ಅಮ್ಮನಿಗಾಗಿ ಹೊಸ ಮನೆ ಖರೀದಿಸಿದ ಮಂಜು….ಬೆಲೆ ಎಷ್ಟು ಗೊತ್ತಾ ನೋಡಿ
ಕನ್ನಡ ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿದ ಗ್ರಾಮೀಣ ಪ್ರತಿಭೆ ಮಂಜು ಪಾವಗಡ ಅವರು ಎಲ್ಲರ ಮನಸ್ಸನ್ನು ಹಾಗೂ ಪ್ರೀತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅಂತಾನೇ ಹೇಳಬಹುದು. ಅದರಲ್ಲಿಯೂ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಕುಟುಂಬಕ್ಕೂ ಕೂಡ ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ಆಡಿರುವ ಆಟ ಬಹಳ ಇಷ್ಟವಾಗಿದೆ ಎಂಬುದು ವಿಶೇಷ.
ಸದ್ಯ ಒಂದು ಕಾಲದಲ್ಲಿ ತಿನ್ನುವುದಕ್ಕೂ ಕೂಡ ಕೂಳಿಲ್ಲದಂತೆ ಬದುಕುತ್ತಿದ್ದ ಮಂಜು ಪಾವಗಡ ಅವರು ಇದೀಗ ಲಕ್ಷಾಧೀಶ್ವರಾಗಿದ್ದು, ಬಣ್ಣದ ಲೋಕದಿಂದ ಕೂಡ ಸಾಕಷ್ಟು ಆಫರ್ ಗಳು ಬರುತ್ತಿವೆ. ಹೌದು ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ ಎಂಬ ಕಾಮಿಡಿ ಕಾರ್ಯಕ್ರಮದಲ್ಲಿ ಕನ್ನಡಿಗರ ಮನೆಗೆ ನಗುವನ್ನು ಚೆಲ್ಲುತ್ತಿದ್ದ ಮಂಜು ಪಾವಗಡ ಅವರು ಲ್ಯಾಗ್ ಮಂಜು ಎಂದೇ ಖ್ಯಾತಿ ಪಡೆದಿದ್ದರು. ಸದ್ಯ ಇನ್ನು ಮುಂದೆ ಅವರನ್ನು ಬಿಗ್ ಬಾಸ್ ಮಂಜು ಎಂದೇ ಗುರುತಿಸಲಾಗುತ್ತದೆ.
ಇನ್ನೂ ಮಂಜು ಪಾವಗಡ ಅವರ ಜನಪ್ರಿಯತೆ ಹೇಗಿದೆ ಎಂದರೆ ಈ ಬಾರಿಯ ಬಿಗ್ ಬಾಸ್ ಫಿನಾಲೆಯಲ್ಲಿ ಮಂಜು ಪಾವಗಡ ಅವರಿಗೆ ಬರೋಬ್ಬರಿ ನಲವತ್ತೈದು ಲಕ್ಷ ವೋಟಿಂಗ್ ಬಂದೊದಗಿದೆ. ಇದು ತಮಾಷೆಯ ವಿಚಾರವೇ ಅಲ್ಲ, ಹೌದು ಇಡೀ ಬಿಗ್ ಬಾಸ್ ಇತಿಹಾಸದಲ್ಲೇ ಇಷ್ಟೊಂದು ಮತ ಬಿದ್ದಿರುವುದು ಇದೇ ಮೊದಲ ಬಾರಿಯಾಗಿದ್ದು, ಮಂಜು ಪಾವಗಡ ಅವರು ಯಶಸ್ಸಿನ ಉತ್ತುಂಗದಲ್ಲಿದ್ದಾರೆ ಅಂತಾನೇ ಹೇಳಿದರೆ ತಪ್ಪಾಗಲಾರದು.
ಬಿಗ್ ಬಾಸ್ ಗೆಲುವಿನಿಂದ ಬಂದಂತಹ 53 ಲಕ್ಷ ಹಣದಲ್ಲಿ ಮಂಜು ಪಾವಗಡ ಒಂದು ಸುಂದರವಾದ ಮನೆಯನ್ನು ಖರೀದಿ ಮಾಡಿದ್ದಾರೆ ಎಂಬ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಕಡುಬಡತನದಲ್ಲಿ ಮುಳುಗಿದ್ದಂತಹ ಮಂಜು ಪಾವಗಡ ಅವರ ಕುಟುಂಬ ಇದೀಗ ಐಶಾರಾಮಿ ಜೀವನ ನಡೆಸಲು ಶುರು ಮಾಡಿದ್ದಾರೆ. 22 ಲಕ್ಷರೂ ಮನೆ ಇದಾಗಿದೆ ಎನ್ನಲಾಗಿದೆ.
ಅಮ್ಮನ ಅಸೆ ಈಡೇರಿಸಲು ಮಂಜು ಮನೆ ಖರೀದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆಮುಂದಿನ ದಿನಗಳಲ್ಲಿ ಮಂಜುಗೆ ಸಿನಿಮಾಗಳ ಆಫರ್ ದೊರಕುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಮಂಜು ಹೇಳಿದಂತೆ ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ನಾನೆ ಅವರನ್ನ ಸಾಕಬೇಕು ಅಂದಿದ್ದರು. ಅದರ ಪ್ರಕಾರ ತಂದೆ ತಾಯಿಗೆ ಒಂದೊಳ್ಳೆ ಮನೆಯನ್ನ ಕೊಡಿಸಿದ್ದು ಇನ್ನುಳಿದ ಸ್ವಲ್ಪ ಹಣವನ್ನ ತಮ್ಮ ಮುಂದಿನ ಕೆಲಸಗಳಿಗೆ ಉಪಯೋಗಿಸಿಕೊಳ್ತಾರೆ ಎಂದೇ ಹೇಳಲಾಗುತ್ತಿದೆ.