ENTERTAINMENT

ಹಳೆಯ ನಟಿ ಲಕ್ಷ್ಮಿ ಅವರ ದತ್ತು ಪುತ್ರಿ, ತಾಯಿಗಿಂತ ಅತೀ ಸುಂದರಿ! ಆ ದತ್ತು ಪುತ್ರಿ ಯಾರು ಗೊತ್ತಾ, ಹೇಗಿದ್ದಾರೆ ನೋಡಿ

ಭಾರತ ಚಿತ್ರರಂಗ ಕಂಡ ಅದ್ಭುತವಾದ ನಟಿ ಲಕ್ಷ್ಮಿ. ಹೆಸರಿಗೆ ತಕ್ಕಂತೆ ಸಾಕ್ಷಾತ್ ಲಕ್ಷ್ಮೀದೇವಿಯ ಖಳೆಯ ಹೊಂದಿರುವ ನಟಿ ಇವರು. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿ ಪಂಚಭಾಷಾ ತಾರೆ ಎನಿಸಿಕೊಂಡಿದ್ದಾರೆ ನಟಿ ಲಕ್ಷ್ಮಿ. ಆ ಕಾಲದಲ್ಲಿ ಕನ್ನಡದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರಗಳ ಜೊತೆ ಕೂಡ ನಟಿ ಲಕ್ಷ್ಮಿ ಅವರು ನಟಿಸಿದ್ದಾರೆ. ಕರ್ನಾಟಕದಲ್ಲಿ ಇವರಿಗೆ ಬಹುದೊಡ್ಡ ಅಭಿಮಾನಿ ಬಳಗ ಇದೆ. ಇಂದಿಗು ಸಹ ಇವರ ಸಿನಿಮಾಗಳು ಟಿವಿಯಲ್ಲಿ ಪ್ರಸಾರವಾದಾಗ ಜನರು ಬಹಳ ಪ್ರೀತಿಯಿಂದ ನೋಡುತ್ತಾರೆ. ಲಕ್ಷ್ಮಿ ಅವರು ಒಂದು ಮಗುವನ್ನು ದತ್ತು ತೆಗೆದುಕೊಂಡು ಬೆಳೆಸಿದ್ದಾರೆ, ಆ ಮಗು ಈಗ ಹೇಗಿದ್ದಾಳೆ ಗೊತ್ತಾ? ತಿಳಿಯಲು ಮುಂದೆ ಓದಿ…

ಕನ್ನಡ ಚಿತ್ರರಂಗ ಮತ್ತು ಕನ್ನಡ ಸಿನಿಪ್ರಿಯರು ನಟಿ ಲಕ್ಷ್ಮಿ ಅವರು ಕನ್ನಡದಲ್ಲಿ ನಟಿಸಿರುವ ಅದ್ಭುತವಾದ ಸಿನಿಮಾಗಳನ್ನು ಮರೆಯಲು ಸಾಧ್ಯವಿಲ್ಲ. ಅದರಲ್ಲೂ ಅನಂತ್ ನಾಗ್ ಮತ್ತು ಲಕ್ಷ್ಮಿ ಅವರ ಆನ್ ಸ್ಕ್ರೀನ್ ಜೋಡಿ ಕನ್ನಡ ಇತಿಹಾಸದಲ್ಲೇ ಎಲ್ಲರೂ ಇಷ್ಟಪಟ್ಟ ಅತ್ಯುತ್ತಮ ಜೋಡಿಗಳಲ್ಲಿ ಒಂದು. ಇವರಿಬ್ಬರು ಜೊತೆಯಾಗಿ ನಟಿಸಿದ ಎಲ್ಲಾ ಸಿನಿಮಾಗಳು ಸೂಪರ್ ಯೆಶಸ್ವಿ ಆಗಿವೆ. ಇಂದಿನ ಜೆನೆರೇಷನ್ ನವರು ಕೂಡ ಆಗಿನ ಕಾಲದ ಹೀರೋಯಿನ್ ಗಳಲ್ಲಿ ಲಕ್ಷ್ಮಿ ಅವರೇ ಬೆಸ್ಟ್ ಎನ್ನುತ್ತಾರೆ.

