ENTERTAINMENT

ಸಾಕಷ್ಟು ವಿವಾದಗಳಿಗೆ ಗುರಿಯಾದರೂ ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶನದ ಮಲ್ಲ ಚಿತ್ರ ಇಷ್ಟ ಎಂದ ಪ್ರಿಯಾಂಕ ಉಪೇಂದ್ರ    

ಎರಡು ದಶಕಗಳಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ ಸಿನಿಮಾಗಳ ಸಂಖ್ಯೆ ಸುಮಾರು ನಲವತ್ತರಷ್ಟು ಆಗಬಹುದು. ಬಂಗಾಳಿ ಭಾಷೆಯ ಮೂಲಕ ತಮ್ಮ ವೃತ್ತಿ ಬದುಕು ಆರಂಭಿಸಿದ ಅವರು ಹಿಂದಿ, ತೆಲುಗು, ಕನ್ನಡ, ತಮಿಳು ಮತ್ತು ಒರಿಯಾ ಭಾಷೆಗಳಲ್ಲಿ ನಟಿಸಿದ್ದಾರೆ.

ಇಂದಿಗೂ ಕನ್ನಡದಲ್ಲಿ ಉತ್ತಮ ಹೆಸರನ್ನು ಬೇಡಿಕೆಯನ್ನು ಇರಿಸಿಕೊಂಡಿದ್ದಾರೆ. ಇಷ್ಟೆಲ್ಲದರ ಮಧ್ಯೆಯೂ ತಮ್ಮ ನೆಚ್ಚಿನ ಸಿನಿಮಾ ‘ಮಲ್ಲ’ ಎಂದು ಪ್ರಿಯಾಂಕಾ ಅವರು ಹೇಳಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ವಿವಾಹ ಮಾಡಿಕೊಂಡ ಬಳಿಕ ಅವರು ಕೇವಲ ಪೋಷಕ ಪಾತ್ರಗಳಿಗೆ ಮಾತ್ರವೇ ಸೀಮಿತವಾಗಿದ್ದರು.

ಭಾರತದ ನಟಿಯರ ನಡುವೆ ಒಂದಷ್ಟು ವಿಭಿನ್ನ ಎಂದು ತೋರಿಸಿಕೊಂಡಿದ್ದರು. ಏಕೆಂದರೆ ಅವರು ಮದುವೆಯಾದ ನಂತರವೂ ಒಂದಷ್ಟು ಬಂಗಾಳಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಬ್ರೇಕ್ ನೀಡಿದ್ದರು. ಆದರೆ ಇಬ್ಬರು ಮಕ್ಕಳ ತಾಯಿಯಾದ ಸ್ವಲ್ಪ ಕಾಲ ತೆರೆಯಿಂದ ದೂರವಿದ್ದರು. ಆದರೆ ಪತ್ನಿಯಿಂದ ತಾಯಿ ಪಟ್ಟಕ್ಕೆ ಬಡ್ತಿ ಪಡೆದ ನಂತರವೂ ತೀರ ಇತ್ತೀಚೆಗೆ ತಮ್ಮ ಜನ್ಮದಿನದಂದು ಎರಡೆರಡು ಸಿನಿಮಾಗಳ ಟೈಟಲ್ ಘೋಷಣೆ ಮಾಡುವ ಮೂಲಕ ತಾವು ಇಂದಿಗೂ ಬಿಡುವಿರದ ನಟಿ ಎಂದು ಸಾಬೀತು ಮಾಡಿದ್ದಾರೆ.

