NEWS

ತಾಲಿಬಾನ್ ಕ್ರೌರ್ಯ: ನಟ ಅನಂತ್‌ ನಾಗ್ ಹೇಳಿಕೆಯನ್ನು ವಿರೋಧಿಸಿದ ಚೇತನ್ ಕುಮಾರ್

ನಮಗೆ ಭದ್ರತೆ ಇಲ್ಲ, ಭಾರತದಲ್ಲಿ ಇರಲು ಭಯವಾಗುತ್ತಿದೆ ಅಂತ ಹೇಳಿದ ನಟರು ಈಗ ಅಪ್ಘಾನಿಸ್ತಾನಕ್ಕೆ ಹೋಗಿ ಆರಾಮಾಗಿ ಇರಬಹುದು ಎಂದು ನಟ ಅನಂತ್‌ನಾಗ್ ಹೇಳಿದ್ದರು. ಈ ಮಾತನ್ನು ನಟ ಚೇತನ್ ಖಂಡಿಸಿದ್ದಾರೆ.

• ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸ

• ತಾಲಿಬಾನ್ ಅಟ್ಟಹಾಸದ ಬಗ್ಗೆ ಅಭಿಪ್ರಾಯ ಹಂಚಿಕೊಂಡ ನಟ ಅನಂತ್‌ ನಾಗ್

• ಅನಂತ್‌ ನಾಗ್ ಹೇಳಿಕೆಯನ್ನು ಖಂಡಿಸಿದ ನಟ ಚೇತನ್

“ಸಮೃದ್ಧ ಚಲನಚಿತ್ರ ನಟರಾದ ಶ್ರೀ ಅನಂತ್ ನಾಗ್ ಅವರ ತಾಲಿಬಾನ್ ಕುರಿತ ಸಂದರ್ಶನವನ್ನು ಈಗಷ್ಟೇ ನೋಡಿ

ದೆ.ಇತಿಹಾಸ / ಭೌಗೋಳಿಕವಾಗಿ ಅಂತಾರಾಷ್ಟ್ರೀಯ ರಾಜಕೀಕಾರಣದ ಬಗ್ಗೆ ಅವರ ಆಲೋಚನೆಗಳು ಹಿಂಜರಿತ, ಸೀಮಿತ ಮತ್ತು ಪಂಥೀಯವಾಗಿ ಕಾಣುತ್ತವೆ. ಯಾವ [ಭಾರತೀಯ] ನಟರು ಇಲ್ಲಿ ಸುರಕ್ಷತೆ ಇಲ್ಲ ಎಂದು ಭಾವಿಸುವವರು ಅಲ್ಲಿ ಸ್ವರ್ಗಕ್ಕೆ [ಅಫ್ಘಾನಿಸ್ತಾನ] ಹೋಗಬಹುದು ಎಂದು ಅವರು ಹೇಳುತ್ತಾರೆ. ಅಸಹಿಷ್ಣುತೆಯು ಕ್ರೂರತೆಯನ್ನು ವಿಮರ್ಶಿಸುವುದು ವಿಪರ್ಯಾಸ” ಎಂದು ಚೇತನ್ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button