90 ದಿನ ಬಿಗ್ಬಾಸ್ ಮನೆಯಲ್ಲಿರಲು ಬಟ್ಟೆ ಕೊಡಿಸಿದ ಆ ನಟಿಯ ಹೆಸರೇಳಿ ಕಣ್ಣೀರಿಟ್ಟ ಮಂಜು…ನೋಡಿ
ವಾರವಷ್ಟೇ ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಯಾರೆಂದು ಘೋಷಣೆ ಆಗಿದೆ. ಈ ಬಾರಿಯ ಬಿಗ್ ಬಾಸ್ ವಿನ್ನರ್ ಆಗಿ ಮಂಜು ಪಾವಗಡ ಅವರು ವಿಜಯಶಾಲಿ ಯಾಗಿದ್ದಾರೆ. ಇನ್ನು ಮಂಜು ಅವರು ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ಒಂದಷ್ಟು ಟೀಕೆಯ ಮಾತುಗಳಿಗೆ ಗುರಿಯಾದವರು.
ಅಪ್ಪಟ ಹಳ್ಳಿ ಪ್ರತಿಭೆ ಮಜಾಭಾರತ ಕಾಮಿಡಿ ಶೋ ಮೂಲಕ ಬೆಳಕಿಗೆ ಬಂದ ಮಂಜು ಪಾವಗಡ. ಆದರೆ ಇದೀಗ ಬಿಗ್ ಬಾಸ್ ವಿನ್ನರ್ ಆಗುವ ಮೂಲಕ ಕುಟುಂಬ ಹಾಗೂ ಸ್ನೇಹಿತರಿಗೆ,ಅಭಿಮಾನಿಗಳಿಗೂ ಈ ಸುದ್ದಿ ಖುಷಿ ತಂದಿದೆ. ಇನ್ನು ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಆಗಿ ಬಂದ ನಂತರ ತಮ್ಮ ಗೆಲುವನ್ನು ಸಂಭ್ರಮಿಸಿದ್ದಾರೆ.
ಮನೆಯವರಿಗೂ ಮಂಜು ಪಾವಗಡ ಗೆದ್ದಿದ್ದು ಖುಷಿ ತಂದಿದೆ. ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಹಾಗೂ ಅರವಿಂದ್ ಕೆ. ಪಿ ಬಾರಿ ಪೈಪೋಟಿ ಇದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನು ಬಿಗ್ ಬಾಸ್ ಮನೆಯು ಸ್ನೇಹಿತರನ್ನು ನೀಡಿದೆ ಜೊತೆಗೆ ಜೀವನ ಪಾಠವನ್ನು ಕಲಿಸಿದೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದರು. ಇನ್ನು ಬಿಗ್ ಬಾಸ್ ಮನೆಯಲ್ಲಿ ಸದಾ ಸುದ್ದಿಯಲ್ಲಿದ್ದ ಜೋಡಿಗಳಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್. ಇಬ್ಬರು ಸ್ನೇಹಿತರಂತೆ ಇದ್ದರೂ ಕೂಡ, ತಮಾಷೆಗಾಗಿ ಆಡುತ್ತಿದ್ದ ಕೆಲವೊಂದು ಮಾತುಗಳು, ಬಿಗ್ ಬಾಸ್ ಮನೆಯಲ್ಲಿ ಟೀಕೆಗೂ ಕಾರಣವಾಗಿತ್ತು.
ಅದೇನೇ ಇದ್ದರೂ ಮೊದಲನೇ ಇನ್ನಿಂಗ್ಸ್ ನಲ್ಲಿ ಇವರಿಬ್ಬರ ನಡುವಿನ ಸ್ನೇಹ ಬಹಳ ಚೆನ್ನಾಗಿಯೇ ಇತ್ತು. ಎರಡನೇ ಇನ್ನಿಂಗ್ಸ್ ವೇಳೆಗಾಗಲೇ ಕೊಂಚ ಮಟ್ಟಿಗೆ ಅಂತರ ಕಾಯ್ದುಕೊಂಡರು ಇಬ್ಬರು. ಆದರೆ ಬಿಗ್ ಬಾಸ್ ಕೊನೆಯಲ್ಲಿ ಫ್ರೆಂಡ್ ಶಿಪ್ ಡೇ ಆಚರಿಸುವ ಮೂಲಕ ಮತ್ತೆ ಸ್ನೇಹ ಸಂಬಂಧ ಗಟ್ಟಿಯಾಯಿತು. ಇನ್ನು ಫಿನಾಲೆಯಲ್ಲಿ ಹೆಚ್ಚು ವೋಟ್ ಪಡೆದುಕೊಳ್ಳುವ ಮೂಲಕ ಕೊನೆಗೂ ವಿನ್ನರ್ ಪಟ್ಟವನ್ನು ಮೂಡಿಗೆರಿಸಿಕೊಂಡರು.
ಬಡತನದಲ್ಲಿದ್ದ ಮಂಜುಗೆ ತಾನು ಧರಿಸಲು ಬಿಗ್ ಬಾಸ್ ಮನೆಯಲ್ಲಿ ಬಟ್ಟೆ ಕೊಡಿಸಿದ ಆ ನಟಿಯ ಬಗ್ಗೆ ಹೇಳಿ ಭಾವುಕರಾಗಿದ್ದಾರೆ. ಆ ನಟಿ ಬೇರೆ ಯಾರು ಅಲ್ಲ. ನಟಿ ರಚಿತಾರಾಮ್ ಅವರೇ ಮಂಜು ಪಾವಗಡ ಅವರ ಬಟ್ಟೆಗಳಿಗಾಗಿ ಡಿಸೈನರ್ ಗೆ ಹಣ ಕೊಡುತ್ತಿದ್ದರು.. ಮಜಾಭಾರತ ಶೋ ಮೂಲಕ ಪರಿಚಯವಾದ ಮಂಜು ಪಾವಗಡ ಅವರ ಪರಿಸ್ಥಿತಿ ತಿಳಿದಿದ್ದ ರಚಿತಾರಾಮ್ ಅವರು ಬಿಗ್ ಬಾಸ್ ನಲ್ಲಿ ಮಂಜು ಒಳ್ಳೊಳ್ಳೆ ಬಟ್ಟೆ ಹಾಕಿಕೊಳ್ಳಲಿ ಎಂದು ಡಿಸೈನರ್ ಗೆ ಹಣ ಕಳುಹಿಸಿಕೊಡುತ್ತಿದ್ದರು.. ಅಷ್ಟೇ ಅಲ್ಲದೇ ಫಿನಾಲೆಯಲ್ಲಿ ಮಂಜು ಹಾಕಿದ್ದ ಬಟ್ಟೆಯನ್ನು ಖುದ್ದು ಅವರೇ ಸೆಲೆಕ್ಟ್ ಮಾಡಿ ಕಳುಹಿಸಿ ಕೊಟ್ಟಿದ್ದರಂತೆ.