ನಿನ್ನನ್ನು ಯಾರೇ ನೋಯಿಸಲಿ ತಪ್ಪದೇ 2 ಕೆಲಸ ಮಾಡು

ಈ ಸಮಾಜವೇ ಒಂದು ವಿಚಿತ್ರ ಮಾತಾಡಿದರೆ ಮಾತಲ್ಲಿರುವ ತಪ್ಪನ್ನು ಹುಡುಕುತ್ತಾರೆ ಮೌನಿಯಾದರೆ ನಿನ್ನನ್ನೇ ತಪ್ಪಾಗಿ ಬನ್ನಿಸುತ್ತಾರೆ.ಇಂತಹ ಸಮಾಜದಲ್ಲಿ ನಾವು ಹೇಗೆ ಇರಬೇಕು ಅಂದ್ರೆ ಇನ್ನೊಬ್ಬರ ಬಗ್ಗೆ ತಲೆಕೆಡಿಸಿಕೊಳ್ಳದೆ ನಮ್ಮ ಜೀವನ ನಾವು ನೋಡಿಕೊಂಡರೆ ಅದೇ ಒಂದು ದೊಡ್ಡ ಸಾಧನೆ ಡಾಕ್ಟರ್ ಎಪಿಜೆ ಅಬ್ದುಲ್ ಕಲಾಂ ಸಾಹೇಬರ ಪ್ರಕಾರ ಯಾವುದೇ ಮನುಷ್ಯ ಜೀವನದಲ್ಲಿ ಯಶಸ್ವಿಯಾಗಬೇಕಾದರೆ
ಅವನ ನಿರ್ಧಾರ ಬಲವಾಗಿರಬೇಕು.ಅವನ ನಿರ್ಧಾರವು ಬಲವಾಗಿದ್ದರೆ ವಿಫಲತೆ ಅನ್ನೋದು ಅವನ ಹತ್ತಿರಕೂಡ ಸುಳಿಯಲು ಸಾಧ್ಯವಿಲ್ಲ ಅಂತ ಹೇಳ್ತಾರೆ.ನಿನ್ನ ಗುರಿಯನ್ನು ಸಾಧಿಸುವ ಮುಖ್ಯ ಘಟ್ಟದಲ್ಲಿ ಕೆಲವರು ನಿನ್ನನ್ನ ತಡೆಯಲು ಪ್ರಾರಂಭಿಸುತ್ತಾರೆ.ಯಾಕಂದ್ರೆ ನೀನು ಗೆಲ್ಲುವುದು ಅವರಿಗೆ ಸ್ವಲ್ಪನು ಇಷ್ಟ ಇರಲ್ಲ ಅದಕ್ಕೆ ಅವರು ಮೊದಲು ನಿನ್ನ ಕಾಲನ್ನು ಎಳೆಯುವ ಕೆಲಸ ಮಾಡುತ್ತಾರೆ.
ನಂತರ ನೀನು ಅದುಕ್ಕು ಜಗ್ಗದೇ ಇದ್ದಾಗ ನಿನ್ನನ್ನ ಅವಮಾನ ಮಾಡೋದಿಕ್ಕೆ ಸ್ಟಾರ್ಟ್ ಮಾಡ್ತಾರೆ.ಹೆಜ್ಜೆ ಹೆಜ್ಜೆಗೂ ನಿನ್ನನ್ನು ಅವಮಾನ ಮಾಡ್ತಾನೆ ಸಾಗುತ್ತಾರೆ ಇಂತಹ ಘಟನೆಗಳು ಸಾಧಿಸುತ್ತೇನೆ ಎಂದು ಹೊರಡುವ ಪ್ರತಿಯೊಬ್ಬರಲ್ಲೂ ಕಾಡ್ತಾನೆ ಇರುತ್ತೆ ಅಂಥವರಿಗಾಗಿ ಕಲಾಂ ಸಾಹೇಬರು ಕೆಲವು ಮಾತುಗಳನ್ನು ಹೇಳುತ್ತಾರೆ ಅವುಗಳಲ್ಲಿ ಪ್ರಮುಖವಾಗಿ ಈ ಎರಡು ಕೆಲಸ ಮಾಡಿದರೆ ಸಾಕು.ನಿನ್ನನ್ನ ಯಾರೇ ಅವಮಾನ ಮಾಡಿದರೂ ನಿನ್ನನ್ನು ಯಾರೇ ನೋಯಿಸಿದರೂ
ನಿನ್ನ ಗೆಲುವನ್ನ ಕಸಿದುಕೊಳ್ಳಲು ಯಾರ ಕೈಯಿಂದನು ಸಾಧ್ಯವಿಲ್ಲ.1) ನಿನ್ನ ಕೆಲಸ ನೀನು ಮಾಡುತ್ತ ಇರು ಮುಂದಿಟ್ಟ ಹೆಜ್ಜೆ ಯಾವುದೇ ಕಾರಣಕ್ಕೂ ಹಿಂದೆ ಇಡಬೇಡ ಕಲಾಂ ಸಾಹೇಬರು ಒಂದು ಮಾತನ್ನು ಹೇಳುತ್ತಾರೆ ಅದೃಷ್ಟದ ಮೇಲೆ ನಂಬಿಕೆ ಇರಬೇಡ.ನಿನ್ನ ಮೇಲೆ ನೀನು ನಂಬಿಕೆ ಇಡು.ನಿನ್ನ ಆತ್ಮ ಬಲದ ಮೇಲೆ ನಂಬಿಕೆ ಇಡು ನಿನ್ನ ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡು ಯಶಸ್ಸು ತಾನಾಗಿಯೇ ನಿನಗೆ ಸಿಕ್ಕೆ ಸಿಗುತ್ತೆ.