ಅಲ್ಲದೇ, ನಾಯಕಿ ಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷವೆಂದೇ ಹೇಳಬಹುದು. ಪ್ರಿಯಾಂಕ ಅವರ ತಾಯಿ ಬಂಗಾಳಿ ಚಿತ್ರನಟಿಯಾಗಿದ್ದವರು. ಹಾಗಾಗಿ ಮೊದಲಿನಿಂದಲೂ ನಟನೆಗೆ ಹೆಚ್ಚಿನ ಪ್ರಾಧಾನ್ಯತೆ ಇರುವ ಪಾತ್ರಗಳಲ್ಲೇ ನಟಿಸುತ್ತಾ ಬಂದರು. ಆದ್ದರಿಂದ ನಟಿಸಿದ ಎಲ್ಲಾ ಸಿನಿಮಾಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ. ‘ಸಾಥಿ’ ಚಿತ್ರದಲ್ಲಿ ಹೊಸ ನಾಯಕನನ್ನು ಪರಿಚಯ ಮಾಡಲಾಗಿತ್ತು. ಆ ಚಿತ್ರ ಎಷ್ಟು ದೊಡ್ಡ ಹಿಟ್ ಆಯಿತೆಂದರೆ ಆ ನಟ ಜೀತ್ ಈಗ ಅಲ್ಲಿ ದೊಡ್ಡ ಸ್ಟಾರ್ ಆಗಿ ಬೆಳೆದಿದ್ದಾನೆ. ನಾನು ಅದರ ಸೆಕೆಂಡ್ ಹಾಫ್ ನಲ್ಲಿ ಒಬ್ಬ ಅಂಧೆಯ ಪಾತ್ರ ಮಾಡಿದ್ದೆ. ಚಿತ್ರದ ಹಾಡುಗಳು ಇಂದಿಗೂ ಅಲ್ಲಿ ಜನಪ್ರಿಯ.

ಅದಾಗಲೇ ಮೂರ್ನಾಲ್ಕು ವರ್ಷಗಳಿಂದ ಬೇರೆ ಭಾಷೆಗಳಲ್ಲಿ ನಟಿಸಿದ್ದರು. ಆದರೆ ರವಿಚಂದ್ರನ್ ಅವರು ನೀಡಿದ ಪಾತ್ರ ಎಲ್ಲಕ್ಕಿಂತ ವಿಭಿನ್ನವಾಗಿತ್ತು. ರವಿ ಸರ್ ಅವರ ನಿರ್ದೇಶನದಲ್ಲಿ ನಟಿಸುವುದು ಅಷ್ಟು ಸುಲಭ ಸಾಧ್ಯವಿರಲಿಲ್ಲ. ಅವರು ಪ್ರಾಂಮ್ಟಿಂಗ್ ತೆಗೆದುಕೊಂಡು ನಟಿಸಲು ಬಿಡುತ್ತಿರಲಿಲ್ಲ. ಅವರಿಗೆ ಸಂಭಾಷಣೆ ಒಂದೇ ಬಾರಿ ಹೇಳಿದರೆ ಮಾತ್ರ ಅದರಲ್ಲಿ ಫೀಲ್ ಬರುತ್ತದೆ ಎನ್ನುವ ನಂಬಿಕೆ ಇತ್ತು. ಹಾಗಾಗಿ ಎಷ್ಟು ಹೊತ್ತಾದರೂ ಪರವಾಗಿಲ್ಲ ಸಂಭಾಷಣೆ ಕಂಠಪಾಠ ಮಾಡಿಯೇ ಟೇಕ್ ತೆಗೆದುಕೊಳ್ಳುತ್ತಿದ್ದರು.

ಚಿತ್ರೀಕರಣ ವಿಭಿನ್ನ ಅನುಭವ. ಒಂದಷ್ಟು ಸೆಟ್‌ಗಳಲ್ಲಿ ಮತ್ತು ಇನ್ನೊಂದಷ್ಟು ಔಟ್‌ಡೋರ್‌ ಲೊಕೇಶನ್‌ಗಳಲ್ಲಿ ಅವುಗಳ ಚಿತ್ರೀಕರಣ ಇತ್ತು. ಅದರಲ್ಲಿ ನನಗೆ ಹಾಕಿದ ಒಡವೆ ಬಟ್ಟೆಯೇ ಸುಮಾರು 25 ಕೆಜಿ ತೂಕ ಇತ್ತು. ಅದು ಕೈಗೆ ಟೈಟ್‌ ಆಗಿ ಚುಚ್ಚಿಕೊಂಡು ರಕ್ತ ಬಂದಿತ್ತು. ಕೊಚ್ಚೆ ನೀರಲ್ಲಿ ಇಳಿದು ನಡೆಸಿದ ಚಿತ್ರೀಕರಣದಲ್ಲೂ ರಕ್ತ ಒರೆಸಿಕೊಂಡು ಚಿತ್ರೀಕರಣ ನಡೆಸಿದ್ದೂ ಇದೆ. ಆದರೆ ಹಾಡಿನ ಜೊತೆಗೆ ಚಿತ್ರವೂ ಹಿಟ್ ಆಗಿದ್ದು ಮಾತ್ರ ಸುಳ್ಳಲ್ಲ ಎಂದು ಆ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button