ಗೋಲ್ಡ್ ಶಾಪ್ ನಲ್ಲಿ ಒಡವೆ ಕದ್ದು ಸಿಕ್ಕಿಬಿದ್ದ ಟಾಪ್ ನಟಿ ಯಾರು ಗೊತ್ತಾ? ಇಡೀ ಚಿತ್ರರಂಗವೇ ಶಾಕ್!
ಸಾರ್ವಜನಿಕ ಜೀವನದಲ್ಲಿ ಸೆಲೆಬ್ರಿಟಿಗಳು ಜನಸಾಮಾನ್ಯರಿಗೆ ಮಾದರಿಯಾಗುವಂತೆ ಇರಬೇಕಾಗುತ್ತದೆ. ಅವರ ಪ್ರತಿಯೊಂದು ನಡೆನುಡಿಯನ್ನು ಸಾಮಾನ್ಯ ಜನ ಗಮನಿಸುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇರುವ ನಟನಟಿಯರು ತುಂಬಾ ನೈತಿಕವಾಗಿ ಬದುಕಬೇಕಾಗುತ್ತದೆ ಆದರೆ ಈ ನಟಿ ತನ್ನ ದುರಾಸೆಯಿಂದ ಮಾಡಿದ ಕೆಲಸದಿಂದ ತನ್ನ ಮಾನ ಮರ್ಯಾದೆಯನ್ನು ಮೂರು ಕಾಸಿಗೆ ಹರಾಜು ಹಾಕಿಕೊಂಡಿದ್ದಾಳೆ. ಜನ ಸಾಮಾನ್ಯರಿಂದ ಚೀ ತೂ ಎನಿಸಿಕೊಂಡಿದ್ದಾಳೆ.
ಬಾಲಿವುಡ್ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿರುವ ಸ್ವಸ್ತಿಕಾ ಮುಖರ್ಜಿ. ಬೆಂಗಾಲಿ ಸಿನಿಮಾಗಳಲ್ಲಿ ಈಕೆ ಸ್ಟಾರ್ ಹೀರೋಯಿನ್, ಈಕೆಯ ಬಳಿ ಹಣ ಆಸ್ತಿ ಎಲ್ಲವೂ ಸಾಕಷ್ಟಿದೆ ಆದರೆ ಈಕೆಯ ಒಂದು ಸಣ್ಣ ದುರಾಸೆಯಿಂದ ಒಮ್ಮೆ ಮಾಡಬಾರದ ಕೆಲಸ ಮಾಡಿದ್ದಳು. ಕಳೆದ ಕೆಲವು ವರ್ಷಗಳ ಹಿಂದೆ ಸಿಂಗಾಪುರದಲ್ಲಿ ಬೆಂಗಾಲಿ ಫಿಲ್ಮ್ ಫೆಸ್ಟಿವಲನ್ನು ಆಯೋಜಿಸಲಾಗಿತ್ತು. ಈ ಫೆಸ್ಟಿವಲ್ ನಲ್ಲಿ ಸ್ವಸ್ತಿಕ್ ಕೂಡಾ ಭಾಗವಹಿಸಿದ್ದರು.
