ಕಷ್ಟಗಳಿಗೆ ಹೆದರಬೇಡ…
ಕಷ್ಟಗಳು ಬಂದಿವೆ ಅಂತ ಇಷ್ಟಪಟ್ಟಿದ್ದನ್ನು ಬಿಡಬೇಡ.ಇವತ್ತಿನ ದಿನ ನಿನ್ನದು ಕಷ್ಟಕರವಾಗಿರಬಹುದು ಆದರೆ ಮುಂದಿನ ದಿನಗಳು ನಿನಗೆ ಅತ್ಯುತ್ತಮವಾಗಿರಲಿವೆ.ಅದಕ್ಕೋಸ್ಕರ ನೀನು ಇಂದಿನ ಕಷ್ಟಗಳಿಗೆ ಯಾವತ್ತೂ ಹೆದರಬೇಡ ನಿನ್ನ ಕಷ್ಟಗಳಿಗೆ ವರವಾಗಿ ನಿಲ್ಲು ಗಟ್ಟಿಯಾಗಿ ನಿಲ್ಲು ಅವೆಲ್ಲವನ್ನ ಪುಡಿ ಪುಡಿ ಮಾಡು.
ಏನೇ ಆಗಲಿ ನಿನ್ನ ಗುರಿಯನ್ನು ಮುಟ್ಟುವವರೆಗೂ ಯಾವುದೇ ಕಾರಣಕ್ಕೂ ನೀನು ಜಗ್ಗಬೇಡ.ನಿನ್ನ ಕಷ್ಟಗಳಿಗೆ ಎಂದಿಗೂ ಹೆದರಬೇಡ ಅಂತ ಡಾ. ಎಪಿಜೆ ಅಬ್ದುಲ್ ಕಲಾಂ ಸಾಹೇಬ್ರು ಹೇಳ್ತಾರೆ.ಯಾರು ನಿನ್ನನ್ನು ತಡೆಯುತ್ತಿದ್ದಾರೆ ಯಾರು ನಿನಗೆ ನಿನ್ನ ಮೋಸದಿಂದ ಕಾಲನ್ನ ಎಳೆಯುತ್ತಿದ್ದಾರೆ.
ಈ ಮಾತನ್ನ ಯಾವತ್ತೂ ಮರೆಯಬೇಡ ಒಳ್ಳೆಯ ವ್ಯಕ್ತಿಗೆ ಮೋಸ ಮಾಡುವುದು ಅಂದ್ರೆ ಕೈಯಲ್ಲಿರೋ ವಜ್ರವನ್ನು ಎಸೆದು ಕಲ್ಲನ್ನ ಎತ್ತಿಕೊಂಡಂತೆ.ನಿನ್ನ ಒಳ್ಳೆಯತನಕ್ಕೆ ಬೆಲೆ ಇಲ್ಲ ಅಂದಮೇಲೆ ಆ ಜಾಗದಲ್ಲಿ ನೀನು ಹಾಕಿಕೊಳ್ಳುವ ಚಪ್ಪಲಿಯನ್ನು ಕೂಡ ಬಿಡಬಾರದು.ಈ ಪ್ರಪಂಚದಲ್ಲಿ ನಿನ್ನ ಭಯಕ್ಕೆ ಜಾಗವಿಲ್ಲ ಕೇವಲ ಶಕ್ತಿಯು ಶಕ್ತಿಯನ್ನು ಗೌರವಿಸುತ್ತೆ.
ನಿನ್ನನ್ನ ದ್ವೇಷಿಸುವವರನ್ನು ನೀನು ಯಾವತ್ತೂ ದ್ವೇಷಿಸ್ಟೇಡ ಯಾಕಂದ್ರೆ ಅವರಿಗಿಂತ ಉತ್ತಮ ವ್ಯಕ್ತಿ ನೀನೆ ಎಂದು ಅವರಷ್ಟೇ ತಿಳಿದಿರುತ್ತಾರೆ.ನಿನ್ನ ವಿಚಾರಗಳೇ ನಿನ್ನ ಮೂಲವಾದ ಬಂಡವಾಳ ಮತ್ತು ಅದೇ ನಿನ್ನ ಆಸ್ತಿ ಅದೇ ನಿನ್ನ ಶಕ್ತಿ ಅದೇ ನಿನ್ನ ಯುಕ್ತಿ.ನಿನ್ನ ಯೋಚನೆಗಳೇ ನಿನ್ನ ಆಲೋಚನೆಗಳೇ ನಿನ್ನನ್ನ ಉನ್ನತ ಸ್ಥಾನಕ್ಕೆ ಕರ್ಕೊಂಡು ಹೋಗುತ್ತೆ.
