44 ವಯಸ್ಸು ಆದರೂ ಚಿಂತೆ ಇಲ್ಲ ಮಗುವನ್ನು ಹೆರಬಹುದು ಎಂದು ಸಾಧಿಸಿ ತೋರಿಸಿದ ಕನ್ನಡ ಖ್ಯಾತ ನಟಿ ಇವರೇ ನೋಡಿ !!
ಸ್ನೇಹಿತರೇ, ನಮಗೆಲ್ಲಾ ತಿಳಿದಿರುವ ಹಾಗೆ ಭಾರತ ಚಿತ್ರರಂಗ ಕಂಡ ಜನಪ್ರಿಯ ನಟಿಯರಲ್ಲಿ ನಟಿ ಊರ್ವಶಿ ಕೂಡ ಒಬ್ಬರು ಅಂತನೇ ಹೇಳಬಹುದು. ಹೌದು ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತಮಿಳು ಭಾಷೆಯಲ್ಲಿ ಮಿಂಚಿರುವ ನಟಿ ಊರ್ವಶಿ ತಮ್ಮ ಸಿನಿ ಬದುಕಿನಲ್ಲಿ,
ಡಾ.ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ರವಿಚಂದ್ರನ್, ರಜನಿಕಾಂತ್, ಕಮಲ್ ಹಾಸನ್ ಸೇರಿದಂತೆ ಸಾಕಷ್ಟು ದಿಗ್ಗಜ ಕಲಾವಿದರೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಮೂಲತಃ ಕೇರಳದವರಾದ ನಟಿ 1984 ರಲ್ಲಿ ಶ್ರಾವಣ ಬಂತು ಸಿನಿಮಾದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಾರೆ.
ಅದು ಕೂಡ ಕನ್ನಡದ ಮಾಣಿಕ್ಯ ಡಾ. ರಾಜಕುಮಾರ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ. ಅಲ್ಲದೆ ಈ ಸಿನಿಮಾದ ನಂತರ ಊರ್ವಶಿಯವರಿಗೆ ಕನ್ನಡ ಚಿತ್ರರಂಗದಲ್ಲಿ ನೆಲೆಯೂರಲು ಭದ್ರಬುನಾದಿ ದೊರೆತಂತಾಯಿತು ಅಂತಾನೆ ಹೇಳಬಹುದು.
ಇನ್ನು ಚಿಕ್ಕಂದಿನಿಂದಲೂ ಬಹಳ ಚೂಟಿಯಾಗಿದ್ದ ನಟಿ ತಮ್ಮ ಹತ್ತನೇ ವಯಸ್ಸಿನಲ್ಲೇ ಮಲಯಾಳಂ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ 1980 ರಲ್ಲಿ ಮಲಯಾಳಂ ಚಿತ್ರದಲ್ಲಿ ಪರಿಪೂರ್ಣ ನಾಯಕಿಯಾಗಿ ನಂತರ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ನಾಯಕಿ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಶುರುಮಾಡಿದರು.
ಅಷ್ಟೇ ಅಲ್ಲದೆ ಕನ್ನಡದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರೊಟ್ಟಿಗೆ ಅಭಿನಯಿಸಿದ ‘ನಾನು ನನ್ನ ಹೆಂಡತಿ’ ಚಿತ್ರದಲ್ಲಿ ಬಹಳ ಚೂಟಿಯಾಗಿ ಅಭಿನಯಿಸಿ ಅಪಾರ ಪ್ರಶಂಸೆಗೆ ಪಾತ್ರರಾಗಿದ್ದರು ನಟಿ ಉರ್ವಶಿ. ಅಲ್ಲದೆ ಬಹಳ ದುಂಡು ದುಂಡಾಗಿರುವ ಊರ್ವಶಿ ಯವರನ್ನು ಕಂಡರೆ ಸಿನಿಪ್ರೇಕ್ಷಕರಿಗೆ ಹೆಚ್ಚು ಪ್ರೀತಿ.