ಗೆದ್ದ ನಂತರ ಟ್ರೋಫಿ ಜೊತೆ ಇದ್ದಕ್ಕಿದ್ದಂತೆ ಮಂಜು ರಾತ್ರೋರಾತ್ರಿ ಹೋಗಿದ್ದೆಲ್ಲಿಗೆ ಗೊತ್ತಾ ? ಲೈವ್ ಅಲ್ಲಿ ಹೇಳಿದ್ದೇನು ?
ಮಂಜು ಪಾವಗಡ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 8’ರ ಟ್ರೋಫಿಯನ್ನು ಗೆದ್ದಿದ್ದಾರೆ. ‘ಮಜಾ ಭಾರತ’ ಕಾಮಿಡಿ ಶೋ ಮೂಲಕ ಮಂಜು ಕಿರುತೆರೆ ಮಂದಿಗೆ ಪರಿಚಯ ಆಗಿದ್ದರು. ತುಮಕೂರಿನ ಪಾವಗಡ ಮೂಲದ ಮಂಜು ಕಲಾವಿದನಾಗಿ ನಾಲ್ಕು ಜನರಿಗೆ ತಾನು ಪರಿಚಿತ ಆಗಬೇಕು ಎಂದು ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದರು. ಆರಂಭದಲ್ಲಿ ಮಂಜು ಪಾವಗಡ ಅವರು ಪೆಟ್ರೋಲ್ ಬಂಕ್‌ನಲ್ಲಿ, ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡಿದ್ದರು.
ದೊಡ್ಮನೆಯಲ್ಲಿ ಉಳಿದ ಸ್ಪರ್ಧಿಗಳನ್ನು ಹಾಸ್ಯ ಪ್ರವೃತ್ತಿಯಿಂದ ನಗಿಸುತ್ತ, ನಾಮಿನೇಶನ್‌ನಿಂದಲೂ ಬಚಾವ್ ಆಗುತ್ತ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ. ಮಂಜು ಪಾವಗಡ ಅವರ ಮನೆಯಲ್ಲಿ ಖುಷಿ ತುಂಬಿ ತುಳುಕಿದೆ. ಕಾಮಿಡಿ ಶೋನಿಂದ ಜೀವನ ಪ್ರಾರಂಭಿಸಿ ಹಂತಹಂತವಾಗಿ ಕಷ್ಟದಿಂದ ಬೆಳೆದ ಮಂಜು ಪಾವಗಡ ಬಿಗ್ ಬಾಸ್ ಮನೆಗೆ ಬಂದು ತಲುಪುವವರೆಗೆ ಪಟ್ಟಪಾಡು ಅಷ್ಟಿಷ್ಟಲ್ಲ. ಈಗ ಮಂಜು ಪಾವಗಡ ಪಾಲಿನ ಅದೃಷ್ಟ ಖುಲಾಯಿಸಿದ ಬರೋಬ್ಬರಿ 53 ಲಕ್ಷ ರೂಪಾಯಿ ಹಾಗೂ ಒಂದು ಕಾರು ಇನ್ನಿತರ ಬಹುಮಾನಗಳು ಮಂಜು ಪಾವಗಡ ಪಾಲಾಗಿದೆ.
ಶೇಕಡ 90ರಷ್ಟು ಬಿಗ್ ಬಾಸ್ ಪ್ರೇಕ್ಷಕರು ಮಂಜು ಪಾವಗಡ ಗೆಲ್ಲಬೇಕೆಂದು ಅಭಿಪ್ರಾಯಪಟ್ಟಿದ್ದರು. ಅವರಂದುಕೊಂಡಂತೆ ಈಗ ಮಂಜು ಪಾವಗಡ ಬಿಗ್ಬಾಸ್ ಆಗುವ ಮೂಲಕ ಅಭಿಮಾನಿಗಳ ಆಸೆ ಈಡೇರಿದೆ. ಇನ್ನು ಎರಡನೇ ಸ್ಥಾನದಲ್ಲಿ ರನ್ನರ್-ಅಪ್ ಆದ ಅರವಿಂದ್ ಕೆಪಿ ರವರಿಗೆ ಸುಮಾರು 12 ಲಕ್ಷದವರೆಗೆ ಸಿಕ್ಕಿದ್ದು .
ಮೂರನೇ ಸ್ಥಾನದಲ್ಲಿರುವ ದಿವ್ಯ ಉರುದುಗ ಅವರಿಗೆ ಮೂರುವರೆ ಲಕ್ಷ ರೂಪಾಯಿಗಳು ಸಿಕ್ಕಿದೆ. ನಿನ್ನೆ ಬಿಗ್ ಬಾಸ್ ನಿಂದ ಹೊರ ಬಂದಿದ್ದ ವೈಷ್ಣವಿ ನಾಲ್ಕನೇ ಸ್ಥಾನದಲ್ಲಿದ್ದ ಕಾರಣ ಅವರಿಗೆ ಎರಡುವರೆ ಲಕ್ಷ ರೂಪಾಯಿಗಳು ಸಿಕ್ಕಿವೆ ಹಾಗೆ ಇನ್ನುಳಿದ ಪ್ರಸನ್ನರಿಗೆ ಯವರಿಗೆ ಒಂದುವರೆ ಲಕ್ಷ ರೂಪಾಯಿ ತಮ್ಮದಾಗಿಸಿಕೊಂಡಿದ್ದಾರೆ.
ಮಂಜು ಪಾವಗಡ ವಿನ್ ನಗುವ ಮೂಲಕ ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಇದೀಗ ಅಂತ್ಯವಾಗಿದೆ. ಸಂಬಂಧಿಕರು, ಸ್ನೇಹಿತರೆಲ್ಲರೂ ಮಂಜು ಪಾವಗಡ ಮನೆಗೆ ಬಂದು, ಮಂಜುಗೆ ಶುಭ ಹಾರೈಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮಂಜು ತಂದೆ-ತಾಯಿ ಬಳಿ ಕೇಕ್ ಕತ್ತರಿಸಿ ಸಂಭ್ರಮಪಡುತ್ತಿದ್ದಾರೆ. ಸಿನಿಮಾಗಳಿಂದಲೂ ಮಂಜು ಅವರಿಗೆ ಆಫರ್ ಬರುತ್ತಿದೆ