ENTERTAINMENT

ಸಿನೆಮಾ ಅವಕಾಶಗಳು ಸಿಗದೇ ಇರೋ ಸಮಯದಲ್ಲಿ ಪವಿತ್ರಾ ಲೋಕೇಶ್ ಮಾಡಿದ್ದೇನು ನೋಡಿ…….

ಸಿನಿಮಾ ಎಂದರೆ ಅದೊಂದು ಮಾಯಲೋಕ. ಅಂದಹಾಗೆ, ದೂರದಿಂದ ನೋಡಲು ಎಲ್ಲರೂ ಸುಂದರವಾಗಿಯೇ ಕಾಣಿಸುತ್ತದೆ.ಆದರೆ ಸಾಮಾನ್ಯವಾಗಿ ಎಲ್ಲರೂ ಭಾವಿಸುವುದೇ ಹೀಗೆ, ಸಿನಿಮಾರಂಗದಲ್ಲಿ ಇದ್ದಾರೆ ಅವರಿಗೇನು ಕಡಿಮೆ, ಸಿನಿಮಾದಲ್ಲಿ ಸಂಭಾವನೆ ಸಿಕ್ಕೇ ಸಿಗುತ್ತದೆ. ಅದರ ಜೊತೆಗೆ ಒಂದಷ್ಟು ಪ್ರಖ್ಯಾತಿ. ಅವರಿಗೇನು ಕಡಿಮೆ ಇಲ್ಲ ಬಿಡಿ. ಇದು ಸಹಜವಾಗಿ ಅಂದುಕೊಳ್ಳುವುದು ಆದರೆ ಸಿನಿಮಾಕ್ಕೆ ಎಂಟ್ರಿ ಕೊಟ್ಟರೆ, ಸಿನಿಮಾದಲ್ಲೂ ಏಳು ಬೀಳುಗಳಿವೆ. ಇದನ್ನು ಸ್ಪಷ್ಟವಾಗಿ ಕಂಡವರು ನಟಿ  ಪವಿತ್ರಾ ಲೋಕೇಶ್.

ಅಂದಹಾಗೆ, 1979 ರಲ್ಲಿ  ಮೈಸೂರಿನಲ್ಲಿ ಜನಿಸಿದ ಪವಿತ್ರರವರು  ರಂಗಭೂಮಿ ಮತ್ತು ಸಿನಿಮಾ ಕಲಾವಿದರಾದ  ಮೈಸೂರು ಲೋಕೇಶ್ ರವರ ಪುತ್ರಿ . ತಾಯಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇನ್ನು  ಪವಿತ್ರ ಅವರು ಒಂಬತ್ತನೇ ತರಗತಿಯಲ್ಲಿರುವಾಗಲೇ ತಂದೆ ಲೋಕೇಶ್ ಅವರನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಹದಿನಾರನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿ ಕೊಡುತ್ತಾರೆ.ಕಿರುತೆರೆಯಲ್ಲಿ  ಹಲವಾರು ಧಾರಾವಾಹಿಗಳಲ್ಲಿ ತಮ್ಮ ಅಮೋಘ ಅಭಿನಯ ಮೂಲಕ ಮೋಡಿ ಮಾಡಿದ್ದಾರೆ.

1995 ರಲ್ಲಿ ತೆರೆಕಂಡ ಮಿಸ್ಟರ್ ಅಭಿಷೇಕ್ ಚಿತ್ರದ ಮೂಲಕ ಪವಿತ್ರ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಬಂಗಾರದ ಕಳಸ, ಜನುಮದ ಜೋಡಿ,  ಕುರುಬನ ರಾಣಿ, ಯಜಮಾನ, ಸ್ವಾತಿ ಮುತ್ತು, ಮಲ್ಲ, ಲವ್, ರೋಜ್,ಬಹೂದ್ದುರ್ಆಕಾನ್, ಉಲ್ಟ-ಪಲ್ಟಾ, ತವರಿನ ತೇರು,ಗೌರಮ್ಮ, ರಾಕ್ಷಸ ಸೇರಿದಂತೆ ಕನ್ನಡದಲ್ಲಿ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.ಇನ್ನು ಸುಮಾರು 150 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲವು ಸಿನಿಮಾಗಳಲ್ಲಿ ಇವರ ಅದ್ಭುತ ನಟನೆಗಾಗಿ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ.ಇನ್ನು 2007 ರಲ್ಲಿ ಸಹ ನಟರಾದ ಸುಚೇಂದ್ರ ಪ್ರಸಾದ್ ಎಂಬುವರನ್ನು ವಿವಾಹವಾಗಿದ್ದಾರೆ.

ಇದೀಗ ಈ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.ಅದು ಅಲ್ಲದೇ ಪವಿತ್ರಾ ಲೋಕೇಶ್ ಅವರ ತಂದೆ ಸಿನಿಮಾದಲ್ಲಿ ನಟಿಸುತ್ತಿದ್ದರಿಂದ ಪ್ರಖ್ಯಾತಿ ಗಳಿಸಿದ್ದರು. ತಂದೆಗೆ ಹೇಗೂ ಸಿನಿರಂಗದಲ್ಲಿ ಹೆಸರು ಇತ್ತು. ಹೀಗಾಗಿ ಸಿನಿಮಾ ರಂಗದಲ್ಲಿ ಅವಕಾಶಗಳು ಸಿಗಬಹುದು ಎಂದುಕೊಂಡರು.ಆದರೆ ಸಿನಿಮಾ ರಂಗದಲ್ಲಿ ಅವಕಾಶಗಳು ಪವಿತ್ರ ಲೋಕೇಶ್ ಪಾಲಿಗೆ ಕಡಿಮೆಯಾಗಿತ್ತು. ಹೀಗಿರುವಾಗ ಮನೆಯ ಜವಾಬ್ದಾರಿಗಳು ತನ್ನ ಮೇಲೆ ಬಿತ್ತು.

ಇನ್ನು ಕಷ್ಟದ ದಿನಗಳನ್ನು ಮೆಟ್ಟಿ ನಿಂತು ಇದೀಗ  ಪೋಷಕ ನಟಿಯಾಗಿ ಮತ್ತೆ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಮತ್ತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಮೋಡಿ ಮಾಡುತ್ತಿದ್ದಾರೆ. ಒಟ್ಟಿನಲ್ಲಿ  ಸಿನಿಮಾ ಎಂದರೆ ಅಲ್ಲಿ ಯಾವಾಗಲೂ ಅವಕಾಶಗಳು ಇರಬೇಕೆಂದು ಏನಿಲ್ಲ. ಕೆಲವೊಮ್ಮೆ ಅವಕಾಶಗಳು ಸಿಗದೇ ಇಲ್ಲದೇ ಇರಬಹುದು. ಅದೇನೇ ಕಷ್ಟ ದ ದಿನಗಳು ಬಂದರೂ, ಅದನ್ನೆಲ್ಲಾ ಮೆಟ್ಟಿ ನಿಂತು ಇದೀಗ ಮತ್ತೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಪವಿತ್ರಾ ಲೋಕೇಶ್ ನಿಜಕ್ಕೂ ಎಲ್ಲರಿಗೂ ಮಾದರಿಯಾಗಿದ್ದಾರೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button