ನಾಗಿಣಿಯಾಗಿ ಮರಳಿ ಬಂದ ಮೋಹಕ ಬೆಡಗಿ ದೀಪಿಕಾ ದಾಸ್
ದೀಪಿಕಾ ದಾಸ್ ಸೀರಿಯಲ್ ಪ್ರಿಯರ ಪಾಲಿಗೆ ಇದು ಪರಿಚಿತ ಹೆಸರು ಜೀ ಕನ್ನಡ ವಾಹಿನಿಯಲ್ಲಿ ಹಯವದನ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿಯಲ್ಲಿ ನಾಗಲೋಕದ ಕನ್ಯೆ ಅಮೃತಾ ಆಗಿ ನಟಿಸುವ ಮೂಲಕ ಕಿರುತೆರೆ ಲೋಕದಲ್ಲಿ ಹೊಸ ಅಲೆಯನ್ನೇ ಸೃಷ್ಟಿ ಮಾಡಿದ್ದ ಚೆಂದುಳ್ಳಿ ಚೆಲುವೆಯ ಹೆಸರು ದೀಪಿಕಾ ದಾಸ್. ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಪ್ರಸಾರವಾಗಿದ್ದ ನಾಗಿಣಿ ಧಾರಾವಾಹಿಯಲ್ಲಿ ಅಮೃತಾ ಆಗಿ ನಟಿಸುವ ಮೂಲಕ ಕನ್ನಡ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ಮೋಹಕ ಬೆಡಗಿ ದೀಪಿಕಾ ದಾಸ್ ಮರಳಿ ಕಿರುತೆರೆಗೆ ಬರುತ್ತಿದ್ದಾರೆ. ಕಾಕತಾಳೀಯ ಎಂದರೆ ಅವರು ಮಗದೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೂಡಾ ನಾಗಣಿಯಾಗಿಯೇ ನಾಗಿಣಿ 2 ರಲ್ಲಿ ದೀಪಿಕಾ ದಾಸ್ ಅವರು ನಾಗಕನ್ಯೆ ಅಮೃತಾ ಆಗಿಯೇ ನಿಮ್ಮ ಮುಂದೆ ಬರಲಿದ್ದು ಅವರ ಎಂಟ್ರಿಯಿಂದ ಸೀರಿಯಲ್ ಗೆ ಮಹಾಟ್ವಿಸ್ಟ್ ಸಿಗುವುದಂತೂ ನಿಜ. ನಾಗಲೋಕದ ರಾಜಕುಮಾರ ದುಷ್ಟರ ಕೈಯಿಂದ ಹತನಾಗಿದ್ದು, ಇಪ್ಪತ್ತು ವರ್ಷಗಳ ನಂತರ ಆತ ಮರುಜನ್ಮ ಪಡೆದಿದ್ದಾನೆ.