ಈ ಫಿಲ್ಮ್ ಫೆಸ್ಟಿವಲ್ ನಲ್ಲಿ ಈಕೆಯೂ ಕೂಡ ಪ್ರಮುಖ ಆಕರ್ಷಣೆಯಾಗಿದ್ದರು. ಫಿಲ್ಮ್ ಫೆಸ್ಟಿವಲ್ ನಲ್ಲಿ ಕಾರ್ಯಕ್ರಮಗಳು ಮುಗಿದ ನಂತರ ಸಿಂಗಪುರದ ಪ್ರತಿಷ್ಠಿತ ಚಿನ್ನದಂಗಡಿಯೊಂದಕ್ಕೆ ಶಾಪಿಂಗ್ ಮಾಡಲು ಹೋಗಿದ್ದರು. ಗೋಲ್ಡ್ ಶಾಪ್ ನಲ್ಲಿ ಶಾಪಿಂಗ್ ಮಾಡುತ್ತಿದ್ದ ಈ ನಟಿ ಸುತ್ತ ಮುತ್ತ ನೋಡಿ 2 ಕಿವಿಯೋಲೆ ಮತ್ತು 1 ನೆಕ್ಲೆಸ್ ಅನ್ನು ತನ್ನ ಬ್ಯಾಗಿನಲ್ಲಿ ಹಾಕಿಕೊಂಡಳು ನಂತರ ಇನ್ನೂ ಕೆಲವು ಒಡವೆಗಳನ್ನು ಖರೀದಿಸಿದ ಈಕೆ ಅವುಗಳಿಗೆ ಮಾತ್ರ ಹಣ ಕಟ್ಟಿ ಏನೂ ಗೊತ್ತಿಲ್ಲದಂತೆ ಶಾಪ್ ನಿಂದ ಹೊರಗೆ ಬಂದಳು. ಈಕೆ ಹೊರಗೆ ಬಂದ ಕೆಲವೇ ಸಮಯದಲ್ಲಿ ಆಕೆ ಒಡವೆ ಕದ್ದಿರುವ ಸಿಸಿಟಿವಿ ದೃಶ್ಯಗಳನ್ನು ಚಿನ್ನದಂಗಡಿಯ ಸಿಬ್ಬಂದಿ ವೀಕ್ಷಿಸಿದರು ನಂತರ ತಕ್ಷಣವೇ ಶಾಪ್ ಪಕ್ಕದಲ್ಲೇ ಇದ್ದ ನಟಿ ಸ್ವಸ್ತಿಕ ಅವರನ್ನು ಹಿಡಿದ ಸೆಕ್ಯುರಿಟಿಯವರು ಬ್ಯಾಗ್ ಪರಿಶೀಲಿಸಿದ ನಂತರ ಬಿಲ್ ತೋರಿಸುವಂತೆ ಹೇಳಿದರು.
ಬಿಲ್ ಪರಿಶೀಲಿಸಿದ ಸಿಬ್ಬಂದಿ ಓಲೆ ಮತ್ತು ನೆಕ್ಲೆಸಿನ ಬಿಲ್ ಎಲ್ಲಿ ಎಂದು ಗಡಸು ಧ್ವನಿಯಲ್ಲಿ ಕೇಳಿದರು. ತನಗೇನೂ ಗೊತ್ತಿಲ್ಲ ಇದು ನನ್ನ ಬ್ಯಾಗ್ ನಲ್ಲಿ ಹೇಗೆ ಬಂತು ಎಂಬುದೇ ನನಗೆ ತಿಳಿಯುತ್ತಿಲ್ಲ ಎಂದು ತನಗೇನೂ ಗೊತ್ತಿಲ್ಲವೆಂಬಂತೆ ಈ ನಟಿ ನಟಿಸುತ್ತಿದ್ದಾಗ ಸಿಸಿಟಿವಿ ದೃಶ್ಯಗಳನ್ನು ಈ ನಟಿಗೆ ತೋರಿಸಿದ ಶಾಪ್ ಓನರ್ ಸ್ವಸ್ತಿಕಾಗೆ ಸಖತ್ ಕ್ಲಾಸ್ ತೆಗೆದುಕೊಂಡರು ನಂತರ ಫೆಸ್ಟಿವಲ್ ನ ಆಯೋಜಕರು ಶಾಪ್ ಓನರ್ ಗೆ ಸಮಾಧಾನ ಮಾಡಿ ಕದ್ದ ವಸ್ತುಗಳನ್ನು ವಾಪಸ್ ಕೊಡಿಸಿದರು. ಈಕೆಯ ದೊಡ್ಡ ಪುಣ್ಯ ಏನು ಎಂದರೆ ಚಿನ್ನದಂಗಡಿಯ ಯಜಮಾನ ಈಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಡಲಿಲ್ಲ. ಆಕಸ್ಮಾತ್ ಈಕೆಯ ಮೇಲೆ ಪೊಲೀಸ್ ಕಂಪ್ಲೇಂಟ್ ಫೈಲಾಗಿದ್ದರೆ ಸಿಂಗಪುರದ ಕಾನೂನಿನ ಪ್ರಕಾರ 10 ವರ್ಷ ಜೈಲಿನಲ್ಲಿ ಕೊಳೆಯಬೇಕಾಗುತ್ತಿತ್ತು. ಈ ಸೆಲೆಬ್ರಿಟಿ ಕದ್ದಿರುವ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.