ಸದ್ಯ ರಚಿತಾ ರಾಮ್ ಒಂದು ಚಿತ್ರದ ಸಂಭಾವನೆ ಎಷ್ಟು ಗೊತ್ತಾ…ಅಬ್ಬಬ್ಬಾ ನೋಡಿ ಒಮ್ಮೆ
ಸಧ್ಯದ ಟಾಪ್ ನಟಿಯರಲ್ಲಿ ರಚಿತಾ ರಾಮ್ ಅವರು ಮುಂಚಣಿಯಲ್ಲಿ ಇದ್ದಾರೆ.ಹೌದು ದರ್ಶನ್ ಅಭಿನಯದ ಬುಲ್ ಬುಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಚಿತಾ ರಾಮ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ.ಬುಲ್ ಬುಲ್ ಚಿತ್ರ ಇವರಿಗೆ ದೊಡ್ಡ ಹೆಸರು ಮತ್ತು ಯಶಸ್ಸು ತಂದು ಕೊಟ್ಟಿತ್ತು.ಆನಂತರ ಸಾಲು ಸಾಲು ಚಿತ್ರಗಳಲ್ಲಿ ರಚಿತಾ ರಾಮ್ ಬ್ಯುಸಿ ಆಗಿಬಿಟ್ಟರು.ಸಾಲು ಸಾಲು ಕನ್ನಡ ಚಿತ್ರಗಳಲ್ಲಿ ನಟನೆಯನ್ನ ಮಾಡಿರುವ ರಚಿತಾ ರಾಮ್ ಅವರು ಸದ್ಯಕ್ಕೆ ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದು, ಕನ್ನಡದ ಬಹುತೇಕ ನಾಯಕ ನಟರ ಜೊತೆ ನಟನೆಯನ್ನ ಮಾಡಿರುವ ರಚಿತಾ ರಾಮ್ ಅವರು ಸದ್ಯ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಎಂದು ಹೇಳಿದರೆ ತಪ್ಪಾಗಲ್ಲ.
ಇನ್ನು ನಟಿ ರಚಿತಾ ರಾಮ್ ಅವರು ಸಂಭಾವನೆಯ ವಿಚಾರದಲ್ಲಿ ಕೂಡ ಬಹಳ ಮೇಲೆ ಇದ್ದಾರೆ ಎಂದು ಹೇಳಲಾಗುತ್ತಿದ್ದು, ಇತರೆ ಕನ್ನಡದ ನಟಿಯರಿಗೆ ಹೋಲಿಕೆ ಮಾಡಿದರೆ ನಟಿ ರಚಿತಾ ರಾಮ್ ಅವರ ಸಂಭಾವನೆ ಬಹಳ ಜಾಸ್ತಿಯಿದೆ. ರಚಿತಾ ಅವರು 2ನೇ ಅಕ್ಟೋಬರ್ 1992ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು 40 ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ.
ಅವರ ತಂದೆಯವರು 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಉದಯವಾಹಿನಿಯ ‘ನಂದಿನಿ’ ಖ್ಯಾತಿಯ ನಟಿ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್ ಎಂದೇ ಕರೆಯಲ್ಪಡುವ ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಚಂದನವನದ ನಿರ್ಮಾಪಕರ ಮೊದಲ ಆಯ್ಕೆಯ ನಟಿ.ಇದಲ್ಲದೆ ರಚಿತಾ ಕಿರುತೆತೆಯ ರಿಯಾಲಿಟಿ ಶೋಗಳಾದ `ಕಾಮಿಡಿ ಟಾಕೀಸ್’,`ಮಜಾಭಾರತ- 2′ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಕೆಲಸ ಮಾಡಿದ್ದಾರೆ.
ಇದಲ್ಲದೆ ರಚಿತಾ ನಿರ್ಮಾಪಕಿಯಾಗಿಯೂ ಯಶಸ್ಸುಗಳಿಸಿದ್ದಾರೆ.ರಚಿತಾ ರಾಮ್, ಶ್ರೀ ಮಹಾದೇವ ಮತ್ತು ಪ್ರಜ್ವಲ್ ದೇವರಾಜ್‌ರ ಪತ್ನಿ ರಾಗಿಣಿ ಅಭಿನಯದ `ರಿಷಭಪ್ರಿಯ’ ಎಂಬ ಪ್ರಾತ್ಯಕ್ಷಿಕೆಯನ್ನು ನಿರ್ಮಿಸಿ ಚಿತ್ರ ನಿರ್ಮಾಣದಲ್ಲಿ ಮೊದಲ ಪ್ರಯತ್ನ ಮಾಡಿದ್ದಾರೆ. ಇದೊಂದು ಮ್ಯೂಸಿಕಲ್ ಕಿರುಚಿತ್ರವಾಗಿದ್ದು ಸೈಮಾ ಕಿರುಚಿತ್ರ ಸ್ಫರ್ಧೆಯಲ್ಲಿ ಮೂರು ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ರಚಿತಾ ರಾಮ್ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ 30 ರಿಂದ 40 ಲಕ್ಷ ರೂಪಾಯಿಗಳು. ಉತ್ತಮವಾದ ನಟನೆ ಮಾತ್ರವಲ್ಲದೇ ವಿವಿಧ ಶೋಗಳಾಲ್ಲಿ ತೀರ್ಪುಗಾರರಾಗಿ ಕೂಡ ಜವಾಬ್ದಾರಿ ನಿಭಾಯಿಸುತ್ತಿರುವ ಸಿಂಪಲ್ ಹುಡುಗಿ ರಚಿತಾ ರಾಮ್ ಇನ್ನಷ್ಟು ಯಶಸ್ಸು ಕಾಣಲಿ ಎಂಬುದೇ ಅಭಿಮಾನಿಗಳ ಆಶಯ