ಪವರ್ ಸ್ಟಾರ್ ಪುನೀತ್ ಚಿತ್ರಕ್ಕೆ ನಟಿ ಫಿಕ್ಸ್, ತೆಲುಗು ನಟಿ ತ್ರಿಷಾ ಕೃಷ್ಣನ್ ಮತ್ತೆ ಕನ್ನಡಕ್ಕೆ
ಕನ್ನಡ ಚಿತ್ರರಂಗದಲ್ಲಿ ವರುಷಕ್ಕೆ ಸಾಕಷ್ಟು ಜನರು ಹುಟ್ಟುಕೊಳ್ಳುತ್ತಾರೆ ಅಂತೆಯೇ ಸಾಕಷ್ಟು ಕಲಾವಿದರು ಬಂದ ದಾರಿಗೆ ಸುಂಕವಿಲ್ಲ ಎಂದು ಹಿಂತಿರುತ್ತಾರೆ. ಆದರೆ ಕೊನೆಯವರೆಗೂ ಉಳಿದು ಕೊಳ್ಳುವವರು ಮಾತ್ರ ತಮ್ಮ ಸರಳತೆಯ ವ್ಯಕ್ತಿತ್ವ ದಿಂದ ಜನರ ಮನಸ್ಸಿನಲ್ಲಿ ಶಾಶ್ವತವಾದ ಪ್ರೀತಿಯನ್ನು ಹೊಂದಿದವರು. ಹೌದು ನಮ್ಮ ಚೆಂದನವನದಲ್ಲಿ ಕೂಡ ಅಂತಹ ಒರ್ವ ನಟರಿದ್ದು, ತಮ್ಮ ಸರಳತೆಯಿಂದಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೌದು ನಮ್ಮ ಚಿತ್ರರಂಗದಲ್ಲಿ ಸರಳತೆಗೆ ಮತ್ತೊಂದು ಹೆಸರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು.
ತಮ್ಮನ್ನು ಪ್ರೀತಿಯಿಂದ ಕಾಣುವಂತಹ ಕೋಟ್ಯಾಂತರ ಅಭಿಮಾನಿಗಳ ಜೊತೆ ಅಪ್ಪು ಬಹಳ ಆತ್ಮೀಯತೆಯಿಂದಲೇ ಬೆರೆಯುತ್ತಾರೆ. ತಾನೊಬ್ಬ ಮೇರು ನಟರ ಮಗ ಎನ್ನುವ ಅಹಂ ಇಲ್ಲದ ಹೃದಯ ಶ್ರೀಮಂತಿಕೆಯಿಂದ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದು ಬಿಟ್ಟಿದ್ದಾರೆ. ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾಗುವ ಮುನ್ನಾ, ತೆರೆಕಂಡ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಮತ್ತೊಮ್ಮೆ ಪುನೀತ್ ರಾಜ್ ಕುಮಾರ್ ರವರು ತಾನೊಬ್ಬ ಕೌಟುಂಬಿಕ ನಟ ಎಂಬುದನ್ನು ಸಾಬೀತು ಪಡಿಸಿದ್ದರು.
ಚಿತ್ರದಲ್ಲಿ ಅಪ್ಪು ಪ್ರೋಫೆಸರ್ ಆಗಿ ಕಾಣಿಸಿಕೊಂಡಿದ್ದು, ಸಾಮಾಜದಲ್ಲಿ ನಡೆಯುತ್ತಿರುವ ವಿಧ್ಯಾಭ್ಯಾಸದ ದಂದೆಯ ವಿರುದ್ಧ ಧ್ವನಿ ಎತ್ತುವ ಫವರ್ ಫುಲ್ ಯುವ ನಾಗಿ ಕಾಣಿಸಿಕೊಂಡಿದ್ದರು. ಆದರೆ ನಾಕ್ ಡೌನ್ ಕಾರಣದಿಂದಾಗಿ ತೆರೆಕಂಡ ಕೇವಲ ಒಂದು ವಾರದಲ್ಲಿ ಸಿನಿಮಾವನ್ನು ಓಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆ ಮಾಡಿದ್ದು ಅಭಿಮಾನಿಗಳಿಂದ ತೀವ್ರ ಬೇಸರ ವ್ಯಕ್ತವಾಗಿತ್ತು. 2 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಅವರನ್ನು ತೆರೆಯ ಮೇಲೆ ನೋಡಿದ ಅಭಿಮಾನಿಗಳು ಸಂತಸ ಪಟ್ಟಿದ್ದು ವಿಶೇಷ ಸಿನಿಮಾದಲ್ಲಿ ವಿಶೇಷ ಪಾತ್ರದ ಮೂಲಕ ಅಪ್ಪು ಎಲ್ಲರ ಮನ ಗೆದ್ದಿದ್ದರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಪವನ್ ಕುಮಾರ್ ಜೊತೆಯಾಗಿ ಮಾಡಲಿರುವ ಹೊಸ ಚಿತ್ರಕ್ಕೆ ‘ದ್ವಿತ್ವ’ ಎಂದು ಶೀರ್ಷಿಕೆ ಇಡಲಾಗಿದೆ. ಚಿತ್ರಕ್ಕೆ ಪುನೀತ್ ಹೀರೋ ಅನ್ನೋ ಮಾಹಿತಿ ಬಿಟ್ಟರೆ ಇತರೆ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ.ಹೀಗಾಗಿ, ಸಿನಿಮಾ ನಾಯಕಿ ಯಾರು ಅನ್ನೋದು ಅನೇಕರ ಪ್ರಶ್ನೆಯಾಗಿತ್ತು. ಇದಕ್ಕೆ ಈಗ ಚಿತ್ರತಂಡದಿಂದ ಉತ್ತರ ಸಿಕ್ಕಿದೆ. ಸೈಕಲಾಜಿಕಲ್ ಕಥಾಹಂದರ ಹೊಂದಿದ್ದ ‘ಲೂಸಿಯಾ’ ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಪವನ್ ಕುಮಾರ್ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು.
ಅವರು ‘ದ್ವಿತ್ವ’ ಸಿನಿಮಾದಲ್ಲಿ ಮತ್ತೆ ಸೈಕಲಾಜಿಕಲ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಶೀರ್ಷಿಕೆ ಜೊತೆಗೆ ಡಿಫರೆಂಟ್ ಆದಂತಹ ಪೋಸ್ಟರ್ ಕೂಡ ಇತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಈಗ ಈ ಚಿತ್ರಕ್ಕೆ ತ್ರಿಷಾ ಕೃಷ್ಣನ್ ನಾಯಕಿಯಾಗಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. 2014ರಲ್ಲಿ ತೆರೆಗೆ ಬಂದ ಪುನೀತ್ ನಟನೆಯ “ಪವರ್” ಚಿತ್ರದಲ್ಲಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು