ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ ಈಕೆಗೆ ಕಾಮಿಡಿ ಪಾತ್ರ ಮಾಡಲು ಕಷ್ಟವಿಲ್ಲವಂತೆ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲಿ ನಾಯಕಿ ಸುಬ್ಬಿ ಆಲಿಯಾಸ್ ಸುಬ್ಬಲಕ್ಷ್ಮಿ ಆಗಿ ನಟಿಸಿ ಸೀರಿಯಲ್ ವೀಕ್ಷಕರ ಅದರಲ್ಲೂ ಹೆಣ್ ಮಕ್ಕಳ ಮನಸೆಳೆದಿರುವ ದೀಪಾ ಭಾಸ್ಕರ್ ಬಾಲನಟಿಯಾಗಿ ಬಣ್ಣದ ಪಯಣ ಶುರು ಮಾಡಿರುವ ಸಂಗತಿ ಹಲವರಿಗೆ ತಿಳಿದಿರುವ ವಿಚಾರ.
ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯ ನಂತರ ಕಿರುತೆರೆಯಿಂದ ಕೊಂಚ ದೂರವಿದ್ದ ದೀಪಾ ಭಾಸ್ಕರ್ ಊರ್ಮಿಳಾ ಆಗಿ ನಟನಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದ್ದಾಗಿದೆ. ಹೌದು, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮಜಾಟಾಕೀಸ್ ನಲ್ಲಿ ಊರ್ಮಿಳಾ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿರುವ ದೀಪಾ ಭಾಸ್ಕರ್ ಮಗದೊಮ್ಮೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. “ಮೂಲತಃ ನಾನು ರಂಗಭೂಮಿಯ ಹಿನ್ನಲೆಯಿಂದ ಬಂದವಳು. ರಂಗಭೂಮಿಯ ಹಿನ್ನಲೆಯಿದ್ದ ಕಾರಣದಿಂದಲೋ ಏನೋ ನನಗೆ ಕಾಮಿಡಿ ಮಾಡುವುದು ಹೊಸತೇನಲ್ಲ. ಇನ್ನು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಯಲ್ಲೂ ಅಷ್ಟೇ. ಸುಬ್ಬಿ ಪಾತ್ರವೂ ಕೊಂಚ ಹಾಸ್ಯಮಯವಾಗಿತ್ತು.