ಸುದ್ದಿ

ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಉಪ್ಪಿನಕಾಯಿ ಮಾರಾಟ ಮಾಡಿ ಈಕೆ ಗಳಿಸುತ್ತಿರುವುದು ಬರೋಬ್ಬರಿ ಕೋಟಿ ರೂಪಾಯಿ

ಸಮಯ ಹೇಗೆ ಬದಲಾಗುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಏಕೆಂದರೆ ಕೆಲವರ ಕೆಲಸವನ್ನು ಹೀಯಾಳಿಸಬಹುದು ಅಥವಾ ಆಡಿಕೊಂಡು ನಗಬಹುದು. ಇದೆಂತಾ ಉದ್ಯೋಗ ಎನ್ನಬಹುದು. ಆದರೆ ಶ್ರಮ ಹಾಗೂ ಕೌಶಲ್ಯದಿಂದಾಗಿ ಯಾವುದೇ ಕೆಲಸವನ್ನಾದರೂ ಉನ್ನತ ಹಂತಕ್ಕೆ ತೆಗೆದುಕೊಂಡು ಹೋಗಬಹುದು ಎಂಬುದನ್ನು ಕೆಲವರು ಸಾಬೀತು ಮಾಡಿ ತೋರಿಸಿದ್ದಾರೆ.

ನಾವು ಮನೆಯಲ್ಲಿ ತಯಾರಿಸುವ ಉಪ್ಪಿನಕಾಯಿ ವಿಚಾರವಾಗಿ ಹೇಳಲು ಹೊರಟಿದ್ದೇವೆ. ಉಪ್ಪಿನಕಾಯಿ ಬಹಳಷ್ಟು ಜನರಿಗೆ ಬಲು ಇಷ್ಟವಾದ ತಿನಿಸು. ಕೆಲವರ ಮನೆಯಲ್ಲಿ ತಾವೇ ಸಿದ್ಧಪಡಿಸುತ್ತಾರೆ. ಮತ್ತೆ ಕೆಲವರು ಅಂಗಡಿಗಳಿಂದ ತಂದು ಬಳಕೆ ಮಾಡುತ್ತಾರೆ. ಮತ್ತಷ್ಟು ಮಂದಿ ತಾವೇ ಸಿದ್ಧಪಡಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಆದರೆ ಉಪ್ಪಿನಕಾಯಿ ಹಾಕಿ ಮಾಟಾರ ಮಾಡಿ ವರ್ಷಕ್ಕೆ ಕೋಟಿಗಟ್ಟಲೇ ಆದಾಯ ಗಳಿಸುತ್ತಿದ್ದಾರೆ. ಆಕೆ ಉದ್ಯಮ ನಡೆಸುವ ಕನಸಿಗೆ ಉಪ್ಪಿನಕಾಯಿ ತಯಾರಿಕೆ ಸಾಥ್ ನೀಡಿದೆ. ತನ್ನ ಕನಸನ್ನು ನನಸಾಗಿಸಿ ಯಶಸ್ವಿ ಉದ್ಯಮಿ ಎನಿಸಿಕೊಂಡಿದ್ದಾರೆ.

ನಿಹಾರಿಕ ಭಾರ್ಗವ್ ಗೆ ಈಗ 27 ವರ್ಷ ವಯಸ್ಸು. ದೆಹಲಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಇವರು ಶಿಕ್ಷಣದ ನಂತರ ಕೆಲಸಕ್ಕೆ ಸೇರಿದರು. ಒಳ್ಳೆಯ ವೇತನವೂ ದೊರೆಯುತ್ತಿತ್ತು. ಆದರೂ 2017ರಲ್ಲಿ ಕೆಲಸ ಬಿಟ್ಟು, ಸ್ವಂತ ವ್ಯಾಪಾರ ಮಾಡಲು ಆರಂಭಿಸಿದರು. ನಿಹಾರಿಕ ಅವರ ತಂದೆ ಈ ಮೊದಲು ತರಹೇವಾರಿ ಉಪ್ಪಿನಕಾಯಿ ಮಾಡುತ್ತಿದ್ದರು. ಅಲ್ಲದೇ ಅದರ ರುಚಿಗೆ ಅವರ ಸ್ನೇಹಿತರು, ಸಂಬಂಧಿಕರು ಕೂಡ ಮನಸೋತಿದ್ದರು.

ನಿಹಾರಿಕ ಅವರ ತಂದೆ ಉಪ್ಪಿನಕಾಯಿಯನ್ನು ಎಲ್ಲರಿಗೂ ಉಡುಗೊರೆ ರೂಪದಲ್ಲಿ ನೀಡುತ್ತಿದ್ದರು. ಒಮ್ಮೆ ನಿಹಾರಿಕ ಅವರ ತಂದೆಯ ಬಳಿ ಇದನ್ನೇ ಏಕೆ ಒಂದು ವ್ಯಾಪಾರ ಮಾಡಬಾರದು? ಎಂದು ಕೇಳಿದರು. ಆಗ ನಿಹಾರಿಕ ಅವರ ತಂದೆ, ನನಗೆ ವಯಸ್ಸಾಗಿದೆ. ಹಾಗಾಗಿ ಎಲ್ಲಾ ಜವಾಬ್ದಾರಿಯನ್ನು ನೀನೇ ತೆಗೆದುಕೊಳ್ಳಬೇಕು ಎಂದರು. ಹಾಗಾಗಿ ಮಗಳಿಗೆ ಉಪ್ಪಿನಕಾಯಿ ಮಾಡುವ ವಿಧಾನ ಹೇಳಿಕೊಟ್ಟರು. ನಿಹಾರಿಕ ಸಹಾ ಬಹಳ ಇಷ್ಟ ಪಟ್ಟು ಕಲಿತರು. ಅನಂತರ ಅಂಗಡಿ ಮಾಲೀಕರ ಜೊತೆಗೆ ಮಾತನಾಡಿದರು. ಜನರು ಇಂದಿಗೂ ಮನೆಯಲ್ಲಿ ತಯಾರಾಗುವ ಉಪ್ಪಿನಕಾಯಿ ಇಷ್ಟಪಡುತ್ತಾರೆ ಎಂಬುದನ್ನು ಅರಿತುಕೊಂಡರು.

Related Articles

Leave a Reply

Your email address will not be published. Required fields are marked *

Back to top button