ಸುದ್ದಿ

ಪುರುಷರಿಗಿಂತ ಮಹಿಳೆಯರು ಹೆಚ್ಚು ವರ್ಷ ಬದುಕಲು ಕಾರಣ ಏನು ಗೊತ್ತಾ ?? ಕೊನೆಗೂ ಅಸಲಿ ಸತ್ಯ ಬಯಲು !!

ಸ್ನೇಹಿತರೆ ಸುಮ್ಮನೆ ಹಾಗೆ ಒಂದು ಯೋಚನೆ ಮಾಡಿ ಈ ಜಗತ್ತಿನಲ್ಲಿ ಅತಿ ಹೆಚ್ಚು ಕಾಲ ಬದುಕೋದು ಪುರುಷರ ಅಥವಾ ಮಹಿಳೆಯರ. ಈ ಪ್ರಶ್ನೆಗೆ ಉತ್ತರ ಮಹಿಳೆಯರು. ಹೌದು ಮಹಿಳೆಯರು ಪುರುಷರಿಗಿಂತ ಹೆಚ್ಚು ವರ್ಷಗಳ ಕಾಲ ಬದುಕುತ್ತಾರೆ.

ಹೌದು ಸಾಮಾನ್ಯವಾಗಿ ಭೂಮಿ ಮೇಲೆ ಬದುಕುವ ಎಲ್ಲ ಜೀವಿಗಳಿಗೂ ಇಂತಿಷ್ಟು ಆಯಸ್ಸು ಎಂದು ಆ ದೇವರು ಮೊದಲೇ ಬರೆದು ಕಳುಹಿಸುತ್ತಾನೆ ಅಂತ ಹೇಳ್ತಾರೆ. ಅದೇ ರೀತಿ ಮಾನವನು ಕೂಡ ಇಂತಿಷ್ಟು ವರ್ಷ ಬದುಕಬಲ್ಲ ಅಂತ ಅಂದಾಜಿಸಿ ಹೇಳಬಹುದು.

ಆದರೆ ಕೆಲವರು ಯಾವುದೋ ಆರೋಗ್ಯ ಸಮಸ್ಯೆಯಿಂದ ಮತ್ತು ಆಘಾತದಿಂದ ಸತ್ತರೆ ಹಾಗೆ ಇನ್ನೂ ಮತ್ತಷ್ಟು ಜನರು ಸ್ವಯಂಪ್ರೇರಿತರಾಗಿ ಜೀವ ಜೀವ ಕಳೆದುಕೊಳ್ಳಬಹುದು. ಇನ್ನು ಇತ್ತೀಚಿಗೆ ನಡೆದ ಸಂಶೋಧನೆಯೊಂದರಲ್ಲಿ

ಭೂಮಿಯಮೇಲೆ ಪುರುಷರಿಗಿಂತ ಮಹಿಳೆಯರೇ ಹೆಚ್ಚು ವರ್ಷ ಬದುಕುತ್ತಾರೆ ಅನ್ನೋದು ವರದಿಯಾಗಿದೆ. ಹೌದು ದಕ್ಷಿಣ ಡೆನ್ಮಾರ್ಕ್ ವಿಶ್ವವಿದ್ಯಾಲಯದ ಜನಸಂಖ್ಯೆಯ ವಿಭಾಗದ ಸಹಾಯಕ ಪ್ರಾಧ್ಯಾಪಕ ವರ್ಜಿನಿಯ ಜರುಲ್ಲಿ, ವಿಶ್ವದಾದ್ಯಂತ ಮಹಿಳೆಯರ ಸರಾಸರಿ ವಯಸ್ಸು ಪುರುಷರಿಗಿಂತ ಹೆಚ್ಚಾಗಿದೆ ಎಂದಿದ್ದಾರೆ.

ಅಲ್ಲದೆ ಅದಕ್ಕೆ ಎರಡು ಕಾರಣಗಳನ್ನು ಕೂಡ ನೀಡಿದ್ದಾರೆ. ಮೊದಲಿಗೆ ಮಹಿಳೆಯರಲ್ಲಿ ಹೆಚ್ಚು ಈಸ್ಟ್ರೋಜೆನ್ ಮತ್ತು ಕಡಿಮೆ ಟೆಸ್ಟೋಸ್ಟೆರಾನ್ ಉತ್ಪಾದನೆಯಾಗುತ್ತದೆ ಮತ್ತು ಈ ಈಸ್ಟ್ರೋಜೆನ್ ಕಾರಣದಿಂದಾಗಿ ಮಹಿಳೆಯರಿಗೆ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆ ಸೇರಿ ಅನೇಕ ರೋಗಗಳಿಂದ ರಕ್ಷಣೆ ಸಿಗುತ್ತದೆ.

ಅಷ್ಟೇ ಅಲ್ಲದೆ ಮಹಿಳೆಯರು ಪ್ರಕೃತಿಯಿಂದ ಒಂದು ಉಡುಗೊರೆ ಪಡೆದಿದ್ದಾರೆ ಎಂದರೆ ನೀವು ನಂಬಲೇಬೇಕು, ಹೀಗಾಗಿ ಅವರು ಪುರುಷರಿಗಿಂತ ಹೆಚ್ಚು ವರ್ಷ ಬದುಕುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಹಾಗೆಯೇ ಮತ್ತೊಂದು ಪ್ರಮುಖ ಕಾರಣ ಅಂದರೆ ಅದು ಮಹಿಳೆಯರು ಹೆಚ್ಚು ಅವರ ಆರೋಗ್ಯದ ಮೇಲೆ ಗಮನ ಹರಿಸುತ್ತಾರೆ. ಉದಾಹರಣೆಗೆ ಪುರುಷರು ಸಾಮಾನ್ಯವಾಗಿ ಕೆಲಸ ಹಾಗೂ ದೈನಂದಿನ ಜಂಜಡದ ಪರಿಣಾಮದಿಂದಾಗಿ ಆರೋಗ್ಯದ ಮೇಲೆ ಹೆಚ್ಚು ಗಮನ ಹರಿಸುವುದಿಲ್ಲ.

Related Articles

Leave a Reply

Your email address will not be published. Required fields are marked *

Back to top button