ENTERTAINMENT

ಮೀರಾ ಜಾಸ್ಮಿನ್ ಈಗ ಹೇಗಿದ್ದಾರೆ ಗೊತ್ತಾ ? ಪಾಪಾ ಕಣ್ಣೀರು ಬರುತ್ತೆ !

ಮೀರಾ ಜಾಸ್ಮಿನ್ ಎಂಬ ಮುದ್ದು ಮುಖದ ಚೆಲುವೆ ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರಬಹುದು. ಈ ನಟಿಯ ಜೀವನದ ಆಗು ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿ ಕೊಡುತ್ತೇವೆ . ಮೀರಾ ಜಾಸ್ಮಿನ್ ಮೂಲತಃ ಕೇರಳದವರು. ಇವರು ಮಲಯಾಳಂ ಮತ್ತು ತಮಿಳಿನಲ್ಲಿ ಸಕ್ರಿಯವಾಗಿ ಇದ್ದಂತಹ ನಟಿ. ಇವರು ಕನ್ನಡದಲ್ಲಿ ನಟಿಸಿದಂಥ ಚಿತ್ರಗಳು ಕಡಿಮೆಯಾದರೂ ನಟಿಸಿದ ಎಲ್ಲಾ ಸಿನಿಮಾಗಳು ಪ್ರಸಿದ್ಧಿಯನ್ನು ತಂದುಕೊಟ್ಟಿತ್ತು. ಮೀರಾ ಜಾಸ್ಮಿನ್ ರವರು 1982 ಫೆಬ್ರವರಿ ಹದಿನೈದು ರಂದು ಕೇರಳದ ತಿರುವಲ್ಲ ತಾಲ್ಲೂಕಿನ ಗ್ರಾಮವೊಂದರಲ್ಲಿ ಜನಿಸಿದರು.

2001 ರಲ್ಲಿ ಮೀರಾ ಜಾಸ್ಮಿನ್ ರವರು ಸೂತ್ರಧಾರನ್ ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಯನ್ನು ಮಾಡಿದರು. 2004 ರಲ್ಲಿ ಪುನೀತ್ ರಾಜ್ಕುಮಾರ್ ಅಭಿನಯದ ಮೌರ್ಯ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ದೇವರು ಕೊಟ್ಟ ತಂಗಿ, ಅರಸು, ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದರು. ಕನ್ನಡದಲ್ಲಿ ಕೆಲವೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿದರೂ ಕೂಡ ಅಭಿನಯಿಸಿದ ಎಲ್ಲ ಚಿತ್ರಗಳು ಅದ್ಭುತ ಪ್ರದರ್ಶನವನ್ನು ಕಂಡವು. ಆದರೆ ಇದ್ದಕ್ಕಿದ್ದಂತೆ ಅಭಿನಯಿಸುವುದನ್ನು ಬಿಟ್ಟು ಚಿತ್ರರಂಗದಿಂದ ದೂರವಾದರು ಇದಕ್ಕೆ ಕಾರಣ ಅವರ ಪತಿ.

ಮೀರಾ ಅವರು ಅನಿಲ್ ಎಂಬುವರನ್ನು ಮದುವೆಯಾಗಿ ದುಬೈನಲ್ಲಿ ನೆಲೆಸಿದ್ದರು. ಮತ್ತೆ ಭಾರತಕ್ಕೆ ಬಂದು ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬುದು ಅವರ ಬಯಕೆಯಾಗಿತ್ತು. ಇದು ಅವರ ಗಂಡನಿಗೆ ಇಷ್ಟವಿರಲಿಲ್ಲ. ಅಲ್ಲದೇ ಮೀರಾ ರವರು ಅನೇಕ ವಿವಾದಗಳ ನಡುವೆ ಅನಿಲ್ ಅವರನ್ನು ಮದುವೆಯಾಗಿದ್ದರು. ಪೊಲೀಸ್ ಪ್ರೊಟೆಕ್ಷನ್ ನಡುವೆ ಮೀರಾ ರವರ ಮದುವೆಯಾಗಿತ್ತು ಇದಕ್ಕೆ ಕಾರಣ ಅನಿಲ್ ರವರಿಗೆ ಮೀರಾರನ್ನು ಮದುವೆಯಾಗುವ ಮುಂಚೆಯೇ ಇನ್ನೊಂದು ಮದುವೆಯಾಗಿತ್ತು. ಅನಿಲ್ ಮೊದಲ ಪತ್ನಿಯ ಸಂಬಂಧಿಕರು ಮದುವೆಗೆ ಅಡ್ಡಿಪಡಿಸಬಹುದು ಎಂಬ ಭಯವಿತ್ತು .

ಅಲ್ಲದೆ ಮೀರಾ ಅನಿಲ್ ಅವರ ಮದುವೆ ರಿಜಿಸ್ಟರ್ ಕೂಡ ಆಗಿರಲಿಲ್ಲ ಏಕೆಂದರೆ ಅನಿಲ್ ರವರು ಮೊದಲ ಪತ್ನಿಯಿಂದ ವಿಚ್ಛೇದನವನ್ನು ಪಡೆದು ಕೊಳ್ಳುವಲ್ಲಿ ವಿಫಲರಾಗಿದ್ದರು. ಹೀಗಾಗಿ ಮೀರಾ ರವರ ವೈಯಕ್ತಿಕ ಬದುಕು ಸುಖವಾಗಿ ಇರುವುದರ ಬದಲು ಗೊಂದಲದ ಗೂಡಾಗಿದೆ . ಅಲ್ಲದೇ ಮದುವೆಯಾದ ನಂತರ ಮೀರಾ ಅವರು ತುಂಬಾ ದಪ್ಪವಾಗಿ ಬಿಟ್ಟರು ಹೀಗಾಗಿ ಚಿತ್ರರಂಗದಿಂದ ಮತ್ತಷ್ಟು ದೂರವೇ ಉಳಿಯುವಂತಾಗಿದೆ.

Related Articles

Leave a Reply

Your email address will not be published. Required fields are marked *

Back to top button