ಹಬ್ಬ ಮಾಡಲು ದುಡ್ಡಿಲ್ಲದೆ 200 ರೂಪಾಯಿ ಕೊಡಿ ಎಂದು ಜಗ್ಗೇಶ್ ಕೇಳಿದ್ದಕ್ಕೆ ರವಿಚಂದ್ರನ್ ಅಂದು ಕೊಟ್ಟ ಹಣವೆಷ್ಟು ಗೊತ್ತಾ ?? ತಿಳಿದರೆ ಭೇಷ್ ಅಂತೀರಾ !!!
ನಮಸ್ಕಾರ ಸ್ನೇಹಿತರೆ, ಸಿನಿಮಾರಂಗ ಯಾವ ಮಟ್ಟದ ಬದಲಾವಣೆ ಆಗಿದೆ ಎಂದರೆ ದಶಕಗಳ ಹಿಂದಿನ ಚಿತ್ರರಂಗವೇ ಬೇರೆ ಈಗಿನ ಚಿತ್ರರಂಗವೇ ಬೇರೆ.ಸಾಮಾನ್ಯ ಜೀವನದಂತೆ ಸಿನಿಮಾರಂಗದಲ್ಲಿ ಆಗ ಸಹ ಕಲಾವಿದರಿಗೆ 100, 200 ರೂಪಾಯಿ ಸಂಭಾವನೆ ಇತ್ತು.
ಈಗಿನ ಬಹಳಷ್ಟು ಕಲಾವಿದರು ಕಾರಿನಲ್ಲಿ ಓಡಾಡುತ್ತಿದ್ದಾರೆ.ಆಗ ಸಂಸಾರದ ನೌಕೆ ಸಾಗಿಸಿಬಿಟ್ಟರೆ ಸಾಕು ಎನ್ನುವ ಕಲಾವಿದರು ಸಹ ಇದ್ದರು. ಅಂಥವರಲ್ಲಿ ನಟ ಜಗ್ಗೇಶ್ ಅವರು ಸಹ ಒಬ್ಬರು.
ಊರಿನಲ್ಲಿ ಅವರ ತಂದೆ ಅನುಕೂಲವಾಗಿ ಇದ್ದರೂ ಸಹ ಇವರು ಮಾತ್ರ ಸಿನಿಮಾರಂಗದಲ್ಲಿ ಏನಾದರೂ ಮಾಡಬೇಕು ನಟನಾಗಿ ಗುರುತಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಬೆಂಗಳೂರಿಗೆ ಬಂದ ಜಗ್ಗೇಶ್ ಅವರು ನಂತರ ಚಿಕ್ಕ ವಯಸ್ಸಿಗೆ ಪರಿಮಳ ಅವರನ್ನು ಪ್ರೀತಿಸಿ ಮದುವೆಯಾದರು.
ಅತ್ತ ಇನ್ನು ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳಬೇಕಿದ್ದ ಜಗ್ಗೇಶ್ ಅವರಿಗೆ ಸಂಸಾರವನ್ನು ಸಹ ನೋಡಿಕೊಳ್ಳಬೇಕಾದ ಜವಾಬ್ದಾರಿ ಇತ್ತು.ಹಬ್ಬ ಮಾಡಲು ದುಡ್ಡಿಲ್ಲದೆ 200 ರೂಪಾಯಿ ಕೊಡಿ ಎಂದು ಜಗ್ಗೇಶ್ ರವರು ರವಿ ಅಣ್ಣ ಅವರನ್ನು ಕೇಳಿದ್ದಕ್ಕೆ ರವಿಚಂದ್ರನ್ ಅವರು ಅಂದು ಕೊಟ್ಟ ಹಣವೆಷ್ಟು ಗೊತ್ತಾ??
ಇನ್ನು ಇತ್ತಾ ತಮ್ಮ ಹಳೆಯ ದಿನಗಳಲ್ಲಿ ಸಾಕಷ್ಟು ಕಷ್ಟಗಳನ್ನು ದಾಟಿಬಂದ ಜಗ್ಗೇಶ್ ಆರ್ಥಿಕವಾಗಿ ಬಹಳಷ್ಟು ಕಷ್ಟಗಳನ್ನು ಪಟ್ಟಿದ್ದರು. 100 rs.200 ಇದ್ದರೆ ಅವರ ಮನೆಯಲ್ಲಿ ಹಬ್ಬಗಳು ನೆರವೇರುತ್ತಿದ್ದವು.
ಇತ್ತ ಜಗ್ಗೇಶ್ ಅವರು ಸಹ ಅವರ ಬಳಿ ಹೆದರಿಕೆಯಿಂದಲೇ ಹಣ ಕೇಳಲು ಹೋದರು.ಆಗ rs.200 ದೊಡ್ಡ ಹಣವೂ ಸಹ ಆಗಿತ್ತು.ಬಾಗಿಲು ಬಳಿ ನಿಂತ ಜಗ್ಗೇಶ್ ಅವರು ರವಿಚಂದ್ರನ್ ಅವರ ಬರೋದನ್ನೇ ಕಾದುನಿಂತಿದ್ದರು.
ಅತ್ತ ರವಿಚಂದ್ರನ್ ಅವರು ಬಂದ ಕೂಡಲೇ ಏನೋ ಅಂತ ಕೇಳಿದ್ದಾರೆ. ಇತ್ತ ಜಗ್ಗೇಶ್ ಅವರು ಸರ್ ನಾಳೆ ಹಬ್ಬ ಒಂದ್ 200 ರೂಪಾಯಿ ಇದ್ದರೆ ಬೇಕಾಗಿತ್ತು ಎಂದು ಕೇಳಿದ್ದಾರೆ. ತಕ್ಷಣ ರವಿಚಂದ್ರನ್ ಅವರು ಮಾಡಿದ ಕೆಲಸವೇ ಬೇರೆ,
ಹೌದು ತಕ್ಷಣ ರವಿಚಂದ್ರನ್ ಅವರು ಹಿಂದೆ ಮುಂದೆ ಏನು ಯೋಚಿಸದೆ ಏ ಬಾಬು ಇವನಿಗೆ 500 ರೂಪಾಯಿ ಕೊಟ್ಟು ಕಳಿಸು ಅಂತ ಹೇಳಿದ್ದಾರೆ.ತಕ್ಷಣ ಸಂತೋಷಗೊಂಡ ಜಗ್ಗೇಶ್ ಅವರು ಹಣ ತಂದು ತಮ್ಮ ಕುಟುಂಬದ ಜೊತೆಗೆ ಸಂತೋಷದಿಂದ ಹಬ್ಬ ಮಾಡಿದ್ದಾರೆ, ಈ ನಡತೆಯ ಕುರಿತು ನಿಮ್ಮ ಅಭಿಪ್ರಾಯವನ್ನು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.