ENTERTAINMENT

ಅಭಿನಯ ಶಾರದೆ ಜಯಂತಿ ಅವರ ಗಂಡ ಯಾರು ಗೊತ್ತಾ? ದೊಡ್ಡ ಸೂಪರ್ ಸ್ಟಾರ್ ನಟ

ಅಭಿನಯ ಶಾರದೆ ಎಂದೇ ಕರುನಾಡಲ್ಲಿ ಪ್ರಖ್ಯಾತಿ ಗಳಿಸಿರುವ ನಟಿ ಎಂದರೆ ಜಯಂತಿ ಅವರು. ಹೌದು ಜೇನು ಗೂಡು ಎಂಬ ಕನಡ ಚಿತ್ರದ ಮೂಲಕ ಸಿನಿ ಜೀವನವನ್ನು ಪ್ರಾರಂಭಿಸಿದ ಅವರು, ನಂತರ ತೆಲುಗು, ತಮಿಳು, ಮಲಯಾಳಂ, ಹಿಂದಿ, ಮತ್ತು ಮರಾಠಿ ಭಾಷೆಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ದೊಡ್ಡ ದಾಖಲೆಯನ್ನೇ ಬರೆದಿದ್ದಾರೆ. ಮೂಲತಃ ಕರ್ನಾಟಕ ಜಿಲ್ಲೆಯ ಬಳ್ಳಾರಿಯಲ್ಲಿ ಜನಿಸಿದ ಇವರ ಹುಟ್ಟು ಹೆಸರು ಕಮಲಕುಮಾರಿ. ಚಿಕ್ಕ ವಯಸ್ಸಿನವರಿದ್ದಾಗಲೇ ತಂದೆಯಿಂದ ಬೇರ್ಪಟ್ಟು ತಾಯಿಯೊಡನೆ ಮದ್ರಾಸಿನಲ್ಲಿ ನೆಲೆಸಿದ್ದರು

ಜಯಂತಿ ಅವರ ತಾಯಿಗೆ ತನ್ನ ಮಗಳು ಭರತನಾಟ್ಯ ಕಲಾವಿದೆಯಾಗಬೇಕೆಂಬ ಕನಸನ್ನು ಹೊಂದಿದ್ದರಂತೆ. ಆದ ಕಾರಣ ಜಯಂತಿ ಅವರನ್ನು ಕಲಾವಿದೆ ಚಂದ್ರಕಲ ಅವರು ನಡೆಸುತ್ತಿದ್ದ ನೃತ್ಯ ಶಾಲೆಗೆ ಸೇರಿಸಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಮತ್ತೋರ್ವ ಪ್ರಖ್ಯಾತ ನಟಿ ಮನೋರಮ ಅವರು ಕೂಡ ಜಯಂತಿ ಅವರಿಗೆ ನೃತ್ಯ ತರಗತಿಯ ಸಹಪಾಠಿಯಾಗಿದ್ದರು. ಒಮ್ಮೆ ತಮಿಳು ಚಿತ್ರರಂಗದಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸುವ ಅವಕಾಶ ಜಯಂತಿ ಅವರಿಗೆ ಬಂದೊದಗಿತ್ತು.

ಅದಾಗ ಅಂದಿನ ಪ್ರಖ್ಯಾತ ನಟಿ ಸಾವಿತ್ರಿ ಅವರು, ಈಕೆಗೆ ಸಣ್ಣ ಸಂಭಾಷಣೆಯನ್ನು ಕೂಡ ಹೇಳಲು ಬರುವುದಿಲ್ಲ ಎಂದು ಆಚೆ ಕಳುಹಿಸಿದ್ದರಂತೆ. ಈ ಘಟನೆಯಿಂದ ಬಹಳ ವಿಚಲಿತರಾದ ಜಯಂತಿ ಅವರು, ನಂತರ ಇದನ್ನು ಗಂಭೀರ ಸವಾಲಾಗಿ ಸ್ವೀಕರಿಸಿ, ಉತ್ತಮ ನಟಿಯಾಗಿಯಾಗುತ್ತೇನೆ ಎಂದು ದೃಢಸಂಕಲ್ಪ ಮಾಡಿ ಇದೀಗ ಅಭಿನಯ ಶಾರದೆ ಎಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಕನ್ನಡದ ಮೇರು ನಟರಾದ ವರನಟ ಡಾ. ರಾಜಕುಮಾರ್ ಅವರ ಜೊತೆಯಲ್ಲೇ ಬರೊಬ್ಬರಿ 36 ಸಿನಿಮಾಗಳಲ್ಲಿ ನಾಯಕಿಯಾಗಿ ಅಭಿನಯಿಸಿ ತನ್ನದ ಆದ ಛಾಪು ಮೂಡಿಸಿದ್ದಾರೆ.

