ಜಯಂತಿ ಇರುವಾಗಲೇ ಮಗನಿಗೆ ವಿಚ್ಚೇದನ ಕೊಟ್ಟ ಅನುಪ್ರಭಾಕರ್! ಇಹಲೋಕ ತ್ಯಜಿಸಿದ ಮೇಲೆ ಹೇಳಿದ್ದೇನು ಗೊತ್ತಾ?
ಚಂದನವನದ ಹಿರಿಯ ನಟಿ ಅಭಿನಯ ಶಾರದೆ ಜಯಂತಿ ಇನ್ನು ನೆನಪು ಮಾತ್ರ. ಜುಲೈ 26 ರ ಬೆಳಗ್ಗೆ ನಟಿ ಜಯಂತಿ ಬಾರದ ಲೋಕಕ್ಕೆ ಹೊರಟು ಹೋಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಯಂತಿ ಅನೇಕ ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಸಾಯುವ ಕೆಲ ದಿನಗಳ ಹಿಂದೆ ಜಯಂತಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದರು. ಸ್ಯಾಂಡಲ್ ವುಡ್ ನ ಹಿರಿಯ ನಟಿಯ ನಿಧನಕ್ಕೆ ರಾಜಕೀಯ ಮತ್ತು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದರು. ಇದೀಗ ಜಯಂತಿ ಅವರ ಮಾಜಿ ಸೊಸೆ ಆಗಿರುವ ಖ್ಯಾತ ನಟಿ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದ ಮೂಲಕ ಬಾವುಕ ವಿದಾಯ ಹೇಳಿದ್ದಾರೆ.
“ನಿಮ್ಮ ಜೊತೆ ಕಳೆದಂತಹ ಪ್ರತೀಕ್ಷಣ ಸದಾ ನನ್ನ ಮನಸ್ಸು ಹಾಗೂ ಹೃದಯ ದಲ್ಲಿ ಇರುತ್ತದೆ ಅಮ್ಮ❤️ ಎಂದು ಭಾವುಕ ನುಡಿ ಗಳ ಜೊತೆಗೆ ನಿಮ್ಮಿಂದ ಕಲಿತ ಜೀವನದ ಪಾಠಗಳು ನಾನು ಎಂದೂ ಮರೆಯುವುದಿಲ್ಲ. ನಿಮ್ಮ ಆತ್ಮೀಯರನ್ನು ಕಳೆದುಕೊಂಡಾಗ ಈ ವಿಷಯದ ಬಗ್ಗೆ ಎಷ್ಟೋ ಬಾರಿ ನನ್ನ ಬಳಿ ಮಾತಾಡಿದ್ದೀರಿ. ಅಮ್ಮಮ್ಮಾ ಜೊತೆ ನೆಮ್ಮದಿಯಿಂದ ಇರಿ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಬರೆದುಕೊಂಡಿದ್ದಾರೆ.
ಅನು ಪ್ರಭಾಕರ್ 2002ರಲ್ಲಿ ಜಯಂತಿ ಪುತ್ರ ಕೃಷ್ಣಕುಮಾರ್ ಅವರನ್ನು ವಿವಾಹವಾಗಿದ್ದರು. ನಂತರ 2014ರಲ್ಲಿ ಅನುಪ್ರಭಾಕರ್ ಕೃಷ್ಣ ಕುಮಾರ್ ಅವರಿಂದ ವಿಚ್ಛೇದನ ಪಡೆದುಕೊಂಡು 12 ವರ್ಷದ ದಾಂಪತ್ಯ ಜೀವನವನ್ನು ಅವರ ಜೊತೆ ಮುಗಿಸಿದ್ದರು ಬಳಿಕ 2016ರಲ್ಲಿ ಅನುಪ್ರಭಾಕರ್ ರಘುಮುಖರ್ಜಿ ಯವರ ಜೊತೆ ಎರಡನೇ ಮದುವೆಯಾದರು.
ಒಮ್ಮೆ ಮಾಧ್ಯಮವೊಂದು ಮಗ ಕೃಷ್ಣ ಕುಮಾರ್ ಹಾಗೂ ಸೊಸೆ ಅನುಪ್ರಭಾಕರ್ ವಿಚ್ಛೇದನದ ಬಗ್ಗೆ ಕೇಳಿದ ಪ್ರಶ್ನೆಗೆ ಈ ಬಗ್ಗೆ ನಾನು ಏನನ್ನು ಹೇಳುವುದಿಲ್ಲ, ನನ್ನ ಪಾಲಿಗೆ ಅದೊಂದು ಮುಗಿದ ಅಧ್ಯಾಯ. ಒಂದು ವೇಳೆ ಅದರ ಬಗ್ಗೆ ಮಾತನಾಡಿದರೆ ಅಳುವೇ ನನ್ನ ಉತ್ತರ ಹಾಗಾಗಿ ಆ ವಿಚಾರವನ್ನು ಅಲ್ಲಿಗೆ ಬಿಟ್ಟುಬಿಡಿ” ಎಂದಿದ್ದರಂತೆ. ನಟಿ ಜಯಂತಿ ಅವರ ಮಗ ಕೃಷ್ಣ ಕುಮಾರ್ ಹಾಗೂ ಅನುಪ್ರಭಾಕರ್ ವಿಚ್ಛೇದನಕ್ಕೆ ಕಾರಣವೇನಿರಬಹುದು ಎಂದು ನಮಗೆ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.