GOSSIP

ಸಕ್ಕರೆ ಕಾಯಿಲೆ ಇದ್ದವರು ದಯವಿಟ್ಟು ಇವತ್ತು ಸೇವಿಸಿ. 

ಪ್ರಕೃತಿಯು ನಮಗೊಂದು ನೀಡುವಂತಹ ಪ್ರತಿಯೊಂದು ಹಣ್ಣು ಹಾಗೂ ತರಕಾರಿಗಳಲ್ಲಿ ಹಲವಾರು ರೋಗಗಳ ಔಷಧಿಯ ಗುಣಗಳು ಇವೆ ಎನ್ನುವುದು ನಮಗೆ ತಿಳಿದಿದೆ. ಆದರೆ ನಾವು ಮಾತ್ರ ಇವುಗಳನ್ನು ಸೇವಿಸಲು ಉದಾಸೀನತೆ ತೋರಿಸುತ್ತೇವೆ ಸಾಮಾನ್ಯವಾಗಿ ಬೇಸಿಗೆಕಾಲದಲ್ಲಿ ಹೆಚ್ಚು ಕಂಡುಬರುವಂತಹ ಬಿಳಿ ನೇರಳೆ ಅಥವಾ ಬಿಳಿ ಜಂಬುವಿನಲ್ಲಿ ಹಲವಾರು ಬಗೆಯ ಔಷಧಿ ಗುಣಗಳು ಇವೆ.

ಜಂಬು ನೀರಲಿಯಲ್ಲಿ ಹಲವಾರು ಬಣ್ಣಗಳನ್ನು ನಾವು ಕಾಣುತ್ತೇವೆ. ಪ್ರತಿಯೊಂದರಲ್ಲೂ ಅದರದ್ದೇ ಆಗಿರುವಂತಹ ಆರೋಗ್ಯದ ಗುಣಗಳು ಇವೆ. ಇದರಲ್ಲಿ ವಿಟಮಿನ್ ಸಿ ಜೊತೆಗೆ ಆಹಾರದ ನಾರಿನ ಅಂಶವು ಇದೆ ಅದೇ ರೀತಿ ಕ್ಯಾಲ್ಸಿಯಂ ಥೈಮೇಟ್ ಮತ್ತು ಕಬ್ಬಿನಾಂಶವೂ ಇದೆ ಇದರಲ್ಲಿ ಇರುವಂತಹ ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ.

ಹಾಗಾದರೆ ಬಿಳಿ ಜಾಮೂನಿನಿಂದ ಯಾವೆಲ್ಲ ಗುಣಗಳು ಪಡೆಯಬಹುದು ಎಂಬುದನ್ನು ಇವತ್ತಿನ ಮಾಹಿತಿಯ ಮುಖಾಂತರ ತಿಳಿದುಕೊಳ್ಳೋಣ ಬನ್ನಿ. ಮಧುಮೇಹಿಗಳು ಇದನ್ನು ಸೇವನೆ ಮಾಡಿದ ವೇಳೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ತುಂಬಾ ಸಹಕಾರಿಯಾಗಿದೆ. ಬಿಳಿ ಜಾಮುನಿನ ಬೀಜದಿಂದ ಮಾಡಿರುವಂತಹ ಹುಳಿಯನ್ನು ಆಹಾರ ಮತ್ತು ಪಾನೀಯಗಳಲ್ಲಿ ಬಳಕೆ ಮಾಡಬಹುದು.

ಷ್ಟೇ ಅಲ್ಲದೆ ಬಿಳಿ ಜಾಮೂನಿನಲ್ಲಿ ಶೇಕಡ 93 ರಷ್ಟು ನಾರಿನ ಅಂಶ ಇರುವ ಕಾರಣ ಇದು ಸಾಮಾನ್ಯವಾಗಿ ಕಾಡುವ ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರ ಮಾಡುತ್ತದೆ. ಅತಿಸಾರ ನಿಯಂತ್ರಣ ಮಾಡಲು ಇದು ಸಹಕಾರಿಯಾಗಿದೆ. ಅಜೀರ್ಣದ ಪ್ರಮುಖ ಸಮಸ್ಯೆಯಾಗಿರುವ ವಾಯುವನ್ನು ಇದು ದೂರ ಮಾಡುವುದು. ಅಷ್ಟಿಲ್ಲದ ಇದರಲ್ಲಿ ಅತ್ಯಧಿಕ ಪ್ರಮಾಣದ ನೀರಿನ ಅಂಶ ಮತ್ತು ನೈಸರ್ಗಿಕ ತಂಪು ಕಾರಕ ಗುಣಗಳು ಇರುವ ಕಾರಣದಿಂದಾಗಿ ಇದು ದೇಹವನ್ನು

ತಂಪಾಗಿ ಇಡಲು ಸಹಕಾರಿ ಮತ್ತು ಬೇಸಿಗೆಯಲ್ಲಿ ಬಿಸಿಲಿನಿಂದ ಆಗುವ ಆಘಾತವನ್ನು ಇದು ಕಡಿಮೆ ಮಾಡುವುದು ಹಾಗೂ ನೈರ್ಜಲಿಕರಣವನ್ನು ಇದು ತಡೆಯುತ್ತದೆ. ಇದು ಬಿಳಿ ಜಾಮುನಿನಲ್ಲಿ ಇರುವಂತಹ ಕೆಲವೊಂದು ಜೈವಿಕಾಂಶಗಳಿಂದಾಗಿ ಇದು ಶಿಲೀಂದ್ರ ಮತ್ತು ಸೂಕ್ಷ್ಮಾಣುವಿನಿಂದ ಬರುವ ಸೋಂಕನ್ನು ಕಡಿಮೆ ಮಾಡುತ್ತದೆ.

ಜಂಬು ನೇರಳೆಯಲ್ಲಿ ಸಮೃದ್ಧವಾದ ಔಷಧಿ ಗುಣಗಳಿರುವುದರಿಂದ ಆಯುರ್ವೇದ, ಯುನಾನಿ ಮತ್ತು ಚೀನೀ ಔಷಧದಲ್ಲಿ ಬಳಸಲಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸುವುದು. ಈ ಹಣ್ಣನ್ನು ಚೂರ್ಣ, ವಿರೇಚಕ ಪುಡಿ ಸೇರಿದಂತೆ ಇನ್ನಿತರ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುವುದು.ಬಿಳಿ/ ಜಂಬು ನೇರಳೆ ಮಧುಮೇಹಿಗಳಿಗೆ ಅದ್ಭುತವಾದ ಆಯ್ಕೆ ಆಗುವುದು. ಇದು ರಕ್ತದಲ್ಲಿ ಇರುವ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುವುದು.

ಬೀಜದಲ್ಲಿ ಕ್ಯಾಲ್ಸಿಯಮ್ ಪ್ರಮಾಣವು ಸಮೃದ್ಧವಾಗಿ ಇರುತ್ತದೆ. ನಿಯಮಿತವಾಗಿ ಇದನ್ನು ಸೇವಿಸುವುದರ ಮೂಲಕ ಕ್ಯಾಲ್ಸಿಯಮ್ ಸಮಸ್ಯೆಯನ್ನು ನಿವಾರಿಸಬಹುದು. ಇದು ಗಂಟಲಿನ ಸೋಂಕನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೊಟ್ಟೆಯುಬ್ಬರ ಅಥವಾ ವಾಯು ಸಮಸ್ಯೆ ಗಳನ್ನು ಸುಲಭವಾಗಿ ನಿವಾರಿಸುವುದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.

Related Articles

Leave a Reply

Your email address will not be published. Required fields are marked *

Back to top button