ಬಿಗ್ ಬಾಸ್ ರನ್ನರ್ ಅರವಿಂದ್.ಕೆ.ಪಿ ಗೆ ಅಪಘಾತ. ಸೊಂಟದ ಮೂಳೆ ಮುರಿದುಕೊಂಡ ಅರವಿಂದ್ ಲೈವ್ ನಲ್ಲಿ ಬಂದು ಹೇಳಿದ್ದೇನು ಗೊತ್ತಾ..??
ಅರವಿಂದ್.ಕೆ.ಪಿ. ಸೊಂಟ ಮುರಿದರೂ ಕುಗ್ಗದ ಆತ್ಮವಿಶ್ವಾಸ ಭಾರತೀಯ ರ‌್ಯಾಲಿ ಕ್ಷೇತ್ರದಲ್ಲಿ ಮಿಂಚಿನ ಸಂಚಲ ತಂದಿರುವ ರಾಜ್ಯದ ಬೈಕರ್. ಸೊಂಟ ಮುರಿದು ವೃತ್ತಿ ಬದುಕು ಅಂತ್ಯಗೊಂಡಿತು ಎಂಬ ಪರಿಸ್ಥಿತಿ ಎದುರಿಸಿದರೂ ಆತ್ಮ ವಿಶ್ವಾಸ ಕಳೆದುಕೊಳ್ಳದ ರಾಜ್ಯದ ಪ್ರತಿಭಾನ್ವಿತ ರ‌್ಯಾಲಿಪಟು ಕೆ.ಪಿ ಅರವಿಂದ್, ಕೇವಲ 6 ತಿಂಗಳ ಅವಧಿಯಲ್ಲಿ ಚೇತರಿಸಿದರಲ್ಲದೇ ಇಂದು ದ್ವಿಚಕ್ರ ವಿಭಾಗದಲ್ಲಿ ದೇಶದ ನಂ.
1 ರ‌್ಯಾಲಿಪಟುವಾಗಿ ಬೆಳೆದಿದ್ದಾರೆ. ಇತ್ತೀಚೆಗಷ್ಟೇ ಅಂತ್ಯಗೊಂಡ ರೇಡ್ ಡಿ’ಹಿಮಾಲಯ ಚಾಲೆಂಜ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಉಡುಪಿಯ ಕಡಿಯಾಳಿ ಮೂಲದವರಾದ ಅರವಿಂದ್ ಕೆ.ಪಿ ಅವರ ಕಥೆ ಎಂಥವರಿಗೂ ಸ್ಪೂರ್ತಿ ತುಂಬುವಂಥದ್ದು.
ಮಾರಣಾಂತಿಕ ಅಪಘಾತದಲ್ಲಿ ಆದಂತಹ ಗಾಯದಿಂದ ಹೊರಬಂದು ನ್ಯಾಷನಲ್ ರ‌್ಯಾಲಿ, ಸೂಪರ್ ಕ್ರಾಸ್, ಆಟೋ ಕ್ರಾಸ್ ಹಾಗೂ ದಕ್ಷಿಣ್ ಡೇರ್ ಸೇರಿದಂದೆ ದೇಶದ ಬಹುತೇಕ ಎಲ್ಲಾ ಮೋಟಾರ್ ಸ್ಪರ್ಧೆಗಳಲ್ಲಿ ಚಾಂಪಿಯನ್ ಆಗಿರುವ ಕೆಪಿ, ಶ್ರೀಲಂಕಾದಲ್ಲಿ ನಡೆದ ಸೂಪರ್ ಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿಯೂ ಮಿಂಚಿ ತಮ್ಮ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ವಿಸ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಸಾಧನೆ ಮತ್ತು ಅದರ ಹಿಂದಿನ ಪರಿಶ್ರಮವನ್ನು ಹಂಚಿಕೊಂಡಿದ್ದಾರೆ. 2012ರ ಜೂನ್‌ನಲ್ಲಿ ಶ್ರೀಲಂಕಾದಲ್ಲಿ ನಡೆದ ಸೂಪರ್ ಕ್ರಾಸ್ ತರಬೇತಿಯಲ್ಲಿ ಪಾಲ್ಗೊಂಡಿದ್ದ ಅರವಿಂದ್, ಅಭ್ಯಾಸದ ವೇಳೆ ಜಂಪ್ ಒಂದರಲ್ಲಿ ವಾಹನ ಕೈಕೊಟ್ಟ ಪರಿಣಾಮ ಕೆಳಗೆ ಬಿದ್ದರು. ಬೈಕ್ ಕೂಡ ಅವರ ಮೇಲೆ ಬಿದ್ದಿತ್ತು.
