ಶಾಕಿಂಗ್.. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇ ಗೌಡ ಪರಿಸ್ಥಿತಿ ಹೇಗಾಗಿದೆ ನೋಡಿ..
ಮೊನ್ನೆಮೊನ್ನೆಯಷ್ಟೇ ಸ್ಯಾಂಡಲ್ವುಡ್ ಸ್ಟಾರ್ ನಟ ರಾಷ್ಟ್ರಪ್ರಶಸ್ಥಿ ವಿಜೇತ ಸಂಚಾರಿ ವಿಜಯ್ ಅವರ ವಿಚಾರದಲ್ಲಿ ನಡೆದ ಘಟನೆ ಇನ್ನೂ ಮಾಸುವ ಮೊದಲೇ ಇದೀಗ ಮತ್ತೊಂದು ಅಂತಹುದೇ ಘಟನೆ ನಡೆದಿದೆ.. ಹೌದು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ಗೋವಿಂದೇ ಗೌಡ ಎಲ್ಲರಿಗೂ ತಿಳಿದೇ ಇದೆ.. ಕೆಜಿಎಫ್ ಸಿನಿಮಾದಲ್ಲಿಯೂ ಅಭಿನಯಿಸಿ ಹೆಸರು ಮಾಡಿದ ಗೋವಿಂದೇ ಗೌಡ ಅವರ ಪರಿಸ್ಥಿತಿ ಹೇಗಾಗಿದೆ ನೋಡಿ.. ವಿಚಾರ ತಿಳಿದು ಜಗ್ಗೇಶ್ ಯೋಗರಾಜ್ ಭಟ್ಟರು ಹಾಗೂ ಜೀ ಕನ್ನಡ ಸಿಬ್ಬಂಧಿ ಬೆಚ್ಚಿಬಿದ್ದು ಆಸ್ಪತ್ರೆಗೆ ಓಡಿ ಬಂದಿದ್ದಾರೆ.. ಹೌದು ಅದ್ಯಾಕೋ ಕಲಾವಿದರಿಗೆ ಕಳೆದ ವರ್ಷದಿಂದ ಅದೃಷ್ಟವೇ ಸರಿ ಇಲ್ಲದಂತೆ ಕಾಣುತ್ತಿದೆ..
ಕೊರೊನಾ ಕಾರಣದಿಂದ ಒಂದು ಕಡೆ ಚಿತ್ರೋದ್ಯಮ ನೆಲಕಚ್ಚಿದ್ದು ಅನೇಕ ಸಣ್ಣ ಪುಟ್ಟ ಕಲಾವಿದರು ಬೀದಿಗೆ ಬಿದ್ದಿದ್ದಾರೆ. ಇತ್ತ ಸಿನಿಮಾವನ್ನೇ ನಂಬಿಕೊಂಡಿದ್ದ ದಿನಗೂಲಿ ನೌಕರರು ಮತ್ತೊಬ್ಬರು ಸಹಾಯ ಮಾಡಿದರೆ ಮಾತ್ರ ಊಟ ಎನ್ನುವಂತಾಗಿದೆ.. ಇನ್ನೂ ಮನಸ್ಸು ನೋವನ್ನುಂಟು ಮಾಡುವ ವಿಚಾರ ಎಂದರೆ ಕೆಲ ಕಲಾವಿದರು ಆರ್ಥಿಕ ಸಂಕಷ್ಟದಿಂದ ದುಡುಕಿ ಜೀವವನ್ನೇ ಕಳೆದುಕೊಂಡು ಬಿಟ್ಟರು.. ಮತ್ತಷ್ಟು ಕಲಾವಿದರು ನಿರ್ದೇಶಕ ನಿರ್ಮಾಪಕರು ಕೊರೊನಾ ದಿಂದ ಇನ್ನಿಲ್ಲವಾದರು. ಒಂದರ ಹಿಂದಂತೆ ಒಂದು ಸಾಲು ಸಾಲು ಕಹಿ ಸುದ್ದಿಗಳನ್ನು ನೋಡುವಂತಾಗಿದ್ದು ಇದೀಗ ಮತ್ತೊಂದು ನೋವಿನ ವಿಚಾರ ಎದುರಾಗಿದೆ.
