ENTERTAINMENT

ದೊಡ್ಡ ಸ್ಟಾರ್​ ಆದ್ರೂ ಅನಾಥಾಶ್ರಮದಲ್ಲಿ ಮದುವೆಯಾದ ಮಾಧವಿ..ಪತಿ-ಪತ್ನಿ ವಿಧಿಸಿಕೊಂಡ ಷರತ್ತುಗಳೇನು ಗೊತ್ತಾ?

ಕನ್ನಡ ಚಿತ್ರರಂಗ ಕಂಡ ಸುಂದರ ನಟಿಯರಲ್ಲಿ ಮಾಧವಿ ಕೂಡಾ ಒಬ್ಬರು. ಮೂಲತ: ತೆಲುಗು ಕುಟುಂಬಕ್ಕೆ ಸೇರಿದ ಮಾಧವಿ ಕನ್ನಡದವರೇ ಆಗಿ ಹೋಗಿದ್ದರು. ಏಕೆಂದರೆ ಅವರ ಅಭಿನಯ ನೋಡಿದ ಯಾರೂ ಅವರನ್ನು ಬೇರೆ ಭಾಷೆಯವರು ಎಂದು ಹೇಳಲು ಸಾಧ್ಯವೇ ಇಲ್ಲ. ಡಾ. ರಾಜ್​​ಕುಮಾರ್ ಅವರೊಂದಿಗೆ ನಟಿಸಿದ ‘ಜೀವನಚೈತ್ರ’, ‘ಅನುರಾಗ ಅರಳಿತು’, ಒಡಹುಟ್ಟಿದವರು, ಡಾ. ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ್ದ ‘ಮಲಯ ಮಾರುತ’ ಚಿತ್ರವಾಗಲೀ ಅವರು ನಟಿಸಿದ್ದ ಎಲ್ಲಾ ಸಿನಿಮಾಗಳಲ್ಲೂ ಅವರ ಅಭಿನಯ ಮನೋಜ್ಞವಾಗಿತ್ತು.

ಇನ್ನು ಮಾಧವಿ ಚಿತ್ರರಂಗದಲ್ಲಿ ಉತ್ತುಂಗದಲ್ಲಿರುವಾಗಲೇ ತಮ್ಮ ಆಧ್ಯಾತ್ಮಿಕ ಗುರುಗಳಾದ ಸ್ವಾಮಿ ರಾಮ ಹಾಗೂ ಅಪ್ಪ-ಅಮ್ಮ ನೋಡಿದ ರಾಲ್ಫ್​​​ ಜಯದೀಪ್ ಶರ್ಮಾ ಎಂಬುವವರನ್ನು ಕೈ ಹಿಡಿದರು. ಜಯದೀಪ್ ಯುಎಸ್​ ಫಾರ್ಮಾಸ್ಯುಟಿಕಲ್ ಕಂಪನಿಯೊಂದರ ಮಾಲೀಕರಾಗಿದ್ದರು. ಅವರ ತಂದೆ ಭಾರತೀಯರಾದರೆ ತಾಯಿ ಜರ್ಮಿನಿಯವರು. ಎಷ್ಟೇ ದೊಡ್ಡ ನಟಿ ಆದರೂ ಮಾಧವಿ ಲವ್ ಮ್ಯಾರೇಜ್ ಎಂದು ತಲೆ ಕೆಡಿಸಿಕೊಳ್ಳದೆ ಹಿರಿಯರು ನೋಡಿದ ಹುಡುಗನನ್ನು ಮದುವೆಯಾದರು. ಅದಕ್ಕೂ ಮುನ್ನ ಜಯದೀಪ್ ಹಾಗೂ ಮಾಧವಿಗೆ ಪರಿಚಯವೇ ಇರಲಿಲ್ಲ.

