ASTROLOGY

ದಿನ ಭವಿಷ್ಯ

ಮೇಷ ರಾಶಿ ಅಧಿಕಾರಿಗಳ ಮುಖಸ್ತುತಿಯಿಂದ ಕೆಲಸಗಳು ಆಗುತ್ತದೆ ಎಂದು ಭಾವಿಸಿದ್ದರೆ ಆಯೋಚನೆಯನ್ನು ಕೈಬಿಡಿ.ಖರ್ಚುಕಡಿಮೆ ಗಳಿಕೆ ಹೆಚ್ಚಿರುವುದ ರಿಂದ ಸಂಪಾದನೆಯ ಹೆಚ್ಚಿನದ್ದನ್ನು ಉಳಿಸಬಹುದು.ಸಮಾಜದಲ್ಲಿ ಬೆರೆಯುವುದರಿಂದ ಅಥವಾ ಅಕ್ಕ-ಪಕ್ಕದವರಲ್ಲಿ ಮಾತನಾಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನುಕೂಲವಾಗುವುದು.ವೃಷಭ ರಾಶಿ ಉದ್ಯೋಗಾಪೇಕ್ಷಿಗಳು ಇಷ್ಟ ಕ್ಷೇತ್ರದಲ್ಲಿ ಕೆಲಸ ಹೊಂದುವುದರಿಂದ ಲೀಲಾಜಾಲವಾಗಿ ಉತ್ತಮ ಹೆಸರು ಪಡೆಯುವಿರಿ. ಸಂಬಂಧಗಳನ್ನು ಗಟ್ಟಿ ಪಡಿಸುವಲ್ಲಿ ಸ್ವಗೃಹದಲ್ಲಿಯೇ ಕಾರ್ಯಕ್ರಮಗಳನ್ನು ನಡೆಸಲು ಯೋಚಿಸಿ.ಸಂಘ ಸಂಸ್ಥೆಯ ಜವಾಬ್ದಾರಿಯಿಂದ ಸದ್ಯಕ್ಕೆ ವಿಮುಖರಾಗಬೇಡಿ

ಮಿಥುನ ರಾಶಿ ಮನೋಬಲವು ಹೆಚ್ಚಿರುವುದರಿಂದ ದೈಹಿಕವೈಕಲ್ಯತೆಯು ಅಡ್ಡಿ ಪಡಿಸುವುದಿಲ್ಲ.ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಿಕೊ ಳ್ಳಲು ಉತ್ತಮ ವ್ಯಕ್ತಿಯನ್ನು ಸ್ನೇಹಿತರಿಂದ ತಿಳಿಯಬಹುದು.
ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸಾಂಸಾರಿಕ ವಿಚಾರದಲ್ಲಿ ಬೇರೆಯವರ ಸಲಹೆಗಳನ್ನು ಕಡೆಗಣಿಸುವುದು ಮತ್ತು ಬೇರೆಯವರ ಕುಟುಂಬದ ಹೋಲಿಕೆಯನ್ನು ಕುಟುಂಬಕ್ಕೆ ತೆಗೆದುಕೊಳ್ಳದೇ ಇರುವುದು ಒಳ್ಳೆಯದು.ಕರ್ಕಾಟಕ ರಾಶಿ ಇಂದಿನ ಮುಖ್ಯಗಣ್ಯರ ಭೇಟಿಯಲ್ಲಿ ನಿಮ್ಮ ಉಡುಗೆ ತೊಡುಗೆಗಳು ಹೆಚ್ಚಿನ ಪ್ರಾಮುಖ್ಯತೆ ಹೊಂದುತ್ತದೆ. ಅಂತರಾತ್ಮದ ಮಾತನ್ನು ಕೇಳುವುದರಿಂದ ಶ್ರೇಯಸ್ಸು ಉಂಟಾಗುತ್ತದೆ.ಸಣ್ಣಕೈಗಾರಿಕೆ ಉದ್ಯಮಿಗಳಿಗೆ ಲಾಭವಿದೆ.ಎಲ್ಲದರಿಂದಲೂ ಧನಲಾಭವನ್ನು ಮಾತ್ರ ಯೋಚಿಸಬೇಡಿ.

