ENTERTAINMENT

ಚತುರ್ಭಾಷಾ ನಟಿ ಸಿಂಧು ಮೆನನ್ ಈಗ ಹೇಗಿದ್ದಾರೆ ಗೊತ್ತಾ? ಅವರ ಗಂಡ ಮಕ್ಕಳು ಹೇಗಿದ್ದಾರೆ ನೋಡಿ!

ನಟಿ ಸಿಂಧು ಮೆನನ್ ಅವರು ಮೂಲತಃ ಮಲಯಾಳಿ ಕುಟುಂಬದವರಾದರೂ ಬೆಂಗಳೂರಿನಲ್ಲಿ ಜನಿಸಿದರು. ಕನ್ನಡ,ತಮಿಳು,ತೆಲುಗು, ಮಲಯಾಳಂ ಎಲ್ಲಾ ಭಾಷೆಗಳಲ್ಲಿ ನಟಿ ಸಿಂಧು ಮೆನನ್ ಅವರು ನಾಯಕ ನಟಿಯಾಗಿ ನಟಿಸಿದ್ದಾರೆ. ಇನ್ನು ನಟಿ ಸಿಂಧು ಮೆನನ್ ಅವರ ಚೊಚ್ಚಲ ಚಿತ್ರ ರಶ್ಮಿ. ಈ ಚಿತ್ರದಲ್ಲಿ ಇವರು ಬಾಲನಟಿಯಾಗಿ ಕಾಣಿಸಿಕೊಂಡಿದ್ದರು ನಂತರ ಪ್ರೇಮ ಪ್ರೇಮ ಪ್ರೇಮ ಚಿತ್ರದಿಂದ ಪೂರ್ಣಪ್ರಮಾಣದ ನಾಯಕಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು.

ಇನ್ನು ಇವರು ಕಿಚ್ಚ ಸುದೀಪ್ ಅಭಿನಯದ ನಂದಿ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಧರ್ಮ ಚಿತ್ರದ ಮೂಲಕ ಜನಪ್ರಿಯರಾದರು. ಈ ಮಧ್ಯೆ ಪರಭಾಷಾ ಚಿತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡರು. ಸ್ವಲ್ಪ ಕಾಲ ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಇವರು ಕೆಲ ಧಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.

2010ರಲ್ಲಿ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ಪ್ರಭು ಎಂಬುವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಸಿಂಧು ಮೆನನ್ ದಂಪತಿಗೆ ಒಂದು ಹೆಣ್ಣು ಮತ್ತು ಗಂಡು ಇಬ್ಬರು ಮಕ್ಕಳಿದ್ದಾರೆ. ಸಿಂಧು ಮೆನನ್ ಅವರು 2012 ರಲ್ಲಿ ಕೊನೆಯದಾಗಿ ಸುಧಾರ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಅನಂತರ ಯಾವುದೇ ಸಿನಿಮಾದಲ್ಲಿ ನಟಿ ಸಿಂಧು ಮೆನನ್ ಅವರು ಕಾಣಿಸಿಕೊಂಡಿಲ್ಲ. ನಟಿ ಸಿಂಧು ಮೆನನ್ ಅವರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button