ಈ ಸೊಪ್ಪನ್ನು ನೀವು ಹೀಗೆ ಬಳಸಿದರೆ ಜನುಮದಲ್ಲಿ ನಿಮಗೆ ಕೀಲುನೋವು ಸಮಸ್ಯೆ ಕಾಡಲ್ಲ …!!!
ಕೀಲುನೋವು ಮಂಡಿನೋವಿನ ಸಮಸ್ಯೆಗೆ ಸಂಧಿವಾತದ ಸಮಸ್ಯೆಗೆ ಒಂದು ಮನೆಯ ಮದ್ದನ್ನು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ಇತ್ತೀಚಿನ ದಿವಸಗಳಲ್ಲಿ ಅಂತೂ ಸಂಧಿವಾತದ ಸಮಸ್ಯೆ ಈ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಮೂವತ್ತರಿಂದ ನಲವತ್ತು ವಯಸ್ಸಿನ ವ್ಯಕ್ತಿಗಳಿಗೆ ಹೆಚ್ಚಾಗಿ ಕಂಡು ಬರುತ್ತಿದ್ದು.ಈ ಒಂದು ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನಾವು ತಿಳಿದುಕೊಳ್ಳೋಣ ಶಾಶ್ವತ ಪರಿಹಾರ ಅಂತ ಅಂದರೆ ಯಾವುದೆ ಟ್ರೀಟ್ಮೆಂಟ್ ಅಲ್ಲ ಅಥವಾ ಯಾವುದೆ ಮಾತ್ರೆಗಳನ್ನು ಸೇವಿಸುವುದು ಕೂಡ ಅಲ್ಲ. ಇದನ್ನು ನಾವು ಒಂದು ಔಷಧೀಯ ಗಿಡಮೂಲಿಕೆಯನ್ನು ಬಳಸಿ ಈ ಒಂದು ಸಮಸ್ಯೆಯನ್ನು ಪರಿಹರಿಸಿಕೊಳ್ಳೋಣ.
ಸಾಮಾನ್ಯವಾಗಿ ನಮ್ಮ ದೇಹ ರಚನೆಯಲ್ಲಿ ಮೂಳೆಗಳ ನಡುವೆ ಒಂದು ತೆಳುವಾದ ಪದರವಿರುತ್ತದೆ. ಅದನ್ನ ಕಾರ್ಟಿಲೇಜ್ ಅಂತ ಕರೀತೇವೆ. ಇದು ತುಂಬಾ ತೆಳುವಾಗಿ ಇದ್ದು. ಇದೇನಾದರೂ ಡ್ಯಾಮೇಜ್ ಆದರೆ ನಮಗೆ ಕೀಲುನೋವಿನ ಸಮಸ್ಯೆ ಮಂಡಿನೋವಿನ ಸಮಸ್ಯೆ ಉಂಟಾಗುತ್ತದೆ. ಅತಿಯಾದ ಬೊಜ್ಜು ತೂಕ ಹೆಚ್ಚುವಿಕೆ ಮತ್ತು ದೇಹಕ್ಕೆ ವ್ಯಾಯಾಮ ಮಾಡಿಸದೆ ಇರುವುದು ಉತ್ತಮವಾದ ಜೀವನ ಶೈಲಿಯನ್ನು ನಡೆಸದೆ ಇರುವುದು ಈ ಎಲ್ಲ ಕಾರಣಗಳು ಕೂಡಾ ಮಂಡಿ ನೋವು ಕೀಲು ನೋವಿನ ಸಮಸ್ಯೆಗೆ ಸಂಧಿವಾತದ ಸಮಸ್ಯೆಗೆ ಕಾರಣಗಳು ಆಗುತ್ತವೆ.
ಆದಕಾರಣ ಇಂದಿನ ಮಾಹಿತಿಯಲ್ಲಿ ನಾನು ತಿಳಿಸುತ್ತಿರುವ ವಿಚಾರವೂ ಒಂದು ಗಿಡಮೂಲಿಕೆಯನ್ನು ಬಳಸಿ ಇದನ್ನು ಉಪಯೋಗಿಸುತ್ತಾ ಬರುವುದರಿಂದ ಕೀಲು ನೋವಿನ ಸಮಸ್ಯೆ ಸಂಧಿವಾತದ ಸಮಸ್ಯೆ ಕಡಿಮೆಯಾಗುತ್ತದೆ. ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರೊಂದಿಗೆ ತೂಕ ಹೆಚ್ಚಿದ್ದರೆ ಅಥವಾ ಅನಗತ್ಯ ಬೊಜ್ಜು ಸಮಸ್ಯೆ ಇದ್ದಲ್ಲಿ. ಆ ಒಂದು ತೂಕವನ್ನು ಇಳಿಸಿಕೊಳ್ಳುವ ಮುಖಾಂತರ ಕೂಡ ನಾವು ಪರಿಹಾರವನ್ನು ಮಾಡಿಕೊಳ್ಳಬೇಕಾಗುತ್ತದೆ.