ಪತಿ ರಾಮು ಇಲ್ಲದ ಮೊದಲ ಹುಟ್ಟುಹಬ್ಬವನ್ನು ಮಾಲಾಶ್ರೀ ಹೇಗೆ ಆಚರಿಸಿದ್ದಾರೆ ಗೊತ್ತಾ??
1979ರಲ್ಲಿ ಬಾಲನಟಿಯಾಗಿ ತಮಿಳು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಅವರು ತಮಿಳು ಮತ್ತು ತೆಲುಗಿನಲ್ಲಿ ಸುಮಾರು 34 ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದಾರೆ. ಅದರಲ್ಲಿ 26 ಚಿತ್ರಗಳಲ್ಲಿ ಹುಡುಗನ ಪಾತ್ರಗಳಲ್ಲಿಯೇ ನಟಿಸಿದ್ದರು ಎನ್ನುವುದು ವಿಶೇಷ. ತಮಿಳುನಾಡಿನಲ್ಲಿ ಹುಟ್ಟಿ, ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿ ಕೊನೆಗೆ ಕನ್ನಡತಿಯಾಗಿ ಗುರುತಿಸಿಕೊಂಡವರು ನಟಿ ಮಾಲಾಶ್ರೀ. ಶ್ರೀದುರ್ಗಾ ಎಂಬ ಹೆಸರಿನ ಅವರು ‘ಮಾಲಾಶ್ರೀ’ಯಾಗಿ ಬದಲಾಗಿದ್ದು, ‘ನಂಜುಂಡಿ ಕಲ್ಯಾಣ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ವೇಳೆ.
ಸಿನಿಮಾದಲ್ಲಿ ಮಾಲಾಶ್ರೀ ಇದ್ದಾರೆ ಅಂದರೆ ಸಾಕು ಆ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ಮಾತು ಪ್ರಚಲಿತದಲ್ಲಿತ್ತು. ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಕ್ರೇಜ್ ಹುಟ್ಟಿಸಿದವರೆಂದರೆ ಅದು ಮಾಲಾಶ್ರೀ. ತಮ್ಮದೇ ದೊಡ್ಡ ಅಭಿಮಾನಿ ವರ್ಗವನ್ನು ಸೃಷ್ಟಿಸಿಕೊಂಡಿದ್ದ ಅವರು, ಚಿತ್ರರಂಗವನ್ನು ಆಳಿದ ಕೆಲವೇ ನಟಿಯರಲ್ಲಿ ಒಬ್ಬರು. 1998ರ ಬಳಿಕ ಮಾಲಾಶ್ರೀ ಸಿನಿಮಾಗಳು ನಟಿಸುವುದು ಕಡಿಮೆಯಾದರೂ ಈಗಲೂ ಅಭಿಮಾನಿಗಳನ್ನು ಉಳಿಸಿಕೊಂಡಿದ್ದಾರೆ.
ಕೊರೊನಾ ಎರಡನೇ ಅಲೆ ಭೀಕರತೆ ಸಮಯದಲ್ಲಿ ಮಾಲಾಶ್ರೀ ಪತಿಯನ್ನು ಕಳೆದುಕೊಂಡರು. ಕೊರೊನಾ ಮಹಾಮಾರಿ ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಅವರನ್ನು ಬಲಿ ಪಡೆಯಿತು. ಸದ್ಯ ರಾಮು ಬಿಟ್ಟುಹೋದ ನಿರ್ಮಾಣ ಸಂಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮಾಲಾಶ್ರೀ, ಸಿನಿಮಾಗಳ ಕಡೆ ಹರಿಸಿದ್ದಾರೆ. ಮಾಲಾಶ್ರೀ ಕೊನೆಯದಾಗಿ ಉಪ್ಪು ಹುಳಿ ಖಾರ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.
ಸ್ಯಾಂಡಲ್ ವುಡ್ ನ ಕನಸಿನ ರಾಣಿ ಅಂತನೆ ಖ್ಯಾತಿಗಳಿಸಿರುವ ನಟಿ ಮಾಲಾಶ್ರೀ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಪತಿ ರಾಮು ಇಲ್ಲದ ಮೊದಲ ಹುಟ್ಟುಹಬ್ಬ ಇದಾಗಿದೆ. ಪತಿಯ ಅಗಲಿಕೆ ನೋವಿನಲ್ಲಿರುವ ಮಾಲಾಶ್ರೀ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಆದರೆ ಮಕ್ಕಳು ತಾಯಿಯ ಹುಟ್ಟುಹಬ್ಬವನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದ್ದಾರೆ.
ಪತಿಯ ನೆನಪಿನಲ್ಲೇ ಕಾಲಕಳೆಯುತ್ತಿರುವ ಮಾಲಾಶ್ರೀಗೆ ಈಗ ಮಕ್ಕಳೇ ಎಲ್ಲಾ. ಹುಟ್ಟುಹಬ್ಬದ ದಿನ ಪ್ರೀತಿಯ ತಾಯಿಗೆ ಮುದ್ದಾದ ಮಕ್ಕಳು ಸುಂದರ ಉಡುಗೊರೆ ನೀಡುವ ಮೂಲಕ ತಾಯಿಗೆ ಸರ್ಪ್ರೈಸ್ ನೀಡಿದ್ದಾರೆ. ಮಾಲಾಶ್ರೀ ಮತ್ತು ರಾಮು ದಂಪತಿಗೆ ಇಬ್ಬರು ಮಕ್ಕಳು. ಅನನ್ಯಾ ಮತ್ತು ಆರ್ಯನ್. ಈ ಇಬ್ಬರೂ ಮಕ್ಕಳು ಈಗ ಮಾಲಾಶ್ರೀಯ ಸಂಭ್ರಮವನ್ನು ಹೆಚ್ಚಿಸಿದ್ದಾರೆ.