸು ತಂದು ಕೊಡುತ್ತಿರಲಿಲ್ಲ. ಇದರ ಜೊತೆ ನಿರ್ಮಾಪಕರ ಜಗಳ ಬೇರೆ .. ಇವೆಲ್ಲ ಕಾರಣದಿಂದ ಚಿತ್ರರಂಗದಿಂದ ದೂರ ಉಳಿಯುವುದೇ ಲೇಸು ಎಂದು ಚಿತ್ರರಂಗವನ್ನು ತೊರೆದು ಬಿಡುತ್ತಾರೆ..

ಚಿತ್ರರಂಗವನ್ನು ತೊರೆದ ನಟಿ ಧಾಮಿನಿ ತಕ್ಷಣ ವಿವಾಹವಾಗಿ ಬಿಡುತ್ತಾರೆ ..ಇದೀಗ ತಮ್ಮ ಪತಿಯ ಜೊತೆ ಸುಖ ಸಂಸಾರವನ್ನು ನಡೆಸುತ್ತಿದ್ದು, ಈ ದಂಪತಿಗಳಿಗೆ ಎರಡು ಮುದ್ದಾದ ಮಕ್ಕಳಿವೆ.. ಏನೇ ಆಗಲಿ ಚಿತ್ರರಂಗ ಕೆಲವರಿಗೆ ಸಾಯುವ ತನಕ ಊಟ ಹಾಕಿದರೆ, ಇನ್ನು ಕೆಲವರಿಗೆ ಅರ್ಧದಲ್ಲೇ ಕೈಕೊಡುತ್ತದೆ ಅನ್ನುವುದು ಮಾತ್ರ ನಿಜ. ಅಲ್ಲವೇ.?

ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644

ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.

Related Articles

Leave a Reply

Your email address will not be published. Required fields are marked *

Back to top button