ಶಿವರಾಜ್ ಕುಮಾರ್ ಮನೆ ಹೇಗಿದೆ ಮೊದಲ ಬಾರಿಗೆ ನೋಡಿ… ಬೆಚ್ಚಿ ಬೀಳ್ತೀರಾ!
ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಈಗಲೂ ಕೂಡ ಚಿರಯುವಕನಂತೆ ಕಾಣುತ್ತಾರೆ. ಅವರ ವಯಸ್ಸು 59 ದಾಟಿದರೂ ಕೂಡ ಮುಖದ ಕಳೆ ಹಾಗೂ ಅವರ ಎನರ್ಜಿ ಸ್ವಲ್ಪವೂ ಕಡಿಮೆಯಾಗಿಲ್ಲ. ಇನ್ನು ಈಗಲೂ ಕೂಡ ಸಿನಿಮಾ ಚಿತ್ರಕರಣದಲ್ಲಿ ಸದಾ ಬ್ಯುಸಿ ಇರುವ ಶಿವರಾಜ್ ಕುಮಾರ್ ರವರು ತಮ್ಮ ಸಾಂಸಾರಿಕ ಜೀವನದಲ್ಲಿ ಕೂಡ ಯಶಸ್ವಿಯಾಗಿದ್ದಾರೆ ಎನ್ನಬಹುದು. ಶಿವರಾಜ್ ಕುಮಾರ್ ಮತ್ತು ಗೀತಾ ಜೋಡಿ ಜೋಡಿ ಎಷ್ಟೋ ಮಂದಿ ಸೆಲೆಬ್ರೆಟಿ ಜೋಡಿಗಳಿಗೆ ಸ್ಫೂರ್ತಿ.
ಶಿವರಾಜ್ ಕುಮಾರ್ ರವರ ಅಭಿರುಚಿಗೆ ತಕ್ಕಂತೆ ಕಟ್ಟಿಸಿಕೊಂಡಿರುವ ಮನೆ ಎಲ್ಲಿದೆ ಮತ್ತು ಹೇಗಿದೆಯೆಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ. ಬೆಂಗಳೂರಿನ ಯಲಹಂಕ ಹೆಬ್ಬಾಳ ರಸ್ತೆಯಲ್ಲಿ ಡಾ. ರಾಜ್ ಕುಮಾರ್ ಮಗ ಆಗಿರುವ ಶಿವರಾಜ್ ಕುಮಾರ್ ರವರ ಸುಂದರವಾದ ಮುದ್ದಾದ ಮನೆ ಇದೆ. ಈ ಮನೆಯ ಮುಂಭಾಗದಲ್ಲಿ ವಿಶಾಲವಾದ ಹಾಲ್, ಆಧುನಿಕ ಶೈಲಿಯಲ್ಲಿ ನಿರ್ಮಾಣ ಮಾಡಿರುವ ಅಡುಗೆ ಮನೆ, ವಿಶಾಲವಾದಂತಹ ಮನೆಯ ಹೊರಾಂಗಣ ಹಾಗೂ ತಮ್ಮ ಮನೆಯನ್ನು ತುಂಬಾ ವಿಶಾಲವಾಗಿ ಕಟ್ಟಿಸಿಕೊಂಡಿರುವ ಶಿವರಾಜ್ ಕುಮಾರ್ ಅವರು ಮನೆಯ ಒಳಗೆ ಮತ್ತು ಹೊರಗೆ ಎರಡೂ ಕಡೆಯೂ ವಿಶೇಷವಾಗಿ ಸಿಟ್ಟಿಂಗ್ ಕ್ಯಾಬಿನೆಟ್ ಮಾಡಿಕೊಂಡಿದ್ದಾರೆ.
ಸಿನಿಮಾದ ಯಾವುದೇ ವಿಚಾರವಿದ್ದರೂ ಸಹ ಇಲ್ಲಿಯೇ ಕೂತು ಮಾತುಕತೆಯನ್ನೂ ನಡೆಸುತ್ತಾರೆ ಎನ್ನಲಾಗುತ್ತದೆ. ಇನ್ನೂ ಸೌತ್ ಇಂಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ನಟ ಶಿವರಾಜ್ ಕುಮಾರ್ ಅವರಿಗೆ ಈಗಲೂ ಕೋಟ್ಯಾಂತರ ಅಭಿಮಾನಿಗಳಿದ್ದಾರೆ ಎಂದರೆ ತಪ್ಪಾಗಲಾರದು. ಶಿವರಾಜ್ ಕುಮಾರ್ ಅವರ ನಟನೆಗೆ,ಡ್ಯಾನ್ಸ್ ಗೆ, ಎನರ್ಜಿಗೆ ಮತ್ತು ಅವರ ಖಡಕ್ ಗೆ ಮನಸೋಲದವರಿಲ್ಲ. ಇನ್ನು ಶಿವರಾಜ್ ಕುಮಾರ್ ಅವರ ಚಲನಚಿತ್ರಗಳು ಪಕ್ಕಾ ಫ್ಯಾಮಿಲಿ ಅಟ್ಯಾಚ್ ಮೆಂಟನ್ನು ಒಳಗೊಂಡಿರುತ್ತದೆ ಹೀಗಾಗಿ ಕುಟುಂಬ ಸದಸ್ಯರೆಲ್ಲರೂ ಕುಳಿತು ಶಿವರಾಜ್ ಕುಮಾರ್ ರವರ ಚಿತ್ರಗಳನ್ನು ನೋಡಿ ಆನಂದಿಸಬಹುದು. ಶಿವರಾಜ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯವನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.