ಇದ್ದಕ್ಕಿದ್ದಂತೆ ಮಂಜು ಪಾವಗಡ ಮನೆಗೆ ಬಂದ ದಿವ್ಯ ಸುರೇಶ್ ! ಮನೆಗೆ ಹೋಗಿ ಮಂಜು ಬಗ್ಗೆ ಹೇಳಿದ್ದೇನು ?
ಬಿಗ್ ಬಾಸ್ ಕನ್ನಡ 8’ ಕಾರ್ಯಕ್ರಮದಲ್ಲಿ ಮಹಿಳಾ ಸ್ಪರ್ಧಿಗಳ ಪೈಕಿ ಹೆಚ್ಚು ಗಮನ ಸೆಳೆದವರು ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ. ಅತ್ತ ಮಂಜು ಪಾವಗಡ ಜೊತೆ ದಿವ್ಯಾ ಸುರೇಶ್ ಗೆಳೆತನ ಗಟ್ಟಿಯಾಗಿದ್ದರೆ, ಇತ್ತ ಅರವಿಂದ್ ಜೊತೆ ದಿವ್ಯಾ ಉರುಡುಗ ಆತ್ಮೀಯವಾಗಿದ್ದರು.
ಟಾಸ್ಕ್‌ಗಳಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುತ್ತಿದ್ದ ದಿವ್ಯಾ ಸುರೇಶ್ ಟಾಪ್ 5 ಹಂತಕ್ಕೆ ಕಾಲಿಡುವ ಮುನ್ನ ಎಲಿಮಿನೇಟ್ ಆದರು. ಇತ್ತ ದಿವ್ಯಾ ಉರುಡುಗ ಟಾಪ್ 3 ಹಂತದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಟಾಪ್ 3 ಹಂತದವರೆಗೂ ಬಂದಿದ್ದ ದಿವ್ಯಾ ಉರುಡುಗಗೆ ‘ಬಿಗ್ ಬಾಸ್’ ವಿನ್ನರ್ ಆಗುವ ಬಯಕೆ ಇತ್ತು. ಆದರೆ, ಅದು ಈಡೇರಲಿಲ್ಲ. ಎರಡನೇ ರನ್ನರ್ ಅಪ್ ಸ್ಥಾನಕ್ಕೆ ದಿವ್ಯಾ ಉರುಡುಗ ತೃಪ್ತಿಪಟ್ಟುಕೊಂಡರು. ‘ಬಿಗ್ ಬಾಸ್’ ಗೆಲ್ಲುವ ಕನಸು ನುಚ್ಚುನೂರಾದ ಪರಿಣಾಮ ಕಣ್ಣೀರು ಹಾಕುತ್ತಲೇ ದಿವ್ಯಾ ಉರುಡುಗ ಹೊರಬಂದರು.
ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ದಿವ್ಯಾ ಸುರೇಶ್ ಮತ್ತು ಮಂಜು ಪಾವಗಡ ನಡುವೆ ಒಂದು ರೀತಿಯ ಆತ್ಮೀಯತೆ ಇತ್ತು. ಮೊದಲ ಇನ್ನಿಂಗ್ಸ್ನಲ್ಲಿ ಇಬ್ಬರೂ ತುಂಬಾ ಆಪ್ತವಾಗಿ ನಡೆದುಕೊಳ್ಳುತ್ತಿದ್ದರು. ಪರಸ್ಪರ ಹೆಚ್ಚು ಸಮಯ ಜೊತೆಯಾಗಿ ಕಳೆಯುತ್ತಿದ್ದರು. ಅದು ಕೆಲವರಿಂದ ಟೀಕೆಗೂ ಒಳಗಾಯಿತು. ಸೆಕೆಂಡ್ ಇನ್ನಿಂಗ್ಸ್ ಮುಗಿಯುವಾಗ ದಿವ್ಯಾ ಅವರು ‘ಮಂಜು ನನ್ನ ಬೆಸ್ಟ್ ಫ್ರೆಂಡ್’ ಎಂದು ಹೇಳಿದ್ದು ಮಾತ್ರವಲ್ಲದೇ ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡು ವಿಶೇಷ ಕೇಕ್ ತರಿಸಿ ಫ್ರೆಂಡ್ಶಿಪ್ ಡೇ ಆಚರಿಸಿದ್ದರು.
ಸ್ನೇಹಿತ ಮಂಜು ಪಾವಗಡ ‘ಬಿಗ್ ಬಾಸ್ ವಿನ್ನರ್’ ಪಟ್ಟಕ್ಕೇರಿದ್ದಕ್ಕೆ ದಿವ್ಯಾ ಸುರೇಶ್ ಕುಣಿದು ಕುಪ್ಪಳಿಸಿ ಸಂಭ್ರಮ ಪಟ್ಟರು. ಮಂಜು ಪಾವಗಡ ಅವರ ಕುಟುಂಬದವರನ್ನೆಲ್ಲಾ ಅಪ್ಪಿಕೊಂಡು ತಾವೇ ‘ಬಿಗ್ ಬಾಸ್’ ಗೆದ್ದಷ್ಟು ದಿವ್ಯಾ ಸುರೇಶ್ ಸಂತಸ ಪಟ್ಟರು. ಬಿಗ್ ಬಾಸ್ ಮುಗಿದ ನಂತರ ದಿವ್ಯಾ ಸುರೇಶ್ ಮಂಜು ಪಾವಗಡ ಮನೆಗೆ ತೆರಳಿ ಅವರ ಕುಟುಂಬದ ಜೊತೆ ಕೆಲ ಸಮಯ ಕಾಲ ಕಳೆದಿದ್ದಾರೆ. ಮಂಜು ಮದುವೆ ಬಗ್ಗೆ ಅವರ ತಂದೆ-ತಾಯಿ ಬಳಿ ದಿವ್ಯಾ ಸುರೇಶ್ ಮಾತನಾಡಿದ್ದಾರೆ
ವೇಳೆ ದಿವ್ಯಾ ಮಾತು ಗಮನ ಸೆಳೆದಿದೆ. ‘ಆಗಲೇ ನಾನು ಮಂಜು ಅವರ ಅಪ್ಪ-ಅಮ್ಮನ ಹತ್ತಿರ ಮದುವೆ ಬಗ್ಗೆ ಮಾತನಾಡುತ್ತಿದ್ದೆ. ಮಂಜು ಮದುವೆ ಯಾವಾಗ ಮಾಡ್ತೀರ ಅಂತ ಕೇಳಿದೆ. ಅವನು ಆಡ್ತಾ ಇರೋದು ನೋಡಿದರೆ ಬಿಗ್ ಬಾಸ್ನಿಂದ ಹೊರಬಂದ ತಕ್ಷಣ ಮದುವೆ ಆಗ್ತಾನೆ ಅನಿಸುತ್ತೆ ಅಂದ್ರು. ಮದುವೆ ಆಗ್ಬೇಕು ಅಂತ ಆಗಾಗ ಹೇಳ್ತಾ ಇರೋದರಿಂದ ತಕ್ಷಣ ಮದುವೆ ಆಗಬಹುದು ಎನಿಸುತ್ತದೆ’ ಎಂದು ದಿವ್ಯಾ ಸುರೇಶ್ ಹೇಳಿದ್ದಾರೆ.