ಸಿಂಹ ರಾಶಿ ಹತಾಶೆಯಿಂದಾಗಿ ಮನಸ್ಸು ಅಧ್ಯಾತ್ಮದ ಕಡೆಗೆ ಎಳೆಯುತ್ತದೆ. ವಾಸ್ತವವಾಗಿ ಕಚೇರಿಯಲ್ಲಿರುವ ವಿಷಯಗಳು ಹಾಗೂ ನಿಮ್ಮನ್ನು ತಲುಪುತ್ತಿರುವ ವಿಚಾರಗಳ ನಡುವೆ ಇರುವ ವ್ಯತ್ಯಾಸವು ನಿಮಗೆ ತಿಳಿಯುತ್ತದೆ.ಉನ್ನತ ವಾಣಿಜ್ಯ ಶಿಕ್ಷಣ ವಿದ್ಯಾರ್ಥಿಗಳಿಗೆ ಪರಿಶ್ರಮದಿಂದ ಯಶಸ್ಸಿನ ಸಾಧ್ಯತೆ ದೀರ್ಘಕಾಲೀನ ಯೋಜನೆಗಳು ಫಲದಾಯಕವಾಗಿ ವೃತ್ತಿಪರರಿಗೆ ಕಾರ್ಯರಂಗದಲ್ಲಿ ಪ್ರಗತಿ ಗುರಿ ಸಾಧಿಸುವಲ್ಲಿ ಕೆಲಸ ಪೂರ್ಣಗೊಳಿಸುವಿರಿ.ಕನ್ಯಾ ರಾಶಿ ರಾಸಾಯನಿಕ ವಸ್ತುಗಳ ಉತ್ಪಾದನೆಯಲ್ಲಿ ಕೆಲಸ ನಡೆಸುತ್ತಿರುವವರು
ಅವಘಡಗಳಿಂದ ಜಾಗರೂಕರಾಗಿರಿ.ರಾಜಕೀಯ ಧುರೀಣರು ಹೆಚ್ಚು ತಿರುಗಾಟಗಳನ್ನು ಮಾಡಬೇಕಾಗುತ್ತದೆ, ಸ್ಟೀಲ್ ವ್ಯಾಪಾರಿಗಳಿಗೆ ಲಾಭವಾಗುವುದು.

ತುಲಾ ರಾಶಿ ರೈತಾಪಿ ವರ್ಗದವರಿಗೆ ಉಸಿರುಗಟ್ಟಿಸುವಂತಹಸಂದರ್ಭವಿದ್ದಲ್ಲಿ ಅದನ್ನು ನಿವಾರಿಸಲು ಸರಿಯಾದ ಸಮಯದಲ್ಲಿ ಸ್ನೇಹಿತರೊಬ್ಬರು ಬರುವವರಿ ದ್ದಾರೆ. ವರ್ಚಸ್ಸನ್ನು ವೃದ್ಧಿಸಿಕೊಳ್ಳಲು ಸಂವಾದದಲ್ಲಿ ಉತ್ತಮ ಭಾಷೆ ಬಳಸಿ. ಭೇಟಿ ಮಾಡುವ ವ್ಯಕ್ತಿಯ ಸಾಂಗತ್ಯ ಸಾರ್ಥಕಎನಿಸುವುದು.ಮನೆ ನಿರ್ಮಾಣ ಮಾಡುವ ಅಥವಾ ನವೀಕರಿಸುವಂತಹ ಆಲೋಚನೆಯಲ್ಲಿ ತೊಡಗುವಿರಿ. ವೃಶ್ಚಿಕ ರಾಶಿ ನಿಮ್ಮದೇ ಸಂಸ್ಥೆಯಲ್ಲಿ ನಿಮ್ಮಕೈಕೆಳಗೆ ಕೆಲಸ ಮಾಡುತ್ತಿದ್ದ ವ್ಯಕ್ತಿ ಹೊಸ ಸಂಸ್ಥೆಯ ಸ್ಥಾಪನೆ ಮಾಡಿದ್ದನ್ನು ನೋಡಿ ಅಸೂಯೆ ಪಡಬೇಡಿ. ನಿಮಗೆ ಮರೆತೆ ಹೋಗಿರುವ ಹಳೆಯ ಸಣ್ಣ ಹೂಡಿಕೆಯಿಂದ ಲಾಭ ಹೊಂದುವಿರಿ.ಸಾಂಸಾರಿಕ ಸ್ಥಿತಿಗತಿ ಉತ್ತಮವಾಗಿರುತ್ತದೆ