ನೋಡಲು ಬಹಳ ಸುಂದರವಾಗಿ, ಆಕರ್ಷಕ ಕಣ್ಣುಗಳು ಮತ್ತು ನಗು ಹೊಂದಿದ್ದಾರೆ ನಟಿ ಲಕ್ಷ್ಮಿ. ಕೆರಿಯರ್ ನಲ್ಲಿ ಅತ್ಯಂತ ಯಶಸ್ಸು ಕಂಡರು ನಟಿ ಲಕ್ಷ್ಮಿ ಆದರೆ ಅವರ ವೈಯಕ್ತಿಕ ಜೀವನ ಅದಕ್ಕೆ ವಿರುದ್ಧವಾದದ್ದು. ನಟಿ ಲಕ್ಷ್ಮಿ ಮೂರು ಮದುವೆ ಆಗಿದ್ದಾರೆ. ಕೊನೆಯದಾಗಿ ಇವರು 1987 ರಲ್ಲಿ ತಮಿಳು ಚಿತ್ರರಂಗದ ಡೈರೆಕ್ಟರ್ ಮತ್ತು ಪ್ರೊಡ್ಯೂಸರ್ ಆಗಿದ್ದ ಶಿವಚಂದ್ರನ್ ಅವರ ಜೊತೆ ಮದುವೆಯಾದರು. ಈಗಲು ಸಹ ಇವರಿಬ್ಬರು ಉತ್ತಮ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಲಕ್ಷ್ಮಿ ಅವರಿಗೆ ಮೊದಲ ಪತಿಯಿಂದ ಜನಿಸಿದ ಐಶ್ವರ್ಯ ಭಾಸ್ಕರನ್ ಹೆಸರಿನ ಮಗಳಿದ್ದಾರೆ. ಅವರು ಸಹ ಸೌತ್ ಸಿನಿರಂಗದಲ್ಲಿ ಬಹಳ ಜನಪ್ರಿಯತೆ ಹೊಂದಿರುವ ನಟಿ.

ಒಂದೆರಡು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಾರೆ ನಟಿ ಐಶ್ವರ್ಯ. ಲಕ್ಷ್ಮಿ ಮತ್ತು ಶಿವಚಂದ್ರನ್ ದಂಪತಿ 2000 ಇಸವಿಯಲ್ಲಿ ಸಂಯುಕ್ತ ಹೆಸರಿನ ಒಂದು ಹೆಣ್ಣು ಮಗುವನ್ನು ದತ್ತು ಪಡೆಯುತ್ತಾರೆ, ಈಗಲೂ ಆ ಮಗುವನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಇವರ ಮಗಳು ಸಂಯುಕ್ತ ಈಗ ಬೆಳೆದು ದೊಡ್ಡವಳಾಗಿದ್ದಾಳೆ. ಲಕ್ಷ್ಮಿ ಅವರ ದತ್ತು ಪುತ್ರಿ ಸಂಯುಕ್ತ ಅವರು ಸಮಾಜ ಸೇವೆಯಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಸಾಕಷ್ಟು ಬಡ ಜನರಿಗೆ ಸಹಾಯ ಮಾಡುತ್ತಾರೆ. ಇವರು ಒಂದು NGO ದಲ್ಲಿ ಕೆಲಸ ಮಾಡುತ್ತಾರೆ. ಸಿನಿಮಾ ಫೀಲ್ಡ್ ಗೆ ಎಂಟ್ರಿ ಕೊಡಲು ಪ್ರಯತ್ನ ಮಾಡಿದ್ದರಾದರೂ, ಅಲ್ಲಿ ಸಂಯುಕ್ತ ಅವರು ಅಷ್ಟರ ಮಟ್ಟಿಗೆ ಯೆಶಸ್ಸು ಕಾಣಲಿಲ್ಲ. ಲಕ್ಷ್ಮಿ ಅವರ ದತ್ತು ಪುತ್ರಿ ಸಂಯುಕ್ತ ಅವರು ಹೇಗಿದ್ದಾರೆ ಎಂದು ನೀವು ಇಲ್ಲಿ ನೋಡಬಹುದು.

Related Articles

Leave a Reply

Your email address will not be published. Required fields are marked *

Back to top button