ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ರೂಪಿಣಿ ಈಗ ಹೇಗಿದ್ದಾರೆ ಎಲ್ಲಿದ್ದಾರೆ ಗೊತ್ತಾ?
1975 ರಲ್ಲಿ ಅಮಿತಾಬ್ ಬಚ್ಚನ್ ರವರ ಮಿಲಿ ಎಂಬ ಸಿನಿಮಾದಲ್ಲಿ 5 ವರ್ಷದ ಪುಟ್ಟ ಬಾಲಕಿಯಾಗಿ ಬಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ರೂಪಿಣಿ. 1969 ರಲ್ಲಿ ರೂಪಿಣಿ ಮುಂಬೈನಲ್ಲಿ ಜನಿಸಿದರು. ಭರತನಾಟ್ಯ, ಕುಚುಪುಡಿ , ಮುಂತಾದ ನೃತ್ಯ ತರಬೇತಿಯನ್ನು ಪಡೆದಿದ್ದರು.
ರೂಪಿಣಿ ರವರ ತಾಯಿ ವೃತ್ತಿಯಲ್ಲಿ ವೈದ್ಯರಾಗಿದ್ದರು. ರೂಪಿಣಿ ರವರು ತಮ್ಮ ರಜಾ ದಿನಗಳಲ್ಲಿ ಒಮ್ಮೆ ತಾಯಿಯ ಜೊತೆ ತಮಿಳುನಾಡಿನ ಪ್ರಸಿದ್ಧ ನಿರ್ದೇಶಕ ಕೆ ಭಾಗ್ಯರಾಜು ಅವರ ಮನೆಗೆ ಹೋಗಿದ್ದರು . ರೂಪಿಣಿ ರವರ ತಾಯಿ ಕೆ ಭಾಗ್ಯರಾಜ್ ಅವರ ಫ್ಯಾಮಿಲಿ ಡಾಕ್ಟರ್ ಕೂಡ ಆಗಿದ್ದರು. ಭಾಗ್ಯರಾಜು ಮತ್ತು ಅವರ ಪತ್ನಿ ಪೂರ್ಣಿಮಾ ರವರು ರೂಪಿಣಿ ಯನ್ನು ಸಿನಿಮಾದಲ್ಲಿ ಅಭಿನಯಿಸಲು ಕೇಳಿದರು.
ಆಗ ಇನ್ನೂ ಹದಿನಾರು ವರ್ಷದ ಹುಡುಗಿಯಾಗಿದ್ದರಿಂದ ತಾಯಿಯ ಒಪ್ಪಿಗೆಯ ಮೇರೆಗೆ ಅಭಿನಯಿಸಲು ಒಪ್ಪಿಗೆ ನೀಡಿದರು . ರಜನಿಕಾಂತ್ ಚಿತ್ರದ ಮೂಲಕ ಟಾಲಿವುಡ್ ಚಿತ್ರರಂಗಕ್ಕೆ ಪಾದಾರ್ಪಣೆ ಯನ್ನು ಮಾಡಿ ಫೇಮಸ್ ನಟಿಯಾಗಿ ಬೆಳೆದರು. ನಂತರ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಯಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದರು .ಒಲವಿನ ಆಸರೆ ಎಂಬ ಕನ್ನಡ ಚಿತ್ರರಂಗದ ಮೂಲಕ ಸ್ಯಾಂಡಲ್ ವುಡ್ ಚಿತ್ರರಂಗ ಪ್ರವೇಶ ಮಾಡಿದ ರೂಪಿಣಿ ವಿಷ್ಣುವರ್ಧನ್ ಅವರ ಜೊತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ .
ಇವರು ವಿಷ್ಣುವರ್ಧನ್ ಅವರ ಜೊತೆ ನಟಿಸಿದ ಮತ್ತೆ ಹಾಡಿತು ಕೋಗಿಲೆ ಮತ್ತು ರವಿಚಂದ್ರನ್ ಅವರ ಜತೆ ನಟಿಸಿದ ಗೋಪಿಕೃಷ್ಣ ಮುಂತಾದ ಚಿತ್ರಗಳು ಸೂಪರ್ ಡೂಪರ್ ಹಿಟ್ ಆದವು .ರೂಪಿಣಿರವರು ಹಿಂದಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಸುಮಾರು ಎಪ್ಪತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ .
ರೂಪಿಣಿ ರನವರು 1995 ರಲ್ಲಿ ಮೋಹನ್ ಕುಮಾರ್ ಎಂಬವರನ್ನು ಮದುವೆಯಾದರು . ಇವರು ಪ್ರಸ್ತುತ ಚೆನ್ನೈನಲ್ಲಿ ನೆಲೆಸಿದ್ದಾರೆ . ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ರೂಪಿಣಿರವರು ವಿಶೇಷಚೇತನ ಮಕ್ಕಳಿಗಾಗಿ ಸ್ಪರ್ಶ ಫೌಂಡೇಷನ್ ಎಂಬ ಸಂಸ್ಥೆಯನ್ನು ನಡೆಸುವುದರ ಮೂಲಕ ವಿಶೇಷ ಚೇತನ ಮಕ್ಕಳಿಗೆ ಆಸರೆಯಾಗಿದ್ದಾರೆ.