ರಚಿತರಾಮ್ ಒಬ್ಬ ಆಟೋ ಚಾಲಕನನ್ನು ಹುಡುಕುತ್ತಿದ್ದಾರೆ ಅಂತೇ ಯಾಕೆ ಗೊತ್ತಾ…!!!!
ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿರುವಂತಹ ನಟಿಯರಲ್ಲಿ ರಚಿತಾ ರಾಮ್ ಅವರು ಕೂಡ ಒಬ್ಬರು ಇವರು ಬುಲ್ಬುಲ್ ಚಲನ ಚಿತ್ರದಿಂದ ಸ್ಯಾಂಡಲ್ವುಡ್ಗೆ ಎಂಟ್ರಿ ನೀಡಿದ್ದರು ಆ ನಂತರ ಸ್ಯಾಂಡಲ್ವುಡ್ನಲ್ಲಿ ಭಾರಿ ಸದ್ದು ಮಾಡಿದ ಈ ಒಬ್ಬ ನಟಿ ಡಿಂಪಲ್ ಕ್ವೀನ್ ಅಂತಾನೇ ಪ್ರಸಿದ್ಧರಾದರೂ ಹಾಗೆ ಈ ಡಿಂಪಲ್ ಕ್ವೀನ್ ಅದೆಂತಹ ಲಕ್ಕಿ ಅಂದರೆ ಇವರು ಮಾಡಿದ ಚಲನಚಿತ್ರ ಎಲ್ಲವೂ ಕೂಡ ಹಿಟ್ ಆಗಿವೆ.
ಕೆಲವರು ಅದನ್ನು ಹೇಳ್ತಾರೆ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಲಕ್ಕಿ ಆಕ್ಟ್ರೆಸ್ ಅಂತ ಕೂಡ. ಇಂದಿನ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡಲು ಬಂದಿರುವುದು ಏನು ಅಂದರೆ, ಯಾಕೆ ರಚಿತಾ ರಾಮ್ ಅವರು ಆ ಆಟೊ ಚಾಲಕನನ್ನು ಹುಡುಕುತ್ತಿದ್ದಾರೆ ಅವರಿಗಾಗಿ ಯಾಕೆ ಇಷ್ಟು ಪರಿತಪಿಸುತ್ತಿದ್ದಾರೆ ಅನ್ನೋ ಒಂದು ವಿಚಾರವನ್ನು ತಿಳಿಸಿಕೊಡಲು.ಹೌದು ಸದ್ಯಕ್ಕೆ ರಚಿತಾ ರಾಮ್ ಅವರು ಆ ಆಟೊ ಚಾಲಕನಿಗಾಗಿ ಹುಡುಕುತ್ತಿದ್ದಾರೆ ಯಾಕೆ ಅಂತ ಕೇಳಿದರೆ ನಿಮಗೂ ಕೂಡ ನಿಜಕ್ಕೂ ಅಚ್ಚರಿಯಾಗುತ್ತದೆ ರಚಿತ ರಾಮ್ ಅವರ ಮೇಲೆ ಅಭಿಮಾನ ಇನ್ನೂ ಕೂಡ ಹೆಚ್ಚುತ್ತದೆ, ರಚಿತಾ ರಾಮ್ ಅವರು ಮೊನ್ನೆ ದಿವಸ ಒಬ್ಬ ಅಭಿಮಾನಿಯನ್ನು ತಮ್ಮ ಮನೆಯ ಬಳಿ ಭೇಟಿಯಾಗಿದ್ದರೂ.
ಸಿನಿಮಾ ಆತ ರಚಿತಾ ರಾಮ್ ಅವರ ಮನೆಯ ಬಳಿ ಬಂದ ಕಾರಣವೇನು ಅಂದರೆ ತಮ್ಮ ಆಟೋ ಮೇಲೆ ಮೊದಲ ಆಟೋಗ್ರಾಫ್ ರಚಿತಾರಾಮ್ ಅವರದ್ದೇ ಆಗಿರಬೇಕು ಮತ್ತು ಅವರ ಕೈಯಾರೆ ಅವರ ಫೋಟೋವನ್ನು ಆಟೋ ಮೇಲೆ ಅಂಟಿಕೊಳ್ಳುವುದಕ್ಕೆ ಈ ಅಭಿಮಾನಿಗಳು ರಚಿತಾ ರಾಮ್ ಅವರ ಮನೆಯ ಬಳಿ ಹೋಗಿದ್ದರು.ರಚಿತಾ ರಾಮ್ ಅವರ ತಾಯಿ ಅವರಿಗೆ ಕರೆದು ಹೇಳಿದಾಗಲೇ ಅವರಿಗೆ ಈ ವಿಚಾರ ತಿಳಿದಿದ್ದು ಅವರನ್ನು ಮೂವರು ಅಭಿಮಾನಿಗಳು ಹುಡುಕಿಕೊಂಡು ಬಂದಿದ್ದು, ಹೊಸ ಆಟೊ ಮೇಲೆ ಆಟೋಗ್ರಾಫ್ ಅನ್ನು ರಚಿತಾ ರಾಮ್ ಅವರಿಂದ ಹಾಕಿಸಿಕೊಂಡು ಅವರೊಂದಿಗೆ ಸೆಲ್ಫಿಯನ್ನು ಕೂಡ ತೆಗೆದುಕೊಂಡು ಗಿಫ್ಟ್ ಒಪನ್ ಮಾಡಿಸಿ ಆ ಫೋಟೋವನ್ನು ಆಟೋ ಮೇಲೆ ಅಂಟಿಸಿಕೊಂಡು ಕೂಡ ಹೋಗಿದ್ದಾರಂತೆ.
ಅಣ್ಣಾವ್ರು ಹೇಳಿರುವ ಹಾಗೆ ನಟ ನಟಿಯರಿಗೆ ಅಭಿಮಾನಿಗಳೇ ದೇವರಾಗಿರುತ್ತಾರೆ, ಹಾಗೆ ರಚಿತಾ ರಾಮ್ ಅವರನ್ನು ಇಷ್ಟಪಡುವ ಅಭಿಮಾನಿಗಳು ತಾವು ಇಷ್ಟಪಡುವ ರಚಿತಾ ಅವರ ಆಟೋಗ್ರಾಫ್ ಅನ್ನು ಆಟೋ ಮೇಲೆ ಹಾಕಿಸಿಕೊಳ್ಳಬೇಕೆಂದು ಆಟೊವನ್ನು ಕೊಂಡುಕೊಂಡ ದಿನವೇ ರಚಿತಾರಾಮ್ ಅವರ ಮನೆಯ ಬಳಿ ಹೋಗಿ ಅವರೊಂದಿಗೆ ಸೆಲ್ಫಿ ತೆಗೆದು ಅವರ ಆಟೋಗ್ರಾಫ್ ಅನ್ನು ಆಟೋ ಮೇಲೆ ಹಾಕಿಸಿಕೊಂಡಿದ್ದಾರೆ.