ಸಾಲು ಸಾಲು ನೋವಿನ ಸುದ್ದಿಗಳ ನಡುವೆಯೇ ಇದೀಗ ಲಾಕ್ ಡೌನ್ ತೆರವಾಗಿ ಚಿತ್ರಮಂದಿರಗಳು ಸಹ ತೆರೆದಿದ್ದು ಚಿತ್ರರಂಗ ಮತ್ತೆ ಚೇತರಿಕೆಯ ಹಾದಿ ಕಾಣಬಹುದು ಎಂದು ಸಿನಿಮಾ ಮಂದಿ ಕೊಂಚ ನಿರಾಳತೆ ವ್ಯಕ್ತ ಪಡಿಸುತ್ತಿರುವ ಸಮಯದಲ್ಲಿಯೇ ಬೇರೆ ರೀತಿಯ ನೋವುಗಳು ಕಾಡುತ್ತಿವೆ.. ಹೌದು ಸಂಚಾರಿ ವಿಜಯ್ ಅವರ ಘಟನೆ ಮಾಸುವ ಮುನ್ನವೇ ಇದೀಗ ಕಾಮಿಡಿ ಕಿಲಾಡಿಗಳು ನಟ ಗೋವಿಂದೇ ಗೌಡ ಅವರಿಗೆ ನಿನ್ನೆ ರಾತ್ರಿ ಅಪ ಘಾತವಾಗಿದೆ.. ಹೌದು ನಿನ್ನೆ ರಾತ್ರಿ ಈ ಘಟನೆ ಸಂಭವಿಸಿದ್ದು ಗೋವಿಂದೇ ಗೌಡ ಅವರ ಸ್ತಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.. ಚಿತ್ರೀಕರಣದ ಸಮಯದಲ್ಲಿಯೇ ಈ ಘಟನೆ ನಡೆದಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹೌದು ಗೋವಿಂದೇ ಗೌಡರನ್ನು ಬಿಜಿಎಸ್ ಎಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಜೀ ಕನ್ನಡದ ಸಿಬ್ಬಂಧಿ ನಿರ್ದೇಶಕ ಯೋಗರಾಜ್ ಭಟ್ಟರು ಹಾಗೂ ನಟ ಜಗ್ಗೇಶ್ ಅವರು ಆಸ್ಪತ್ರೆಗೆ ಮಧ್ಯರಾತ್ರಿಯಲ್ಲಿಯೇ ತೆರಳಿದ್ದಾರೆ.. ಈ ಬಗ್ಗೆ ಮಾಹಿತಿ ನೀಡಿರುವ ಜಗ್ಗೇಶ್ ಅವರು “ಕಾಮಿಡಿ ಕಿಲಾಡಿಗಳು ನಟ ಜಿ ಜಿ ಗೋವಿಂದೇ ಗೌಡನಿಗೆ ಚಿತ್ರೀಕರಣದ ಸಮಯದಲ್ಲಿ ಅಪ ಘಾತವಾಗಿ ಬಿಜಿ ಎಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ.. ದಯಮಾಡಿ ಅವನಿಗೆ ಏನೂ ಆಗದಂತೆ ಪ್ರಾರ್ಥನೆ ಮಾಡಿ.. ನಾನೂ ಸಹ ಗಣಪತಿಗೆ ಪ್ರಾರ್ಥನೆ ಸಲ್ಲಿಸಿ ಆಸ್ಪತೆಗೆ ಹೋಗುತ್ತಿದ್ದೇನೆ.. ಎಂದಿದ್ದರು.. ಇನ್ನು ಇತ್ತ ಯೋಗರಾಜ್ ಭಟ್ಟರು ಹಾಗೂ ಜೀ ಕನ್ನಡ ವಾಹಿನಿಯ ಶರಣು ಅವರೂ ಸಹ ಮಧ್ಯ ರಾತ್ರಿಯಲ್ಲಿಯೇ ಆಸ್ಪತ್ರೆಗೆ ತೆರಳಿದ್ದು ಅಲ್ಲಿಯೇ ಉಳಿದಿದ್ದಾರೆ..
