ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾ ಎದುರೇ ನಗ್ನರಾಗಿ ‘ಅದನ್ನ’ ಮಾಡಿದ್ದಾರೆ’ ಸತ್ಯ ಬಿಚ್ಚಿಟ್ಟ ಸ್ಪರ್ಧಿ
ಬಿಗ್ ಬಾಸ್ ಮನೆಯಲ್ಲಿ ಕ್ಯಾಮೆರಾ ಎದುರೇ ಲೈಂಗಿಕ ಕ್ರಿಯೆ ನಡೆದಿದೆ ಎಂದು ಸ್ಪರ್ಧಿಯೊಬ್ಬರು ಹೇಳಿಕೆ ನೀಡಿದ್ದಾರೆ. ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಹಿಂದಿ ಬಿಗ್ ಬಾಸ್ ಸ್ಪರ್ಧಿ ಊರ್ಫಿ ಜಾವೇದ್ ಈ ರೀತಿಯ ಹೇಳಿಕೆ ನೀಡಿರುವ ವಿಡಿಯೋ ಈಗ ಭಾರೀ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲೇ ಇದ್ದಾಗಲೇ ಊರ್ಫಿ ಹೀಗೊಂದು ಶಾಕಿಂಗ್ ಹೇಳಿಕೆ ನೀಡಿದ್ದು, ವೀಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ.
ಸ್ಪರ್ಧಿ ಪ್ರತೀಜ್ ಸೆಹಜ್ ಪಾಲ್ ಮುಂದೆಯೇ ಕ್ಯಾಮೆರಾ ಎದುರಿಗೆ ಬಂದೇ ಊರ್ಫಿ ಹೀಗೆ ಹೇಳಿಕೆ ನೀಡಿದ್ದರು. ನನ್ನ ಕಣ್ಣ ಮುಂದೆಯೇ ಬಿಗ್ ಬಾಸ್ ಮನೆಯಲ್ಲಿ ಲೈಂಗಿಕ ಕ್ರಿಯೆ ನಡೆದಿದೆ. ಅದನ್ನು ನಿಮಗೆ ತೋರಿಸಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಕ್ಯಾಮೆರಾ ಎದುರಿಗೆ ಅದು ನಡೆದಿದ್ದು ನಿಜ ಎಂದು ಊರ್ಫಿ ಹೇಳಿದ್ದಾರೆ. ಈ ವೇಳೆ ಸ್ಪರ್ಧಿ ಪ್ರತೀಜ್, ಏನು ಹೇಳ್ತಿದ್ಯಾ? ಯಾರ ಬಗ್ಗೆ ಮಾತಾಡ್ತಿದ್ಯಾ? ಎಂದು ಶಾಕ್ ಆದರು.
ಆಗ ಊರ್ಫಿ, ಹೌದು ಮನೆಯಲ್ಲಿ ನಡೆದಿದ್ದು ನಿಜ. ಅದು ಕ್ಯಾಮೆರಾ ಎದುರೇ ನಡೆದಿದೆ, ನೀನು ನೋಡಿಲ್ವಾ? ಎಂದು ಮರು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತೀಜ್, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಅಚ್ಚರಿಗೊಂಡಿದ್ದಾರೆ. ಸದ್ಯ ಊರ್ಫಿ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗಿದೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯೋಕೆ ಊರ್ಫಿ ಹೇಗೆ ಹೇಳಿಕೆ ನೀಡಿದ್ದರು ಎಂದು ಹೇಳಲಾಗುತ್ತಿದೆ. ಈಗ ಊರ್ಫಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.
ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ಗೆ ಕೆಲವು ರೂಲ್ಸ್ ಅಂಡ್ ರೆಗ್ಯೂಲೆಷನ್ಸ್ ಇವೆ. ಆದರೆ, ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ಗೆ ಯಾವುದೇ ನಿರ್ಬಂಧಗಳಿಲ್ಲದ ಕಾರಣ ಹೀಗಾಗಿದೆ ಎನ್ನಲಾಗುತ್ತಿದೆ.