ನನ್ನಂತ ಹಳ್ಳಿ ಗಮಾರಿನ ಯಾರು ಮದುವೆ ಆಗ್ತಾರೆ? ಲೈವ್ ಗೆ ಬಂದು ಮದುವೆ ಬಗ್ಗೆ ಮಾತನಾಡಿದ ಅದಿತಿ ಪ್ರಭುದೇವ
ಅದಿತಿಯ ಮೂಲ ಹೆಸರು ಸುದೀಪನಾ. ಅಪ್ಪಟ ಕನ್ನಡದ ಹುಡುಗಿ ಅದಿತಿ ಪ್ರಭುದೇವ ಪ್ರಸ್ತುತ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಕೈಯಲ್ಲಿ ಹಲವು ಸಿನಿಮಾ ಆಫರ್ ಇಟ್ಟುಕೊಂಡು ಮಿಂಚುತ್ತಿದ್ದಾರೆ. ‘ಗುಂಡ್ಯಾನ್ ಹೆಂಡ್ತಿ’ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯಗೊಂಡ ಅದಿತಿ. 2017ರಲ್ಲಿ ‘ಧೈರ್ಯಂ’ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರರಂಗಕ್ಕೆ ಕಾಲಿಟ್ಟ ನಂತರವೂ ‘ನಾಗಕನ್ನಿಕೆ’ ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.
ಅದಿತಿ ಪ್ರಭುದೇವ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಅದಿತಿ ಪ್ರಭುದೇವ ಅವರು ಸಿಂಗ, ರಂಗನಾಯಕಿ, ಬಜಾರ್, ಬ್ರಹ್ಮಚಾರಿ ಸೇರಿದಂತೆ ಸುಮಾರು 8 ಕ್ಕೂ ಹೆಚ್ಚು ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಕೆಲಸ ಮಾಡಿ, ಕರ್ನಾಟಕದ ಮನೆ ಮಾತಾಗಿದ್ದಾರೆ. ಇವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಾವಿರಾರು ಜನ ಅಭಿಮಾನಿಗಳಿದ್ದು, ಅದಿತಿ ಪ್ರಭುದೇವ ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿದ್ದು, ತಮ್ಮ ಫ್ಯಾನ್ಸ್ ಜೊತೆ ಲೈವ್ ಬಂದು ಮಾತನಾಡುತ್ತಾರೆ.
ಇತ್ತೀಚಿಗೆ ಅದಿತಿ ಪ್ರಭುದೇವ ಅವರು ಲೈವ್ ಬಂದು ತಮ್ಮ ಹಳ್ಳಿ ಜೀವನದ ಬಗ್ಗೆ, ಮಾತನಾಡುತ್ತಾ ತಮ್ಮ ಮದುವೆಯ ಬಗ್ಗೆ ಕೂಡ ಮಾತಾಡಿದ್ದಾರೆ. ಅದಿತಿ ಪ್ರಭುದೇವ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಈ ಹಿಂದೆ ಕೂಡ ನಟಿ ಅದಿತಿ ಪ್ರಭುದೇವ ಅವರು ಮದುವೆಯ ಬಗ್ಗೆ ಮಾತನಾಡಿದ್ದಾರು. ‘ಎಲ್ಲರೂ ಮದುವೆ ಆಗಬೇಕು. ಮದುವೆ ಆಗದೆ ಇದ್ದರೆ ಜೀವನ ಪರಿಪೂರ್ಣ ಅನಿಸುವುದಿಲ್ಲ. ಸಮಯ ಕೂಡಿ ಬಂದಾಗ ಮದುವೆ ಆಗುತ್ತೇನೆ. ನಾನು ಮದುವೆ ಆಗುವ ಹುಡುಗ ಸಂಸ್ಕಾರ ಇರುವ ಒಳ್ಳೆಯ ಹುಡುಗ ಆಗಬೇಕು. ಅಚ್ಚ ಕನ್ನಡದ ಸ್ವಚ್ಛ ಮನಸ್ಸಿನ ಹುಡುಗ ಆಗಿರಬೇಕು ಎಂದಿದ್ದರು.
ಶ್ರೀಮಂತನ ಹೆಂಡತಿ ಅನ್ನಿಸಿಕೊಳ್ಳೋದಕ್ಕಿಂತ ‘ಶ್ರೀಮಂತ ಹೆಂಡತಿ’ ಆಗಿರೋಕೆ ಇಷ್ಟ. ನಾನು ಮೂಲತಃ ಸ್ವತಂತ್ರವಾಗಿ ಇರೋಕೆ ಬಯಸೋಳು. ಯಾರಿಗೂ, ಹೆತ್ತವರಿಗೆ ಕೂಡ, ಹೊರೆಯಾಗಿರೋದಕ್ಕೆ ನಂಗಿಷ್ಟ ಇಲ್ಲ. ಹಾಗೆ ನೋಡಿದಾಗ, ನನಗೆ ಪ್ರಾಮಾಣಿಕತೆ ಇರುವ, ಜವಾಬ್ದಾರಿ ಇರುವ ಹುಡುಗ ಬೇಕು. ಹೀಗೆ ಹುಡುಗರಿಗೆ ತನ್ನನ್ನು ಮದುವೆಯಾಗೋಳು ತನ್ನ ಅಪ್ಪಾಮ್ಮನ್ನ ಚೆನ್ನಾಗಿ ನೋಡ್ಕೋಬೇಕು ಅಂತ ಆಸೆಯಿರುತ್ತೆ, ಅಂಥದ್ದೇ ಆಸೆ ಹೆಣ್ಮಕ್ಕಳಿಗೂ ಇರುತ್ತೆ.