ಯಾರೆ ನಿನ್ನನ್ನು ಅವಮಾನಿಸಲಿ ನಿಂದಿಸಲಿ ನೀನು ಮಾತ್ರ ಮುಂದಿಟ್ಟ ಹೆಜ್ಜೆ ಹಿಂದಿಡಬೇಡ ಅಂತ ಕಲಾಂ ಸಾಹೇಬರು ಹೇಳ್ತಾರೆ.ಒಮ್ಮೆ ನೀನು ನಿನ್ನ ಕೆಲಸದ ಮೇಲೆ ಗಮನ ಇಟ್ಟು ಕೆಲಸ ಮಾಡಿದರೆ ನಿನಗೆ ಗೆಲುವು ಶತಸಿದ್ಧ.ನಿನ್ನ ಗೆಲುವನ್ನ ಅವರು ನೋಡಿದರೆ ಅವರು ನಿನ್ನನ್ನು ಅವಮಾನಿಸುವದಿರಲಿ ನಿನ್ನ ಮುಖ ಕೂಡ ನೋಡೋದಕ್ಕೆ ಭಯ ಪಡ್ತಾರೆ.
2) ಅವಮಾನಿಸುವವರು ಅವಮಾನಿಸಲಿ ನೀನು ಮಾತ್ರ ಎಲ್ಲರನ್ನೂ ಕಡೆಗಣಿಸು.ಒಂದು ಮಾತಿದೆ ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ ಅಂತ.ಅದು ನಿನ್ನನ್ನ ಹೆಜ್ಜೆ ಹೆಜ್ಜೆಗೂ ಅವಮಾನಿಸುತ್ತಾರಲ್ಲ ಅಂತವರನ್ನು ನೋಡಿಯೇ ಹೇಳಿರಬೇಕು.ಬದುಕು ಎಷ್ಟೇ ಕಷ್ಟ ಎನಿಸಿದರೂ ಬದುಕಲೇಬೇಕು.ನಿನಗಾಗಿ ಅಲ್ಲದಿದ್ದರೂ ನಿನ್ನವರಿಗಾಗಿ ನಿನ್ನ ಕನಸುಗಳಿಗಾಗಿ ನಿನ್ನ ಜವಾಬ್ದಾರಿಗಳಿಗಾಗಿ ಬದುಕಲೇಬೇಕು.
ಇಲ್ಲಿ ಯಾರೂ ನಿನ್ನ ಕಣ್ಣೀರನ್ನು ಗಮನಿಸುವುದಿಲ್ಲ ಯಾರೂ ನಿನ್ನ ಕಷ್ಟಗಳನ್ನು ನೋಡುವುದಿಲ್ಲ ಯಾರೂ ನಿನ್ನ ಸಂಕಷ್ಟಗಳನ್ನು ಕೇಳೋದಿಲ್ಲ.ನಿನ್ನ ಶಕ್ತಿ ಏನು ಅಂತ ನೀನು ಅಂತಹ ಜನರಿಗೆ ತೋರಿಸಿಕೊಡು.ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮ ಸೋಲು ಎಂಬ ರೋಗವನ್ನು ಕೊಲ್ಲುವುದಕ್ಕೆ ಅತ್ಯುತ್ತಮ ಔಷಧಿಗಳಾಗಿವೆ.ಅವು ನಿನ್ನನ್ನ ಪ್ರಪಂಚದಲ್ಲಿ ಉತ್ತಮ ವ್ಯಕ್ತಿಯನ್ನುನ್ನಾಗಿ ಮಾಡುತ್ತೆ.ಇತರರಿಗಾಗಿ ನಿನ್ನ ಸ್ವಂತಿಕೆಯನ್ನು ಬಿಟ್ಟು ಕೊಡಬೇಡ ಯಾಕಂದ್ರೆ ಈ ಪ್ರಪಂಚದಲ್ಲಿ ನಿನ್ನ ಪಾತ್ರವನ್ನು ನಿನಗಿಂತ ಚೆನ್ನಾಗಿ ನಿಭಾಯಿಸುವದಕ್ಕೆ ಯಾರ ಕೈಯಿಂದನು ಸಾಧ್ಯವಿಲ್ಲ.