ಶ್ರುತಿ ದೂರವಾದ ಮೇಲೆ ಎಸ ಮಹೇಂದರ್ ಮದುವೆಯಾಗಿದ್ದು ಯಾರನ್ನು ಗೊತ್ತಾ…ನೋಡಿ ಕುಟುಂಬ
ಮಹೇಂದರ್, ಕನ್ನಡ ಚಿತ್ರರಂಗ ಕಂಡ ಎವರ್ ಗ್ರೀನ್ ನಿರ್ದೇಶಕ, ಬರಹಗಾರ, ಹಾಗೂ ನಿರ್ಮಾಪಕ. ಅದೆಷ್ಟೋ ಪ್ರತಿಬೆಗಳನ್ನು ಸ್ಯಾಂಡಲಂ ವುಡ್ ನಲ್ಲಿಸ್ಟಾರ್ ನಟರನ್ನಾಗಿ ಮಾಡಿದ ನಿರ್ದೇಶಕ ಇವರಾಗಿದ್ದು, ಕನ್ನಡ ಸಿನಿರಸಿಕರಿಕೆ ಭಾವಾನತ್ಮಕ ಸಿನಿಮಾಗಳನ್ನು ನೀಡಿ ಕಣ್ಣಂಚಲ್ಲಿ ನೀರು ತರಿಸಿದ ಅತ್ಯದ್ಭುತ ಕಲಾಕಾರ ಅಂತಾನೇ ಹೇಳಬಹುದು. ಅದೊಂದು ಕಾಲವಿತ್ತು ಎಸ್‍ಮಹೇಂದರ್ ಅವರು ಅಂದರೆ ಕನ್ನಡ ನಿರ್ಮಾಪಕರಿಗೆ ಬಹಳ ಅಚ್ಚುಮೆಚ್ಚು ಹಾಗೂ ಅವರ ಡೇಟ್ಸ್‍ಗಾಗಿ ಕಾಯುತ್ತಿದ್ದರು.
ಸಂಬಂದಗಳನ್ನು ಕಥಾವಸ್ತುಗಳನ್ನಾಗಿ ಮಾಡಿಕೊಂಡಯ, ಜೀವನ ಮೌಲ್ಯಗಳನ್ನು ತೋರಿಸಿ, ಪ್ರೇಕ್ಷಕರ ಮನ ಗೆಲ್ಲುತ್ತಿದ್ದ ಮಹೇಂದರ್ ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಿ ಹಿಟ್‍ಗಳ ಮೇಲೆ ಹಿಟ್ ನೀಡಿ, ನಿರ್ಮಾಪಕರ ಜೇಬು ತುಂಬಿಸುತ್ತಿದ್ದಂತು ಸತ್ಯ. ಕರ್ನಾಟಕದ ಕೊಳ್ಳೆಗಾಲದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಎಸ್ ಮಹೇಂದರ್ ಬಾಲ್ಯದಿಂದಲೂ ಕಥೆ ಹೇಳುವುದು, ಕೇಳುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದರು.
ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿ, ನಾಯಕನಟರಾಗಿಯೂ ಕೂಡ ಅಭಿನಯಿಸಿ ಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. 1992 ರಲ್ಲಿ ಪ್ರಣಯದ ಪಕ್ಷಿಗಳು ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಸಿನಿ ಜೀವನವನ್ನು ಪ್ರಾರಂಭಿಸಿ, ಹತ್ತು ಹಲವು ಭಾವನಾತ್ಮಕ ಸಂಬಂಧಗಳನ್ನು ತೆರೆಯ ಮೇಲೆ ತೋರಿಸಿ, ಪ್ರೇಕ್ಷಕರ ಮನಗೆದ್ದಿದ್ದಾರೆ. ಇನ್ನು ಶ್ರುತಿಯಿಂದ ವಿಚ್ಛೇದನ ಪಡೆದ ಬಳಿಕ ಮೂರೂ ವರ್ಷಗಳ ಕಾಲ ಒಂಟಿಯಾಗಿಯೇ ಜೀವನ ನಡೆಸುತ್ತಿದ್ದ ಏಸ್.ಮಹೇಂದರ್ ೨೦೧೨ರಲ್ಲಿ ಯಶೋಧ ಎಂಬುವವರನ್ನ ಮದುವೆ ಮಾಡಿಕೊಳ್ಳುತ್ತಾರೆ.
ಇದರ ನಡುವೆಯೇ ಮಹೇಂದರ್ ಅವರ ಮೊದಲನೆಯ ಮಗಳಾದ ಗೌರಿ ಅವರು ಬರೆದಿದ್ದ ಪೋಸ್ಟ್ ಒಂದು ಆಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಐ ಲವ್ ಯೂ ಅಪ್ಪ..ನೀವೇ ಯಾವಾಗಲೂ ನನ್ನ ಮೊದಲ ಪ್ರೀತಿಯಾಗಿದ್ದೀರಿ. ನೀವೇ ನನ್ನ ನೆಚ್ಚಿನ ಹೀರೊ ಕೂಡ. ನಮ್ಮಿಬ್ಬರ ನಡುವೆ ಇರುವ ತಂದೆ ಮಗಳ ಪ್ರೀತಿಯನ್ನ ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ.
ಹಾಗೂ ಖ್ಯಾತ ನಿರ್ದೇಶಕ ಮಹೇಂದರ್ ಅವರು ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿ ದೂರವಾದ ಬಳಿಕ ಚಂದ್ರಚೂಡ್ ಚಕ್ರವರ್ತಿಯವರ ಜೊತೆ ನಟಿ ಶ್ರುತಿ ಅವರು ಅದ್ದೂರಿಯಾಗಿ ವಿವಾಹವಾಗಿದ್ದರು. ಆದರೆ ಅದಾಗಲೇ ಚಂದ್ರಚೂಡ್ ಅವರಿಗೆ ಮಂಜುಳಾ ಎಂಬ ಮಹಿಳೆಯ ಜೊತೆ ವಿವಾಹವಾಗಿದ್ದು, ಶ್ರುತಿ ಅವರನ್ನು ಎರಡನೇ ವಿವಾಹವಾಗುವ ಸಮಯದಲ್ಲಿ ಮಂಜುಳಾ ಅವರ ಬಳಿ ಅನುಮತಿ ಪಡೆದಿರಲಿಲ್ಲ.ಇದೇ ಕಾರಣದಿಂದಾಗಿ ಪತ್ನಿ ಮಂಜುಳಾ ಪೋಲಿಸ್ ಠಾಣೆಯ ಮೆಟ್ಟಿಲೇರಿದ್ದರು ಕೂಡ. ನಂತರ ಶ್ರುತಿ ಹಾಗೂ ಚಕ್ರವರ್ತಿ ದಂಪತಿಯರಿಬ್ಬರೂ ಸಮ್ಮತಿಸಿ ನ್ಯಾಯಾಂಗ ಮೆಟ್ಟಿಲೇರಿ ತಮ್ಮ ವಿವಾಹವನ್ನು ಅಸಿಂದು ಮಾಡಿಕೊಂಡರು.