ಇನ್ನು ಮದುವೆಗೂ ಒಂದು ವಾರ ಇರುವಾಗಲೇ ಮಾಧವಿ ಹಾಗೂ ಜಯದೀಪ್ ಒಮ್ಮೆ ಭೇಟಿ ಮಾಡಿದ್ದರಂತೆ. ಆಗ ಅವರು ಮಾತನಾಡಿದ್ದು ಮೂರೇ ವಿಚಾರವಂತೆ. ಜಯದೀಪ್ ಮಾಧವಿಗೆ ಎರಡು ಕಂಡಿಷನ್ ಹಾಕಿದರೆ, ಮಾಧವಿ ಜಯದೀಪ್ ಅವರಿಗೆ ಒಂದು ಕಂಡಿಷನ್ ಹಾಕಿದ್ದರಂತೆ. ಇರುವಷ್ಟು ದಿನ ನನ್ನ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಹಾಗೂ ಸಂಪಾದನೆಯ ಹಣದ ಸ್ವಲ್ಪ ಭಾಗವನ್ನ ಚಾರಿಟಿಗೆ ತೆಗೆದಿರಿಸಬೇಕು ಎಂದು ಜಯದೀಪ್ ಮಾಧವಿಗೆ ಕಂಡಿಷನ್ ಮಾಡಿದ್ದರೆ, ನನ್ನ ಸಿನಿಮಾಗಳನ್ನು ನೀವು ನೋಡಬಾರದು ಹಾಗೂ ಸ್ನೇಹಿತರಿಗೂ ತೋರಿಸಬಾರದು ಎಂದು ಮಾಧವಿ ಹೇಳಿದ್ದರಂತೆ. 14 ಫೆಬ್ರವರಿ 1996 ರಂದು ಮಾಧವಿ ಹಾಗೂ ಜಯದೀಪ್ , ಸ್ವಾಮಿ ರಾಮ ಅವರ ಆಶ್ರಮದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮದುವೆಗೆ ಮುನ್ನ ಮಾಡಿಕೊಂಡಿದ್ದ ಒಪ್ಪಂದವನ್ನು ಇಂದಿಗೂ ಇಬ್ಬರೂ ಉಳಿಸಿಕೊಂಡು ಬಂದಿದ್ದಾರೆ. ಆದರೆ ಮದುವೆಯಾಗಿ ಹಲವು ವರ್ಷಗಳ ಬಳಿಕ ತಾವು ಅಭಿನಯಿಸಿದ್ದ 2 ಸಿನಿಮಾಗಳನ್ನು ಮಾಧವಿ ತಮ್ಮ ಪತಿಗೆ ತೋರಿಸಿದ್ದಾರೆ. ಸಿನಿಮಾಗಳನ್ನು ನೋಡಿದ ಪತಿ, ನೀನೂ ನಿಜಕ್ಕೂ ಅದ್ಭುತ ಕಲಾವಿದೆ, ಆ್ಯಕ್ಟಿಂಗ್ ಬಿಡಬೇಡ ಎಂದು ಹೇಳಿದ್ದರಂತೆ. ಅದು ನಿಜಕ್ಕೂ ನನಗೆ ಬಹಳ ಖುಷಿಯ ವಿಚಾರ ಎನ್ನುತ್ತಾರೆ ಮಾಧವಿ.

ಮದುವೆ ನಂತರ ಪತಿಯ ಬ್ಯುಸ್ನೆಸ್ ನೋಡಿಕೊಳ್ಳುತ್ತಾ ಅಮೆರಿಕದ ನ್ಯೂಜೆರ್ಸಿಯಲ್ಲಿ ನೆಲೆಸಿರುವ ಮಾಧವಿಗೆ ಈಗ ಮೂವರು ಹೆಣ್ಣು ಮಕ್ಕಳು. ಎವ್ಲಿನ್ ಶರ್ಮಾ, ಪ್ರಿಸಿಲ್ಲಾ ಶರ್ಮಾ, ಟಿಫಾನಿ ಶರ್ಮಾ. ಪ್ರೀತಿಸುವ ಪತಿಯೊಂದಿಗೆ, ಮುದ್ಧಾದ ಮಕ್ಕಳೊಂದಿಗೆ ಮಾಧವಿ ಈಗ ನೆಮ್ಮದಿಯ ಜೀವನ ನಡೆಸುತ್ತಿದ್ಧಾರೆ. ಮಕ್ಕಳಿಗೆ ಭಾರತೀಯ ಸಂಸ್ಕಾರವನ್ನು ಕೂಡಾ ಮಾಧವಿ ಕಲಿಸಿಕೊಟ್ಟಿದ್ಧಾರಂತೆ. ಇನ್ನು ಮಾಧವಿಗೆ ಸಿನಿಮಾದಲ್ಲಿ ನಟಿಸಲು ಇಂದಿಗೂ ಆಫರ್ ಬರುತ್ತಿದೆಯಂತೆ. ಆದರೆ ನಾನು ಶೂಟಿಂಗ್​​ನಲ್ಲಿ ಬ್ಯುಸಿ ಆದರೆ ಮಕ್ಕಳು, ಪತಿಯನ್ನು ನೋಡಿಕೊಳ್ಳುವವರು ಇರುವುದಿಲ್ಲ. ಒಂದು ವೇಳೆ ನನ್ನ ಮಕ್ಕಳು ನಟಿಸಿದರೆ ನಾನು ಅದಕ್ಕೆ ಒಪ್ಪಿಗೆ ನೀಡುತ್ತೇನೆ ಎನ್ನುತ್ತಾರೆ ಮಾಧವಿ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button