ದಿವ್ಯಾ ಹಾಗು ಮಂಜುವನ್ನು ಮನೆಗೆ ಕರೆಸಿ ಸುದೀಪ್ ಕೊಟ್ಟ ಸರ್ಪ್ರೈಸ್ ಗಿಫ್ಟ್ ನೋಡಿ…..
ಬಿಗ್ ಬಾಸ್ ಸೀಸನ್ 8 ರಲ್ಲಿ ಸದಾ ಸುದ್ದಿಯಲ್ಲಿದ್ದ ಜೋಡಿಗಳಲ್ಲಿ ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಕೂಡ ಒಬ್ಬರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲಿಂದಲೂ ಬಹಳನೇ ಸುದ್ದಿಯಾಗುತ್ತಿದ್ದಾರೆ. ಹೌದು ಬಿಗ್ ಬಾಸ್ ಸೀಸನ್ 8 ರಪ್ರಾರಂಭದಿಂದಲೂ ಸ್ನೇಹ ಸಲುಗೆ ಇದ್ದೆ ಇತ್ತು. ಇದಕ್ಕೆ ಇವರು ತಮಾಷೆಗೆಂದು ಬಿಗ್ ಬಾಸ್ ಮನೆಯಲ್ಲಿ ಮಾತನಾಡುತ್ತಿದ್ದ ಮಾತುಗಳು ಸಾಕ್ಷಿಯಾಗುತ್ತಿದ್ದವು. ಜೊತೆಯಾಗಿ ಸಮಯ ಕಳೆಯುತ್ತಾ, ಮಂಜು ಪಾವಗಡ ಹಾಗೂ ದಿವ್ಯಾ ತಮಾಷೆಯ ಮಾತುಗಳನ್ನು ಆಡುತ್ತಿದ್ದರು. ಇದು ಬಿಗ್ ಬಾಸ್ ಮನೆಯ ಇನ್ನಿತ್ತರ ಸದಸ್ಯರನ್ನು ನಗಿಸುತ್ತಿದ್ದವು
ಆದರೆ ಕೆಲವರಿಗೆ ತಮಾಷೆಯೆಂದು ಕಂಡರೂ, ಇವರು ನಡೆದುಕೊಳ್ಳುತ್ತಿದ್ದ ರೀತಿ ಹಾಗೂ ಆಡುತ್ತಿದ್ದ ಮಾತುಗಳನ್ನು ಟೀಕಿಸಿದ್ದಾರೆ.ಬಿಗ್ ಬಾಸ್ ಸೀಸನ್ 8 ರ ಮೊದಲ ಇನಿಂಗ್ಸ್‌ನಲ್ಲಿ ಇದ್ದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರ ಒಡನಾಟ ಎರಡನೇ ಇನಿಂಗ್ಸ್‌ನಲ್ಲಿ ಅಷ್ಟೇನು ಕಂಡುಬರಲಿಲ್ಲ. ಮೊದಲ ಇನ್ನಿಂಗ್ಸ್ ನಲ್ಲಿ ಪ್ರೇಕ್ಷಕರಿಗಂತೂ ಬೋರ್ ಇಡಿಸಿಬಿಟ್ಟಿದ್ದರು ಮಂಜು ಪಾವಗಡ. ಸದಾ ದಿವ್ಯಾ ಸುರೇಶ್ ಅವರ ಜೊತೇನೆ ಕಾಲ ಕಳೆಯುತ್ತಿದ್ದರು. ಆದರೆ ಎರಡನೇ ಸೀಸನ್ ನಲ್ಲಿ ಹಾಗೆ ಆಗಲಿಲ್ಲ.
ಹೌದು ಮಂಜು ಪಾವಗಡ ಅವರು ಎರಡನೇ ಇನ್ನಿಂಗ್ಸ್ ಗೆ ಬಿಗ್ ಬಾಸ್ ಮನೆಯ ಒಳಗೆ ಹೋಗುವ ಮುನ್ನ ‘ನಾನು ಸಿಂಗಲ್ ರೈಡರ್’ ಅಂತಾನೇ ಮಂಜು ಹೇಳಿದ್ದರು. ಈ ಮಾತು ಎರಡನೇ ಇನ್ನಿಂಗ್ಸ್ ನಲ್ಲಿ ಸಾಭಿತು ಆಗಿತ್ತು.ಇನ್ನು ಬಿಗ್ ಬಾಸ್ ಮನೆಯ ಸೆಕೆಂಡ್ ಇನ್ನಿಂಗ್ಸ್ ಕೊನೆಯಲ್ಲಿ ‘ಮಂಜು ನನ್ನ ಬೆಸ್ಟ್ ಫ್ರೆಂಡ್’ ಎಂದು ಹೇಳುವ ಮಾತುಗಳು ದಿವ್ಯಾ ಸುರೇಶ್ ಕಡೆಯಿಂದ ಕೇಳಿಬರುತ್ತಿತ್ತು. ಅದು ಅಲ್ಲದೇ,ಬಿಗ್ ಬಾಸ್ ಮನವಿ ಮಾಡಿಕೊಂಡು ವಿಶೇಷ ಕೇಕ್ ತರಿಸಿ ಫ್ರೆಂಡ್ಶಿಪ್ ಡೇ ಸೆಲೆಬ್ರೇಶನ್ ಮಾಡುವ ಮೂಲಕ ತಮ್ಮ ಈ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿ ಗೊಳಿಸಿದ್ದರು.
ಅದೇನೇ ಆದರೂ ಈ ಬಾರಿ ಬಿಗ್ ಬಾಸ್ ಸೀಸನ್ 8 ರ ವಿನ್ನರ್ ಪಟ್ಟ ಮಂಜು ಪಾವಗಡ ಅವರ ಪಾಲಗಿದ್ದು, ಪ್ರೇಕ್ಷಕರಿಗೆ ಖುಷಿ ತಂದಿದೆ.ಅದು ಅಲ್ಲದೇ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರ ಜೋಡಿ ಬಿಗ್ ಬಾಸ್ ಸೀಸನ್ ಮುಗಿದ ಮೇಲು ಭಾರಿ ಸದ್ದು ಮಾಡುತ್ತಿದೆ ಎಂದರೆ ತಪ್ಪಾಗಲಾರದು.ಹೌದು ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿಯೂ ಕೂಡ ಈ ಜೋಡಿಗಳ ಕುರಿತಾಗಿ ವೀಕ್ಷಕರು ಮಾತಾಡಿಕೊಳ್ಳುತ್ತಿದ್ದರು. ಹೌದು ಬಿಗ್ ಬಾಸ್ ಫಿನಾಲೆ ವೇದಿಕೆಯಲ್ಲಿ ವಿನ್ನರ್ ಯಾರು ಘೋಷಣೆಯಾಗಿ, ಆ ವಿನ್ನರ್ ಮಂಜು ಪಾವಗಡ ಅವರ ಹೆಸರು ಕೇಳಿ ಬಂದಿತ್ತು. ಈ ವೇಳೆ ದಿವ್ಯಾ ಸುರೇಶ್ ಸಂತೋಷದಿಂದ ಕುಣಿದಾಡಿದ್ದರು.