ಗೋವಿಂದೇ ಗೌಡ ಅವರು ಕಲಾವಿದನಾಗಿ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕೆಂದು ಊರು ಬಿಟ್ಟು ಬೆಂಗಳೂರಿಗೆ ಬಂದಾಗ ಜಗ್ಗೇಶ್ ಅವರೇ ತಮ್ಮ ಮನೆಯಲ್ಲಿ ಉಳಿಯಲು ಅವಕಾಶ ನೀಡಿ ಸಹಾಯ ಮಾಡಿದ್ದರು. ನಂತರ ಕಾಮಿಡಿ ಕಿಲಾಡಿಗಳು ಶೋ ಮೂಲಕ ಮನೆ ಮಾತಾದ ಗೋವಿಂದೇ ಗೌಡ ನಂತರ ಅನೇಕ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದರು.. ಕೆಜಿಎಫ್ ಸಿನಿಮಾದಲ್ಲಿ ಅವರ ಅದ್ಭುತ ನಟನೆ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಕೆಜಿಎಫ್ ೨ ಸಿನಿಮಾದಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಕಳೆದ ಎರಡು ವರ್ಷದ ಹಿಂದೆ ಕಾಮಿಡಿ ಕಿಲಾಡಿಗಳು ಶೋನ ದಿವ್ಯಾ ಅವರನ್ನು ಮದುವೆಯಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದರು.. ಆದರೆ ಇಂತಹ ಸಮಯದಲ್ಲಿ ಜಿಜಿ ಗೆ ಈ ರೀತಿಯಾಗಿದ್ದು ದಿವ್ಯಾ ಹಾಗೂ ಕುಟುಂಬದಲ್ಲಿ ಆತಂಕವನ್ನುಂಟು ಮಾಡಿದೆ.. ಆದಷ್ಟು ಬೇಗ ಗೋವಿಂದೇ ಗೌಡ ಗುಣಮುಖರಾಗಿ ಮರಳುವಂತಾಗಲಿ..
ಜಾಹಿರಾತು: “ಶ್ರೀ ಚೌಡೇಶ್ವರಿ ಜ್ಯೋತಿಷ್ಯಾಲಯ” “ಇಷ್ಟಪಟ್ಟ ಸ್ತ್ರೀ-ಪುರುಷ ವಶೀಕರಣ ದಲ್ಲಿ ಓಪನ್ ಚಾಲೆಂಜ್” ಉದ್ಯೋಗ, ಸಾಲದ ಬಾಧೆ, ಸತಿ ಪತಿ ಕಲಹ, ಶತ್ರುನಾಶ, ಆರೋಗ್ಯದಲ್ಲಿ ಸಮಸ್ಯೆಗಳಿದ್ದರೆ “ಶ್ರೀ ಚೌಡೇಶ್ವರಿ ದೇವಿಯ ರಹಸ್ಯ ಅಘೋರಿ ನಾಗ ಸಾಧುಗಳ ಬ್ರಹ್ಮ ವಿದ್ಯೆಯಿಂದ” ನಿಮ್ಮ ಏನೇ ಸಮಸ್ಯೆಗಳಿದ್ದರೂ 11 ನಿಮಿಷದಲ್ಲಿ ಶಾಶ್ವತ ಪರಿಹಾರ. Dr. ವೇದಾಂತ್ ಶರ್ಮ ಗುರೂಜಿ… 9740830644
ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೆ ಕರೆ ಮಾಡಿ 9740830644. ನಂ 1 ವಶೀಕರಣ ದೈವಶಕ್ತಿ ಮಾಂತ್ರಿಕ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು ಶ್ರೀ ವೇದಾಂತ್ ಶರ್ಮ ಗುರೂಜಿ 9740830644.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾ ಪ್ರಾಪ್ತಿ, ಮದುವೆ, ಸಂತಾನ, ಪ್ರೀತಿಯಲ್ಲಿ ನಂಬಿ ಮೋಸ, ಸ್ತ್ರೀ ಪುರುಷ ವಶೀಕರಣ, ಜನ ವಶೀಕರಣ, ಸಾಲದಿಂದ ವಿಮುಕ್ತಿ,
ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9740830644.