ಮುಖ್ಯಮಂತ್ರಿ ಚಂದ್ರು ಅವರ ಮಗ ಯಾರು ಗೊತ್ತಾ ಇವರ ಮಗ ಕೂಡ ಹೀರೋ…
ಹಾಸ್ಯ ನಟ ಪೋಷಕ ನಟ ಯಾವುದೇ ಪಾತ್ರವನ್ನು ಕೊಟ್ಟರು ಆಯಾಸವಾಗಿ ನಿಭಾಯಿಸುವ ಇವರು. ಮುಖ್ಯಮಂತ್ರಿ ಚಂದ್ರು ಇವರ ಮೂಲ ಹೆಸರು ಚಂದ್ರಶೇಖರ್. ಬೆಂಗಳೂರಿನಲ್ಲಿ ನೆಲೆಸಿರುವ ಮುಖ್ಯಮಂತ್ರಿ ಚಂದ್ರು ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ. ಖಳನಾಯಕನ ಪಾತ್ರದಿಂದ ಹಿಡಿದು,ಹಾಸ್ಯ, ಪೋಷಕ
ಪಾತ್ರಗಳಲ್ಲಿ ತಮ್ಮದೆ ಛಾಪು ಮೂಡಿಸಿರುವ ಚಂದ್ರು ರಂಗಭೂಮಿಯ ಹಿನ್ನಲೆಯಿಂದ ಚಿತ್ರರಂಗಕ್ಕೆ ಬಂದರು. ಕಲಾಗಂಗೋತ್ರಿ ತಂಡದ `ಮುಖ್ಯಮಂತ್ರಿ’ ನಾಟಕದಲ್ಲಿ ಮುಖ್ಯಮಂತ್ರಿಯ ಪಾತ್ರ ಮಾಡಿದ ಮೇಲೆ ಇವರ ಹೆಸರಿಗೆ ಮುಖ್ಯಮಂತ್ರಿ ಪ್ರತ್ಯಯ ಸೇರಿಕೊಂಡಿತು. 40 ವರ್ಷಗಳ ನಂತರವೂ ಇನ್ನು ಆ ನಾಟಕದ ಜನಪ್ರಿಯತೆ ಕಡಿಮೆಯಾಗಿಲ್ಲ.
1953 ರಲ್ಲಿ ನೆಲಮಂಗಲದ ಹೊನ್ನಸಂದ್ರದ ರೈತ ಕುಟುಂಬದಲ್ಲಿ ಜನಿಸಿದ ಚಂದ್ರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗುಮಾಸ್ತನ ಕೆಲಸ ಮಾಡುತ್ತಲೇ ನಾಟಕದತ್ತ ಆಕರ್ಷಿತರಾದ ಚಂದ್ರು `ರವೀಂದ್ರ ಕಲಾಕ್ಷೇತ್ರ’ದ ನಿತ್ಯ ಅತಿಥಿಯಾದರು. 1983 ರಲ್ಲಿ ನಟಿ ಪದ್ಮಾ ಅವರನ್ನು ಕೈಹಿಡಿದರು. ಈ ದಂಪತಿಗೆ ಇಬ್ಬರು ಮಕ್ಕಳು.
ಮುಖ್ಯಮಂತ್ರಿ ಎಂಬ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಪಾತ್ರಧಾರಿ ಆಗಿ ನಟಿಸಿ ಆ ಪಾತ್ರಕ್ಕೆ ಜೀವ ತುಂಬಿ ಪ್ರಖ್ಯಾತಿ ಪಡೆದ ಹಿನ್ನೆಲೆಯಲ್ಲಿ ಚಂದ್ರಶೇಖರ್ ಮುಖ್ಯಮಂತ್ರಿ ಆದರೂ. ಇವರು ನೆಲಮಂಗಲ ತಾಲೂಕಿನ ಹೊನ್ನಸಂದ್ರ ಎಂಬ ಗ್ರಾಮದಲ್ಲಿ ಆಗಸ್ಟ್ 28 1953ರಲ್ಲಿ ಜನಿಸಿದರು ಸಿದ್ದಗಂಗಾ ಮಠದ ಅಲ್ಲಿ ಶಿಕ್ಷಣ ಪಡೆದ ಇವರು ಬಿಎಸ್ಸಿ ಪದವಿದಾರರು .
ಚಕ್ರವ್ಯೂಹ ಸಿನಿಮಾದಿಂದ ಇವರ ಸಿನಿ ಜರ್ನಿ ಪ್ರಾರಂಭವಾಯಿತು. ಇವರ ಮುಖ್ಯವಾದ ಚಿತ್ರಗಳು ಗೌರಿ ಗಣೇಶ ನ ಮದುವೆ ಸೂರ್ಯವಂಶ ಸಿಂಹಾದ್ರಿಯ ಸಿಂಹ ಇನ್ನು ಮುಂತಾದ ಅವರ ಚಿತ್ರಗಳು. ಇನ್ನು ಇವರು ಕೆಲವು ಸೀರಿಯಲ್ ಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಅಗ್ನಿಸಾಕ್ಷಿ ಸೀರಿಯಲ್ ನಲ್ಲಿ ವಾಸುದೇವ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಇನ್ನು ಇವರಿಗೆ ಶರತ್ ಮತ್ತು ಭರತ್ ಎಂಬ ಇಬ್ಬರು ಗಂಡು ಮಕ್ಕಳು ಇದ್ದಾರೆ. ಶರತ್ ಅವರು ಕೂಡ ಒಬ್ಬ ನಟರು ಆಗಿದ್ದಾರೆ ಇವರು ಕಿಚ್ಚ ಸುದೀಪ್ ಅಭಿನಯದ ರನ್ನ ಚಿತ್ರದಲ್ಲಿ ನಟಿಸಿದ್ದರು. ಹಾಗೆ ದಿ ವಿಲನ್ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇನ್ನು ಈಗ ಶರತ್ ಅವರು ಹೊಸ ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನೂ ಕೂಡ ಹೆಸರು ಇಟ್ಟಿಲ್ಲ ಇದೊಂದು ರೋಮ್ಯಾಂಟಿಕ್ ಕಾಮಿಡಿ ಚಿತ್ರವಂತೆ.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.
ವಿಶೇಷ ಸೂಚನೆ : ಜ್ಯೋತಿಷ್ಯ ಓಂದು ನಂಬಿಕೆ ನಾವು ಈ ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಸಹಾಯದಿಂದ ಮಾಡಿದ್ದೇವೆ. ಈ ಮಾಹಿತಿಯನ್ನು ನಾವು ಯಾವುದೇ ರೀತಿಯಾದಂತಹ ನಮ್ಮ ಸ್ವಂತ ಮನಸ್ಸಿ ಹೆಚ್ಚಾಗಿ ಬರೆದಿಲ್ಲ ಆದಷ್ಟು ಮಾಹಿತಿಯನ್ನು ಯೂಟ್ಯೂಬ್ ಚಾನೆಲ್ ಪ್ರೇರಣೆಯಿಂದ ಈ ಒಂದು ಮಾಹಿತಿಯನ್ನು ತಯಾರು ಮಾಡಿದ್ದೇವೆ.