ಅದರಲ್ಲಿಯೂ ನಾಗರಹಾವು ಸಿನಿಮಾದಲ್ಲಿ ಒನಕೆ ಓಬವ್ವನ ಪಾತ್ರವಂತು ಮೈ ರೋಮಾಂಚನಗೊಳಿಸುತ್ತದೆ ಅಷ್ಟರ ಮಟ್ಟಿಗೆ ಆ ಪಾತ್ರಕ್ಕೆ ನಟಿ ಜಯಂತಿಯವರು ಜೀವ ತುಂಬಿದ್ದರು. ಇನ್ನು ಹೆಚ್ಚಿನ ಜನಕ್ಕೆ ನಟಿ ಜಯಂತಿ ಅಂದರೆ ಎಲ್ಲರಿಗೂ ಗೊತ್ತು ಆದರೆ ಅವರ ಪತಿ ಯಾರು ಎಂಬುದು ತಿಳಿದಿಲ್ಲ? ಅವರ ಪತಿ ಕೂಡ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರು ಎಂಬುದು ವಿಶೇಷ. ಹೌದು ನಟಿ ಜಯಂತಿ ಅವರ ಪತಿ ಯಾರು ಎಂದರೆ ಪಿ.ಕೆ.ಟಿ ಶಿವರಾಮ್ ರವರು. ನಟ ಹಾಗೂ ನಿರ್ದೇಶಕರಾಗಿರುವ ಇವರು ಕನ್ನಡದಲ್ಲಿ ಏಳು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಮತ್ತೊಂದು ವಿಷಯ ಏನೆಂದರೆ ನಟಿ ಜಯಂತಿ ಅವರನ್ನು ಮದುವೆಯಾಗುವ ಮುಮ್ನಾ ಪಿ.ಕೆ.ಟಿ ಶಿವರಾಮ್ ಅವರಿಗೆ ಮದುವೆಯಾಗಿ 8 ಜನ ಮಕ್ಕಳಿದ್ದರು.

ಜಯಂತಿ ಅವರನ್ನು ಮದುವೆಯಾದ ನಂತರ ಸಂಪೂರ್ಣವಾಗಿ ಕನ್ನಡ ಚಿತ್ರರಂಗಕ್ಕೆ ತಮ್ಮನ್ನು ಮೀಸಲಿರಿಸಿಕೊಂಡು ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿದರು. ಅಲಲ್ಲದೇ ನಿರ್ದೇಶನ ಮಾಡಿದ ಚಿತ್ರಗಳು ಕೂಡ ಸಾಕಷ್ಟು ಯಶಸ್ವಿಯನ್ನು ಗಳಿಸಿಕೊಂಡವು. ಆದರೆ ಶಿವರಾಂ ಅವರು ೨೦೦೮ರಲ್ಲಿ ಅನಾರೋಗ್ಯದ ಕಾರಣದಿಂದ ಇಹಲೋಕ ತ್ಯಜಿಸಿದ್ದು ಆದಾಗ ಅವರಿಗೆ ಸುಮಾರು ೮೦ ವರ್ಷ ವಯಸ್ಸಾಗಿತ್ತು.ಜಯಂತಿ ಹಾಗೂ ಶಿವರಾಂ ಅವರಿಗೆ ಕೃಷ್ಣ ಕುಮಾರ್ ಹೆಸರಿನ ಮಗನೂ ಇದ್ದಾರೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button