ಉಪಯುಕ್ತ ಮಾಹಿತಿ

ಸಕ್ಕರೆ ಕಾಯಿಲೆ ಇದ್ದವರು ಆಲೂಗಡ್ಡೆಯನ್ನು ಸೇವನೆ ಮಾಡಿದರೆ ಏನಾಗುತ್ತೆ ಗೊತ್ತಾ?

ಆಲೂಗಡ್ಡೆಯಲ್ಲಿ ಹಲವಾರು ಬಗೆಯ ಪೋಷಕಾಂಶಗಳಿದ್ದು ಇದನ್ನು ಸೇವನೆ ಮಾಡಿದರೆ ಅದು ಆರೋಗ್ಯಕ್ಕೆ ಹಲವಾರು ರೀತಿಯಿಂದ ನೆರವಾಗುವುದುಕೆಲವರು ನಿತ್ಯವೂ ತಮ್ಮ ಆಹಾರ ಕ್ರಮದಲ್ಲಿ ಆಲೂಗಡ್ಡೆ ಸೇವನೆ ಮಾಡುವರು ಆದರೆ

ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿನಂತೆ ಆಲೂಗಡ್ಡೆಯನ್ನು ಕೂಡ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಸಮಸ್ಯೆಗಳು ಕಂಡುಬರುವುದು.ಆಲೂಗಡ್ಡೆಯಲ್ಲಿ ವಿಟಮಿನ್ ಗಳು, ಖನಿಜಾಂಶಗಳು, ಆಂಟಿಆಕ್ಸಿಡೆಂಟ್ ಗಳು, ಫೈಟೋ ನ್ಯೂಟ್ರಿಯೆಂಟ್ಸ್ ಮತ್ತು ಆಹಾರದ ನಾರಿನಾಂಶ ಇದೆ.

ಆದರೆ ಇದನ್ನು ಮಿತ ವಾಗಿ ಸೇವನೆ ಮಾಡಬೇಕು.ಇಲ್ಲವಾದ ಲ್ಲಿ ಅದರಿಂದ ವ್ಯತಿರಿಕ್ತ ಪರಿಣಾಮ ಬೀರುವುದು.ಅಂತಹ ಕೆಲವು ಅಡ್ಡಪರಿಣಾಮ ಗಳು ಯಾವುದು ಎಂದು ನಾವು ನಿಮಗೆ ಇಂದಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇವೆ.

ದಯವಿಟ್ಟು ಕೊನೆಯವರೆಗೂ ನೋಡಿ.ಆಲೂಗಡ್ಡೆಯು ಗ್ಲೈಸೆಮಿಕ್ ಇಂಡೆಕ್ಸ್ 78 ಆಗಿದ್ದು, ಇದು ರಕ್ತನಾಳಕ್ಕೆ ಬೇಗನೆ ಸಕ್ಕರೆಯನ್ನು ಬಿಡುಗಡೆ ಮಾಡುವುದು.ಆಲೂಗಡ್ಡೆಯಲ್ಲಿ ಇರುವಂತಹ ಕಾರ್ಬೋಹೈಡ್ರೇಟ್ಸ್ ಅಂಶವು ಗ್ಲೂಕೋಸ್ ನ್ನು ವಿಘಟಿಸುವುದು ಮತ್ತು ರಕ್ತನಾಳದಲ್ಲಿನ ಸಕ್ಕರೆ ಮಟ್ಟವನ್ನು ವೃದ್ಧಿಸುವುದು.

ಆಲೂಗಡ್ಡೆಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಬಹುದು.ರಕ್ತ ದಲ್ಲಿನ ಸಕ್ಕರೆ ಮಟ್ಟವು ಅತಿಯಾದರೆ ಅದರಿಂದ ಅತಿಯಾದ ಬಾಯಾರಿಕೆ ತಲೆನೋವು, ಏಕಾಗ್ರತೆ ಕೊರತೆ, ದೃಷ್ಟಿ ಮಂದ ಪದೇ ಪದೇ ಮೂತ್ರವಿಸರ್ಜನೆ, ತೂಕ ಇಳಿಕೆ, ನರ ಕ್ಕೆ ಹಾನಿ, ಮಲಬದ್ಧತೆ ಮತ್ತು ಕಣ್ಣುಗಳ ನರಗಳಿಗೆ ಹಾನಿಯಾಗಬಹುದು.

ಹಾಗಾಗಿ ಸಕ್ಕರೆ ಕಾಯಿಲೆ ಇದ್ದವರು ಆಲೂಗಡ್ಡೆಯನ್ನು ಮಿತವಾಗಿ ಸೇವನೆ ಮಾಡಿ.ಇನ್ನು ಬೊಜ್ಜು ಇರುವಂತಹ ಜನರು ಆಲೂಗಡ್ಡೆ ಸೇವನೆ ಕಡಿಮೆ ಮಾಡಬೇಕು. ತೂಕ ಇಳಿಸಲು ಬಯಸುವವರು ಆಲೂಗಡ್ಡೆ ಸೇವನೆ ಕಡಿಮೆ ಮಾಡಬೇಕು.

ಇದರಲ್ಲಿ ತುಂಬಾ ಪೋಷಕಾಂಶಗಳಿರುವುದರಿಂದ ಆಲೂಗಡ್ಡೆ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಆದರೆ ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಅಧಿಕ ವಿರುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚು ಮಾಡುವುದು. ಈ ಕಾರಣದಿಂದಾಗಿ ಮಧುಮೇಹದ ಅಪಾಯ ಇರುವವರು ಇದನ್ನು ಮಿತಿಯಲ್ಲಿ ಸೇವಿಸಿ.ಇದರಿಂದ ದೇಹದ ರಕ್ತ ದಲ್ಲಿ ಸಕ್ಕರೆಯಂಶ ಇದ್ದಕ್ಕಿದ್ದಂತೆ ಹೆಚ್ಚಾಗುವುದನ್ನು ತಡೆಗಟ್ಟಬಹುದು. 

Related Articles

Leave a Reply

Your email address will not be published. Required fields are marked *

Back to top button