ಒಳ್ಳೆಯ ಜನ ನಿನಗೆ ಸಂತೋಷವನ್ನು ಕೊಟ್ರೆ ಕೆಟ್ಟ ಜನಗಳು ನಿನಗೆ ಅನುಭವವನ್ನು ಕೊಡುತ್ತಾರೆ ಎಂಬುದನ್ನು ನಿನ್ನ ಜೀವನದಲ್ಲಿ ನೀನು ಯಾವತ್ತೂ ಕೂಡ ಮರಿಬೇಡ.ಸಕ್ಸಸ್ ಎಂಬ ವಾಹನವನ್ನು ಚಲಾಯಿಸಬೇಕಾದರೆ ಅದಕ್ಕೆ ಹಾರ್ಡ್ ವರ್ಕ್ ಎಂಬ ಚಕ್ರ ಮತ್ತು ಆತ್ಮವಿಶ್ವಾಸ ಎಂಬ ಇಂಧನ ಬೇಕು ಆಗ ಮಾತ್ರ ನಿನ್ನ ವಾಹನ ಚಲಿಸುತ್ತೆ.ಕಠಿಣವಾದ ಕೆಲಸಗಳು ಅಸಾಧ್ಯವೆಂದಲ್ಲ ಕಠಿಣವಾದ ಕೆಲಸಗಳಿಗೆ ಹೆಚ್ಚು ಕಷ್ಟ ಪಡಬೇಕಾಗುತ್ತದೆ.
ಆದರೆ ಒಂದು ಸಲ ನೀನು ಸ್ವಲ್ಪ ಜವಾಬ್ದಾರಿ ತಗೊಂಡು ಕಷ್ಟಪಟ್ಟು ಕೆಲಸ ಮಾಡಿದ್ದೆ ಆದಲ್ಲಿ ನಿನ್ನ ಜೀವನದಲ್ಲಿ ನೀನು ಶಾಶ್ವತವಾಗಿ ಸಕ್ಸಸ್ ಅಲೆಯಲ್ಲಿ ತೇಲಾಡ್ತಾ ಇರುತ್ತೀಯ.ದೀಪ ಮಾತಾಡೋದಿಲ್ಲ ಆದ್ರೆ ಅದರ ಬೆಳಕು ದೀಪದ ಪರಿಚಯ ಮಾಡಿಸುತ್ತೆ.ಅದೇ ರೀತಿ ನೀನು ನಿನ್ನ ಬಗ್ಗೆ ಏನು ಹೇಳಬೇಡ ಒಳ್ಳೆ ಕೆಲಸ ಮಾಡ್ತಾ ಇರೋ ಅದೇ ಇಡಿ ಜಗತ್ತಿಗೆ ನಿನ್ನನ್ನ ಪರಿಚಯ ಮಾಡಿಸುತ್ತೆ.
ಮನಸಿಟ್ಟು ಕಲಿತ ಅಕ್ಷರ ಕಷ್ಟಪಟ್ಟು ದುಡಿದು ತಿನ್ನುವ ಅನ್ನ ಕಷ್ಟಪಟ್ಟು ಗಳಿಸಿದ ಸಂಪಾದನೆ ಇಷ್ಟದಿಂದ ಮಾಡುವ ದೈವಭಕ್ತಿ ಯಾವತ್ತು ಯಾರನ್ನು ಯಾವುದೇ ಕಾರಣಕ್ಕೂ ಕೈಬಿಡುವುದಿಲ್ಲ.ನೀನು ತಪ್ಪು ಮಾಡಿದಾಗ ಅದನ್ನು ಮುಜುಗರವಿಲ್ಲದೆ ಒಪ್ಪಿಕೊಂಡು ಸರಿಯಾದ ದಾರಿಯಲ್ಲಿ ನಡೆಯುವುದನ್ನು ಕಲಿ ಆಗ ಮಾತ್ರ ನಿನಗೆ ಸಕ್ಸಸ್ ಸಿಗುವುದು.ನಿಮ್ಮ ಅನಿಸಿಕೆ ನಮಗೆ ತಿಳಿಸಿ ಲೈಕ್ ಮತ್ತು ಶೇರ್ ಮಾಡಿ.