ಗಣೇಶ ಚತುರ್ಥಿ 2023 18 ಸೆಪ್ಟೆಂಬರ್ ಗಣಪತಿಸ್ಥಾಪನೆ ಮಾಡುವ ಮುನ್ನ ವಿಷಯಗಳನ್ನು ನೆನಪಿಡಿ
ಗಣೇಶ ಚತುರ್ಥಿ 2023 18 ಸೆಪ್ಟೆಂಬರ್ ಗಣಪತಿಸ್ಥಾಪನೆ ಮಾಡುವ ಮುನ್ನ ವಿಷಯಗಳನ್ನು ನೆನಪಿಡಿ.ನಿಮ್ಮೆಲ್ಲರಿಗೂ ಸ್ವಾಗತ ಗಣೇಶ ಮೂರ್ತಿಯ ಸ್ಥಾಪನೆ ಸಮಯದಲ್ಲಿ ತಪ್ಪ ದೇ ಈ ವಿಷಯಗಳನ್ನು ನೆನಪಿನಲ್ಲಿಟ್ಟು ಕೊಳ್ಳಿ. ಹಾಗಾದರೆ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟು ಕೊಳ್ಳಬೇಕು ಎಂಬ ಮಾಹಿತಿಯನ್ನು ತಿಳಿಯೋಣ.
ಗಣೇಶ ಚತುರ್ಥಿಯ ಹಬ್ಬದಂದು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಆಚರಿಸಲಾಗುತ್ತದೆ. ಬಾದ್ರಪದ ತುರ್ಥಿಯಿಂದ ಅನಂತ ಚತುರ್ದಶಿಯವರೆಗೂ ಎಲ್ಲೆಡೆ ಗಣೇಶ ಜನ್ಮೋತ್ಸವವನ್ನು ಆಚರಿಸಲಾಗುತ್ತದೆ. ಗಣೇಶ ಚತುರ್ಥಿಯಂದು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವ ಮನೆ ಯಾವಾಗಲೂ ಅವನ ಆಶೀರ್ವಾದದಿಂದ ಕೂಡಿರುತ್ತದೆ ಎಂಬ ನಂಬಿಕೆ ಇದೆ.
ನೀವು ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲು ಬಯಸಿದರೆ ನೀವು ಈ ಕೆಲವು ವಿಷಯಗಳನ್ನು ತಿಳಿದಿರಬೇಕು. ಹಾಗಾದರೆ ಯಾವ ವಿಷಯಗಳನ್ನು ತಿಳಿದಿರಬೇಕು ಎಂದರೆ ಗಣೇಶ ಚತುರ್ಥಿಯಂದು ಗಣಪತಿ ಸ್ಥಾಪನೆಗಾಗಿ ಯಾವಾಗಲೂ ಕುಳಿತುಕೊಳ್ಳುವ ಭಂಗಿ ಮತ್ತು ಸೊಂಡಿಲು ಎಡಭಾಗಕ್ಕೆ ಬಾಗಿರುವ ಗಣೇಶನ ವಿಗ್ರಹವನ್ನು ಆಯ್ಕೆ ಮಾಡಬೇಕು.
ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಅಂತಹ ಗಣೇಶ ಮೂರ್ತಿಯನ್ನು ತಂದರೆ ಮನೆಯಲ್ಲಿ ಸುಖ ಸಮೃದ್ಧಿ ಶಾಂತಿ ನೆಲೆಸುತ್ತದೆ. ಹಾಗೆ ವಿಗ್ರಹದ ಬಣ್ಣದ ಬಗ್ಗೆ ಹೇಳುವುದಾದರೆ ಸಿಂಧೂರ ಬಣ್ಣದ ಗಣೇಶನ ವಿಗ್ರಹವನ್ನು ಮನೆಗೆ ತರುವುದು ಉತ್ತಮವೆಂದು ಪರಿಗಣಿಸಲಾಗಿದೆ.
ಸಿಂಧೂರ ಬಣ್ಣ ಅಂದರೆ ಕುಂಕುಮ ಬಣ್ಣದ ಗಣೇಶ ಮೂರ್ತಯನ್ನು ತಂದು ಪೂಜಿಸುವುದು ಶುಭ ಚತುರ್ಥಿಯ ದಿನದಂದು ಸಿಂಧೂರ ಬಣ್ಣದ ಗಣೇಶನ ಮೂರ್ತಿಯನ್ನು ತಂದು ಪೂಜಿಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ಜೀವನದಲ್ಲಿ ಸಂತೋಷ ಸಿಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸಲು ಉತ್ತಮವಾದ ದಿಕ್ಕನ್ನು ಈಶಾನ್ಯ ಎಂದು ಪರಿಗಣಿಸಲಾಗಿದೆ.
ಈ ದಿಕ್ಕಿನಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸುವುದು ಶುಭ. ಇದು ದೇವಾನುದೇವತೆಗಳ ದಿಕ್ಕು. ಆದರೆ ದಕ್ಷಿಣ ದಿಕ್ಕನ್ನು ಬಿಟ್ಟು ಬೇರೆ ದಿಕ್ಕಿನಲ್ಲಿ ನೀವು ಸ್ಥಾಪನೆ ಮಾಡಬಹುದು. ಶಾಸ್ತ್ರಗಳ ಪ್ರಕಾರ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೊದಲು ಗಂಗಾಜಲವನ್ನು ಚಿಮುಕಿಸಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ನಂತರ ಒಂದು ಪೀಠವನ್ನು ಸಿದ್ಧಪಡಿಸಿಕೊಂಡು ಪೀಠದ ಮೇಲೆ ಒಂದು ಕೆಂಪು ಬಟ್ಟೆಯನ್ನು ಹಾಕಿ .
ಅದರ ಮೇಲೆ ಅಕ್ಕಿ ಯನ್ನು ಹರಡಿ. ಅದರ ಮೇಲೆ ನೀವು ವಿಗ್ರಹ ವನ್ನ ಸ್ಥಾಪನೆ ಮಾಡಬೇಕು. ಗಣೇಶನ ಮೂರ್ತಿಯನ್ನು ಸ್ಥಾಪಿಸುವಾಗ ಈ ವಿಷಯಗಳನ್ನು ತಪ್ಪದೆ ನೆನಪಿನಲ್ಲಿಟ್ಟು ಪಾಲಿಸಿ. ಸ್ನೇಹಿತರೇ ಇವತ್ತಿನ ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ವಿಡಿಯೋ ಲೈಕ್ ಮಾಡಿ ಶೇರ್ ಮಾಡಿ