NEWS

ಅವನಾಗಿ ಹುಟ್ಟಿ ಅವಳಾಗಿ ಬದಲಾಗುವ ಇವರ, ಜನ್ಮಕ್ಕೆ ಕಾರಣವಾದ ತಂದೆತಾಯಿಯರು ಕಾರಣವಾ? ಹೀಗಾಗಲು ಕಾರಣವೇನು ಗೊತ್ತಾ?

ಮೌನದ ಮನೆಯಲ್ಲಿ ಮಂದಸ್ಮಿತ ನಗು ಬೀರುವವಳು ನಾನು, ಆರ್ತನಾದದಲ್ಲಿ ಆತ್ಮಬಲ ತುಂಬುವವಳು ನಾನು, ಅವನೂ ಅಲ್ಲದೇ, ಅವಳೂ ಅಲ್ಲದೇ ದುಃಖವನ್ನು ಸೆರಗಿನಲ್ಲಿ ಮರೆಮಾಚುತ್ತಾ, ಖುಷಿಯಿಂದ ಶರ್ಟು ಪ್ಯಾಂಟು ಕಳಚಿ, ಸೀರೆ ಏರಿಸಿಕೊಳ್ಳುವ ತವಕದಲ್ಲಿ ಕೊರಗಿ ಕೊರಗಿ ಜೀವನ ಸಾಗಿಸುವ ಮನಸ್ಸುಗಳು ನಾವು.

ಮೇಲಿನ ಸಾಲುಗಳನ್ನು ತಮ್ಮ ನಿತ್ಯದ ಬದುಕಿನಲ್ಲಿ ನರಕಯಾತನೆ ಅನುಭವಿಸುತ್ತಾ ಬದುಕು ದೂಡುವ ಜೀವಗಳು ನಮ್ಮ ನಡುವೆಯೇ ಇದೆ. ಆದರೆ ಅವರು ಹತ್ತಿರ ಬಂದರೆ ಸಾಕು ಅಸಹ್ಯ ಪಟ್ಟುಕೊಂಡು ಓಡಿಬಿಡುತೇವೆ. ಅವರು ಮಾತಾಡಿಸಿದರೆ ಭಯ ಪಟ್ಟುಕೊಳ್ಳುತ್ತೇವೆ. ಆದರೆ ಸಾರ್ವಜನಿಕವಾಗಿ ಭಾಷಣಗಳನ್ನು ಮಾಡುತ್ತಾ, ದೇವರ ಮಕ್ಕಳು ಎಂದು ಹೇಳುತ್ತಾ ಮಾನವೀಯತೆಯ ಸೋಗಿನಲ್ಲಿ ಕಾಲ ದೂಡುತ್ತಿರುತ್ತೇವೆ.

ಅದೆಷ್ಟೋ ತೃತೀಯ ಲಿಂಗಿಗಳಿಗೆ ಈ ಬದುಕು ಸಾಕಪ್ಪಾ ಎನಿಸಿದ್ದು ಮಾತ್ರ ಸುಳ್ಳಲ್ಲ. ಯಾವ ತಪ್ಪಿಗೆ ಹೀಗೆ ಇಡೀ ಬದುಕನ್ನು ನರಕ ಮಾಡಿದ್ದೀಯಾ? ಎಂದು ಭಗವಂತನನ್ನು ಹಿಡಿ ಹಿಡಿ ಶಾಪ ಹಾಕಿದ್ದೂ ಇದೆ. ಅದಕ್ಕೆ ಸುತ್ತಮುತ್ತಲಿನ ಜನರ ವರ್ತನೆ, ಅವರನ್ನು ನೋಡುವ ರೀತಿಯಿಂದಲೇ ಮಂಗಳಮುಖಿಯರ ಬದುಕು ನರಕ ಎನಿಸಿಬಿಡುತ್ತದೆ. ತೃತೀಯ ಲಿಂಗಿಗಳಾಗಿ ಬದೋಕೋದು ಶಾಪವಾ? ಎನಿಸಿಬಿಡುತ್ತದೆ.

ಬೆಳೆಯುತ್ತಾ ವ್ಯಕ್ತಿಯ ನಡವಳಿಕೆ, ಮಾತನಾಡುವ ಶೈಲಿ ಎಲ್ಲವೂ ಬದಲಾಗುತ್ತಾ ಹೋಗುತ್ತದೆ. ಆದರೆ ಇದು ಇಡೀ ಸಮಾಜದಿಂದ ದೂರ ಇಡುವಷ್ಟು ಕೆಟ್ಟದ್ದಾಗಿರುವುದಿಲ್ಲ. ಆದರೆ ಇದನ್ನು ಸಾಮಾನ್ಯವಾಗಿ ಪ್ರತಿಷ್ಠೆಯಂತೆ ಸ್ವೀಕರಿಸುವುದರಿಂದ ಹೀಗಾಗುತ್ತದೆ ಎಂದು ಸಾಕಷ್ಟು ಅಧ್ಯಯನಗಲು ಸಾರಿ ಸಾರಿ ಹೇಳಿವೆ. ಆದರೂ ನಾವು ಮಾತ್ರ ಅದನ್ನು ಸಾರಾಸಗಟಾಗಿ ಹಿಂದೆ ಹಾಕಿ ತೃತೀಯ ