ಜಮಿನ್ದಾರು ಚಿತ್ರದಲ್ಲಿ ನಟಿಸಿದ ನಟಿ ರಾಶಿ ಈಗ ಮಾಡುತ್ತಿರುವ ಕೆಲಸ ಏನು ಗೊತ್ತಾ ?
ನಟಿ ರಾಶಿ ರವರು ಆಂಧ್ರಪ್ರದೇಶದ ವೆಸ್ಟ್ ಗೋದಾವರಿ ಜಿಲ್ಲೆಯಲ್ಲಿ 1980 ಜುಲೈ 20 ರಂದು ಜನಿಸಿದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ರಾಶಿ ನಂತರ ನಾಯಕಿಯಾಗಿ ಟಾಲಿವುಡ್ ನಲ್ಲಿ ರಾರಾಜಿಸಿದರು. ಶುಭಾಕಾಂಕ್ಷುಲು, ಗೋಕುಲಂಲು ಎಂಬ ತಮಿಳು ಚಿತ್ರಗಳು ರಾಶಿಗೆ ನಾಯಕಿಯಾಗಿ ಗುರುತು ತಂದುಕೊಟ್ಟ ಚಿತ್ರಗಳು. ಸ್ಟಾರ್ ನಟರುಗಳ ಜತೆ ತೆರೆಯನ್ನು ಹಂಚಿಕೊಳ್ಳುವ ಮೂಲಕ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಯಶಸ್ಸಿನ ಉತ್ತುಂಗವನ್ನು ಏರಿದರು ನಟಿ ರಾಶಿ.
ಸುಮಾರು 25 ಚಿತ್ರಗಳಲ್ಲಿ ಸ್ಟಾರ್ ನಟರುಗಳ ಜತೆ ತೆರೆಯನ್ನು ಹಂಚಿಕೊಂಡ ರಾಶಿಯವರಿಗೆ ನಿಧಾನವಾಗಿ ಅವಕಾಶಗಳ ಕೊರತೆ ಉಂಟಾಯಿತು. ಈ ಕಾರಣದಿಂದಾಗಿ ರಾಶಿಯವರು ಮಹೇಶ್ ಬಾಬು ಅಭಿನಯದ ನಿಜಾಂ ಚಿತ್ರದಲ್ಲಿ ಖಳ ನಾಯಕಿಯಾಗಿ ನಟಿಸಿದರು. ಇದಾದ ಬಳಿಕ ರಾಶಿಯವರಿಗೆ ಅವಕಾಶಗಳು ಸಿಗುವುದು ಬಹುತೇಕ ಕಡಿಮೆಯಾಗಿ ಬಿಟ್ಟಿತ್ತು. ರಾಶಿ ಹೊತ್ತಿಗಾಗಲೇ ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿಸಿದ್ದರು.
ರವಿಚಂದ್ರನ್ ಅಭಿನಯದ ಸ್ನೇಹ ಎಂಬ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ರಮೇಶ್ ಅರವಿಂದ್ ಮತ್ತು ಶಿವರಾಜ್ ಕುಮಾರ್ ಅವರ ಜೊತೆ ನಿನ್ನೇ ಪ್ರೀತಿಸುವೆ ಎಂಬ ಚಿತ್ರದಲ್ಲಿ ಮತ್ತು ವಿಷ್ಣುವರ್ಧನ್ ರವರ ಜೊತೆಯಲ್ಲಿ ಜಮೀನ್ದಾರರು ಎಂಬ ಚಿತ್ರದಲ್ಲಿ ನಟಿಸಿದ್ದಾರೆ.ಕನ್ನಡ ತೆಲುಗು, ತಮಿಳು, ಹಿಂದಿ, ಈ ಎಲ್ಲಾ ಭಾಷೆಗಳಲ್ಲಿ ಅಭಿನಯಿಸಿದ ರಾಶಿಯವರಿಗೆ ಅವಕಾಶದ ಕೊರತೆಯಿಂದಾಗಿ ಹಣಕಾಸಿನ ಸಮಸ್ಯೆ ಎದುರಾಯಿತು.
ರಾಶಿಯವರಿಗೆ ಅವರ ಅಭಿಮಾನಿಗಳು ಫೋನ್ ಮಾಡಿ ತೊಂದರೆಯ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಇತ್ತೀಚೆಗಷ್ಟೇ ರಾಶಿಯವರು ಯೂಟ್ಯೂಬ್ ಚಾನೆಲ್ ಗಳ ಮೂಲಕ ತಮ್ಮ ಆರ್ಥಿಕ ಸ್ಥಿತಿಗತಿಗಳ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳ ಕುರಿತಾಗಿ ಸ್ಪಷ್ಟನೆಯನ್ನು ನೀಡಿದ್ದಾರಂತೆ.