ಧನು ರಾಶಿ ಯಶಸ್ಸನ್ನು ಹೊಂದಲು ಅನುಸರಿಸುತ್ತಿರುವ ಹಳೆ ದಾರಿಯನ್ನು ಬಿಟ್ಟು ಹೊಸ ಮಾರ್ಗವನ್ನು ಕಂಡುಹಿಡಿದುಕೊಳ್ಳಬೇಕು. ಸರ್ಕಾರಿ ಹುದ್ದೆಯಲ್ಲಿದ್ದು ಉನ್ನತ ಮಟ್ಟದ ಪದನಿಗೆ ಪ್ರಯತ್ನ ಪಡುತ್ತಿರುವವರಿಗೆ ಶುಭವಾಗುವುದು.
ಜಾಹೀರಾತುಗಳ ಮೂಲಕ ವಹಿವಾಟನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವ ಮಾಡಬಹುದು. ವಿಮರ್ಶಿಕೊಳ್ಳಬೇಕಾದ ಸ್ಥಿತಿ ಬರಲಿದೆ.
ಮಕರ ರಾಶಿ ಮನೆಯಲ್ಲಿ ಸಣ್ಣ ಪ್ರಮಾಣದ ಕಲಹಕ್ಕೆ ಕಾರಣರಾದಿರಿ ಎಂದುದುಃ- ಬಿಸುವಂತಾಗುತ್ತದೆ. ವೈದ್ಯಕೀಯ ಹಾಗೂ ಎಂಜಿನಿಯರ್ ಕ್ಷೇತ್ರಗಳಿಗೆ ಹೋಗ ಬೇಕೆಂದು ಬಯಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರು ಸಿಗಲಿದ್ದಾರೆ.ಇತಿಮಿತಿಯ ಬಗ್ಗೆ ಮೇಲಿನ ಅಧಿಕಾರಿಗಳು ಅರಿವು ಮೂಡಿಸುವರು.
ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಿ.

ಕುಂಭ ರಾಶಿ ತಿಳಿದೂ ತಿಳಿದೂ ಮಾಡಿದ ತಪ್ಪಿಗೆ ತುಂಬಾ ವ್ಯಥೆ ಪಡುತ್ತೀರಿ. ಕ್ಷಮೆಗಾಗಿ ಬಹಳ ಪ್ರಯತ್ನ ಪಡುತ್ತೀರಿ, ಹತ್ತಿ ಮಾರಾಟಗಾರರಿಗೆ ಲಾಭ.ಸಾಕುಪ್ರಾಣಿಯ ಅನಾರೋಗ್ಯವು ಪೀರ ಬೇಸರಪಡಿಸುವ ಸಾಧ್ಯತೆ ಇದೆ.
ಗೆಳೆಯರ ಸವಾಲಿನಲ್ಲಿ ಸದಾ ವಿಜಯ ನಿಮ್ಮದೇ ಆದ್ದರಿಂದ ಬೇಸರವಿಲ್ಲದೇ ಸಂತಸದಿಂದಿರುವಿರಿ.
ಮೀನ ರಾಶಿ ಯಾವುದೋ ಕಾರಣದಿಂದ ದೂರವಾದ ಸ್ನೇಹಿತ ಮತ್ತೆ ಪಾಣಸ್ನೇಹಿತ ನಾಗಿ ಮರಳಲಿದ್ದಾನೆ.ಆತುರಗತಿಯಲ್ಲಿ ಓಡುವಯೋಚನೆಗೆ ಕಡಿವಾಣ ಹಾಕಿ. ಪದವಿ ಶಿಕ್ಷಕರು ವಿದ್ಯಾರ್ಥಿಗಳ ಕಡೆಯಿಂದ ಹೊಗಳಿಕೆ ಮಾತನ್ನು ಕೇಳುವಿರಿ.
ಅನಿರೀಕ್ಷಿತವಾಗಿ ತೋರಿಬರುವ ಅಡ್ಡಿ ಆತಂಕಗಳಿಗೆ ಧೈರ್ಯಗೆಡದಿರಿ ದೇವಾ ಅನುಗ್ರಹ ಉತ್ತಮಗಿದೆ.
ಕಾರ್ಯವೈಖರಿ ಲಾಭಕರವಾಗಿ ಮೂಡಿ ಬರುತ್ತದೆ. ಹಾಕಿದ ಯೋಜನೆಗಳು ಸಫಲವಾಗಲಿವೆ.

Related Articles

Leave a Reply

Your email address will not be published. Required fields are marked *

Back to top button