ಅಪಘಾತದಲ್ಲಿ ಸೊಂಟದ ಮೂಳೆ ಮುರಿಯಿತು. ಆದರೆ, ಇಲ್ಲಿಗೇ ಅವರ ವೃತ್ತಿಬದುಕು ಅಂತ್ಯಗೊಳ್ಳಲಿಲ್ಲ. ಆತ್ಮವಿಶ್ವಾಸವಿದ್ದರೆ ಜಗತ್ತನ್ನೇ ಗೆಲ್ಲಬವುದು ಎಂಬ ಮಾತಿದೆ. ಈ ಮಾತನ್ನು ನಿಜವನ್ನಾಗಿಸಿದ ವ್ಯಕ್ತಿ ಅರವಿಂದ್. ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಆರ್ಥೋ ತಜ್ಞರಾದ ಶಿರೀಶ್ ನರಸಾಪುರ್ ಹಾಗೂ ನವೀನ್ ಚಂದ್ ಅವರಿಂದ ‘ಹಿಪ್ ಸಾಕೆಟ್ ಡಿಸ್ಲೊಕೇಟ್’ ಸಮಸ್ಯೆಗೆ ನಟ್ ಮತ್ತು ಬೋಲ್ಟ್ ಮೂಲಕ ಫಿಕ್ಸ್ ಮಾಡಿಸಿ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದ ಅರವಿಂದ್, 4 ತಿಂಗಳ ಬೆಡ್ ರೆಸ್ಟ್ ಮತ್ತು ಫಿಜಿಯೋ ಥೆರಪಿ ಸಹಿತ 1 ವರ್ಷ ವಿಶ್ರಾಂತಿ ತೆಗೆದುಕೊಳ್ಳವಂತೆ ಸೂಚನೆ ಪಡೆದಿದ್ದರು. ಆದರೆ, ಕೇವಲ 6 ತಿಂಗಳಲ್ಲೇ ನಡೆಯಲು ಆರಂಭಿಸಿದ ಅವರು, ಫಿಸಿಯೋ ಥೆರಪಿ ನೆರವಿನಿಂದ 2 ತಿಂಗಳಲ್ಲಿ ಸಂಪೂರ್ಣ ಚೇತರಿಸಿದರು.
2013ರ ಮಾರ್ಚ್ ವೇಳೆ ಸ್ಪರ್ಧಾತ್ಮಕ ಜಗತ್ತಿಗೆ ಮರಳಿ ಪದಾರ್ಪಣೆ ಮಾಡಿದರು. ಆತ್ಮವಿಶ್ವಾಸದಿಂದ ನೋವನ್ನು ಗೆದ್ದು ಚೇತರಿಸಿಕೊಂಡರು. ಮನೆಯಲ್ಲಿ ಗೊತ್ತೇ ಇರಲಿಲ್ಲ 1999ರಲ್ಲಿ ಪಿಯುಸಿ ಪರೀಕ್ಷೆ ಬರೆದ ಅರವಿಂದ್‌ಗೆ ಶೇ.80 ರಷ್ಟು ಅಂಕಪಡೆದರೆ ಬೈಕ್ ಕೊಡಿಸುವುದಾಗಿ ಅವರ ಮನೆಯಲ್ಲಿ ಹೇಳಿದ್ದರು. ಕೇವಲ 2 ಅಂಕದಿಂದ ಡಿಸ್ಟಿಂಕ್ಷನ್ ತಪ್ಪಿತಾದರೂ, ಶೇ. 84.90 ಅಂಕ ಪಡೆದರು. ಮನೆಯವರು ಹೇಳಿದಂತೆ ಯಮಹಾ ಆರ್.ಎಕ್ಸ್ 135 ಬೈಕ್ ಕೊಡಿಸಿದರು. ‘‘ನನ್ನ ರೇಸ್ ಪ್ರೀತಿ ಆರಂಭವಾದುದ್ದೇ ಅಂದು. 2004ರ ಹೊತ್ತಿಗಾಗಲೇ ಸ್ವ ಪ್ರೇರಣೆಯಿಂದ ಹಲವು ಸ್ಥಳೀಯ ರ‌್ಯಾಲಿ ಮತ್ತು ಆಟೊಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಂಡೆ.
ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾ ರಾಷ್ಟ್ರಗಳಲ್ಲಿನ ಮೃತ್ಯು ಕೂಪದಂತಿರುವ ಸ್ಥಳಗಳಲ್ಲಿನ ದುರ್ಗಮ ರಸ್ತೆಗಳಲ್ಲಿ ಡಕಾರ್ ರ‌್ಯಾಲಿ ನಡೆಯುತ್ತದೆ. 2015ರಲ್ಲಿ ಅರವಿಂದ್ ಸಾಧನೆ * ಎಮ್‌ಆರ್‌ಎಫ್ ಸೂಪರ್ ಕ್ರಾಸ್ ಚಾಂಪಿಯನ್ (ಅಹಮದಾಬಾದ್, ಕೊಯಮತ್ತೂರು, ಹೈದರಾಬಾದ್) * ಶ್ರೀಲಂಕಾ ಮೋಟೊ ಕ್ರಾಸ್ (ನಾಲ್ಕು ಸುತ್ತಿನಲ್ಲಿ ಅಗ್ರ ಸ್ಥಾನ) * ದಕ್ಷಿಣ್ ಡೇರ್ ರ‌್ಯಾಲಿ ಚಾಂಪಿಯನ್ * ರೇಡ್ ಡಿ’ಹಿಮಾಲಯ ರ‌್ಯಾಲಿ ಚಾಂಪಿಯನ್ * ಕೇರಳ ಸೂಪರ್ ಕ್ರಾಸ್ ಚಾಂಪಿಯನ್. ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 8ರ ರನ್ನರ್ ಅಪ್. ಬೈಕ್ ರೇಸರ್ ಕೆ.ಪಿ. ಅರವಿಂದ್ ಫಿನಾಲೆ ಮುಗಿದ ಬಳಿಕ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 8ರಲ್ಲಿ ಗೆಲ್ಲುವ ಸ್ಪರ್ಧಿ ಎಂದೇ ಹೆಸರಾಗಿದ್ದ ಅರವಿಂದ್ ಕೆ.ಪಿ 43 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದು ಒಂದೂವರೆ ಲಕ್ಷಕ್ಕೂ ಅಧಿಕ ಅಂತರದಿಂದ ಗೆಲುವನ್ನು ಮಿಸ್ ಮಾಡಿಕೊಂಡಿದ್ದರು. ಆದರೆ, ಬೈಕ್ ರೇಸರ್ ಆಗಿದ್ದು, ಕಿರುತೆರೆ ಕಾರ್ಯಕ್ರಮದಲ್ಲಿ ಮಿಂಚಿದ್ದು ಅದ್ಬುತ ಸಾಧನೆ ಎಂದು ನಿರೂಪಕ ಕಿಚ್ಚ ಸುದೀಪ್ ಸೇರಿದಂತೆ ಹಲವರು ಕೊಂಡಾಡಿದ್ದರು. ತಾವು ಜಾಕೆಟ್ ಸಹ ನೀಡಿ ಸುದೀಪ್ ಶುಭಾಶಯ ಕೋರಿದ್ದರು. ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಸಹ ಅರವಿಂದ್ ಅವರು ನನಗೆ ಸ್ಫೂರ್ತಿ ಎಂದು ಹೇಳಿದ್ದರು.
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ
ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001