GOSSIP
ಟಿಕ್ ಟಾಕ್ ಮೂಲಕ ಫೇಮಸ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಈಗ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ
ಇಷ್ಟು ದಿನ ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿದ್ದ ಈ ಟಿಕ್ ಟಾಕ್ ಸುಂದರಿ ಈಗ ಸ್ಯಾಂಡಲ್ ವುಡ್ ಅಲ್ಲಿ ಹೇಗೆಲ್ಲಾ ಸದ್ದು ಮಾಡಲಿದ್ದಾರೆ ನೋಡಬೇಕಾಗಿದೆ. ನಟ ಧರ್ಮ ಕೀರ್ತಿರಾಜ್ ನಾಯಕ ನಟನಾಗಿ ಮತ್ತು ಅದ್ವಿತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಕ್ಯಾಡ್ಬರೀಸ್ ” ಸಿನಿಮಾದಲ್ಲಿ ಸೋನು ಕೂಡಾ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಇವರಿಗೆ ತುಂಬಾ ಒಳ್ಳೆಯ ಪಾತ್ರ ಸಿಕ್ಕಿದ್ದು ಆ ಪಾತ್ರ ಹೇಗಿದೆ ಎಂಬುದರ ಬಗ್ಗೆ ಈಗ ನಾನು ಹೇಳುವುದಿಲ್ಲ ಎಂದಿದ್ದಾರೆ ಸೋನು. ಇವರ ಟಿಕ್ ಟಾಕ್ ವೀಡಿಯೊಗಳು ಸಕತ್ ವೈರಲ್ ಆಗಿದ್ದವು ಆ ವೈರಲ್ ವೀಡಿಯೋಗಳಿಂದ ಈಗ ಸಿನಿಮಾ ಅವಕಾಶ ಸಿಕ್ಕಿದ್ದು ಯಾವುದೇ ರೀತಿಯ ಆಡಿಷನ್ ಇಲ್ಲದೆ ನೇರವಾಗಿ ಸಿನಿಮಾದಲ್ಲಿ ನಟಿಸಲು ಆಯ್ಕೆ ಮಾಡಲಾಗಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ.