ಆಂಡ್ರ್ಯೂ ಜೊತೆ ಬ್ರೇಕ್ ಅಪ್:ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಂಡಿದ್ದಾರೆಯೇ ಇಲಿಯಾನಾ?
ಒಂದು ಕಾಲದಲ್ಲಿ ತೆಲುಗು ಚಿತ್ರರಂಗದಲ್ಲಿ ಪೋಕ್ರಿ ಬೆಡಗಿಯಾಗಿ ಟಾಲಿವುಡ್ ಚಿಲತ್ರರಂಗದ ಬಹುಬೇಡಿಕೆಯ ನಟಿಯಾಗಿ ಅಕ್ಷರಶಃ ಚಿತ್ರರಂಗವನ್ನು ಆಳಿದ ನಟಿ ಎಂದರೆ ಇಲಿಯಾನಾ ಡಿಕ್ರೂಸ್ ಹೌದು ಹಾಲ್ಗೆನ್ನೆಯಯಂತಹ ಬಣ್ಣ, ಕಮಲದಂತಹ ನಯನ, ಕತ್ತಿಯಂತಹ ಹುಬ್ಬು, ಸಂಪಿಗೆಯಂತಹ ಮೂಗು, ಜೇನಿನಂತಹ ತುಟಿ ದಾಳಿಂಬೆ ಹಣ್ಣಿನಂತಹ ಹಲ್ಲುಗಳು, ಈಕೆ ನಡು ತೂರಿಸಿದರೆ ಸಾಕು ತೆಲುಗು ಚಿತ್ರರಂಗದ ಪಡ್ಡೆ ಹುಡುಗರು ಒಂದು ಕ್ಷಣ ಕಣ್ಣು ಮುಚ್ಚಿ ಎದೆಯ ಮೇಲೆ ಕೈ ಇಟ್ಟು ಕೊಳ್ಳುತ್ತಿದ್ದರು. ಇಷ್ಟರಮಟ್ಟಿಗೆ ತೆಲುಗು ಚಿತ್ರರಂಗದಲ್ಲಿ ತಮ್ಮನ್ನ ತಾವು ಸ್ಥಾಪಿಸಿಕೊಂಡವರು ನಟಿ ಇಲಿಯಾನ ಅವರು.
ಸದ್ಯ ಇದೀಗ ಇಲಿಯಾನಾ ತೆಲುಗು ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ದು ಬಾಲಿವುಡ್ ಚಿತ್ರರಂಗದಲ್ಲಿ ಸಾಲು ಸಾಲು ಸ್ಟಾರ್ ನಟರ ಜೊತೆ ಅಭಿನಯಿಸುತ್ತಿದ್ದಾರೆ. ಅಲ್ಲದೇ ಸೌತ್ ಇಂಡಿಯಾ ಸೇರಿದಂತೆ ಬಾಲಿವುಡ್ ನಲ್ಲಿಯೂ ಕೂಡ ಅಪಾರ ಮಟ್ಟದಲ್ಲಿ ಅಭಿಮಾನಿಗಳ ಬಳಗವನ್ನು ಹೊಂದಿರುವ ಇಲಿಯಾನಾ, ಸದಾ ಒಂದಲ್ಲ ಒಂದು ವಿಚಾರದಿಂದ ನೆಟ್ಟಿಗರ ಕೆಂಗಣ್ಣಿಗೆ ತುತ್ತಾಗುತ್ತಾರೆ, ಅದರಲ್ಲಿಯೂ ಮದುವೆ ವಿಚಾರದಲ್ಲಂತೂ ಸದಾ ಸುದ್ದಿಯಲ್ಲಿ ಇರುತ್ತಾರೆ. ಇತ್ತೀಚಿಗಷ್ಟೆ ಬಿಗ್ ಬುಲ್ ಎಂಬ ಸಿನಿಮಾದ ಮೂಲಕ ಪ್ರೇಕ್ಷಕರ ಎದುರು ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಂದ ಇಲಿಯಾನಾ,
ಸಿನಿಮಾದಲ್ಲಿ ಜರ್ನಲಿಸ್ಟ್ ಆಗಿ ಬಣ್ಣವನ್ನೂ ಹಚ್ಚಿದ್ದರು ಅಲ್ಲದೆ ಈ ಸಿನಿಮಾದ ಅಭಿನಯಕ್ಕಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಯನ್ನು ಕೂಡ ಗಳಿಸಿಕೊಂಡಿದ್ದ ಇಲಿಯಾನಾ ಅವರು ಇದೀಗ ತನ್ನ ಬಗ್ಗೆ ಹರಿದಾಡುತ್ತಿದ್ದ ವದಂತಿಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಹೌದು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಲಿಯಾನಾ ಗರ್ಭಿಣಿ ಆಗಿದ್ದಾರೆ, ಗರ್ಭಪಾತ ಮಾಡಿಕೊಂಡಿದ್ದಾರೆ, ಆತ್ಮಹತ್ಯೆಗೂ ಕೂಡ ಯತ್ನಿಸಿದ್ದರು, ಎಂಬುವಂತಹ ಸುಳ್ಳು ಸುದ್ದಿಗಳೆಲ್ಲ ಜೋರಾಗಿಯೇ ಹರಿದಾಡುತ್ತಿತ್ತು. ಇದರಿಂದ ಬೇಸತ್ತು ಹೋಗಿದ್ದ ಇಲಿಯಾನ ಅವರು ಇದೀಗ ಇತಂಹ ವಂದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ.
ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ನಟಿ ಇಲಿಯಾನ ಅವರು ‘ಈ ರೀತಿಯಾದಂತಹ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದು ನನ್ನ ಮನಸ್ಸಿಗೆ ಬಹಳ ಬೇಸರವಾಗಿದೆ ಹಾಗೂ ನಿಜಕ್ಕೂ ಬಹಳ ದುಃಖವಾಗುತ್ತಿದೆ. ನಾನು ಆತ್ಮಹತ್ಯೆ ಮಾಡಿಕೊಂಡಿದ್ದೀನಿ, ನನ್ನ ಸೇವಕಿ ಎಲ್ಲರಿಗೂ ಈ ವಿಚಾರ ತಿಳಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ನಾನು ಬದುಕಿದ್ದೀನಿ, ನನಗೆ ಯಾವ ಸೇವಕಿಯೂ ಇಲ್ಲ. ಇಂಥಹ ಸುಳ್ಳು ಸುದ್ದಿಗಳನ್ನು ಎಲ್ಲಿಂದ ಪಡೆಯುತ್ತಿದ್ದಾರೆ ಎಂದು ನನಗೆ ತಿಳಿದಿಲ್ಲ’ ಎಂದು ಬೇಸರವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಹಿಂದೆಯೂ ಕೂಡ ವಿವಾಹದ ವಿಚಾರದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ಇಲಿಯಾನಾ,ಕೆಲವು ವರುಷಗಳ ಹಿಂದೆಯಷ್ಟೆ ಫೋಟೋಗ್ರಾಫರ್ ಆ್ಯಂಡ್ರ್ಯೂ ನೀಬೋನ್ ಅವರ ಜೊತೆ ಪ್ರೀತಿಯಲ್ಲಿ ತೇಲಾಡುತ್ತಿದ್ದರು ಎಂದೇ ಹೇಳಲಾಗುತ್ತಿತ್ತು. ಇದರ ಬೆನ್ನಲ್ಲೇ ಇಲಿಯಾನ ಅವರು ಸಾಲುಸಾಲು ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೇಮದ ವಿಚಾರವನ್ನು ಬಹಿರಂಗ ಪಡಿಸುತ್ತಿದ್ದರು. ಅಲ್ಲದೆ ಇನ್ನೇನು ಈ ಜೋಡಿಗಳು ವಿವಾಹ ವಾಗಿಯೇ ಬಿಡುತ್ತಾರೆ ಎಂಬುವಂತಹ ಸುದ್ದಿಯೂ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು.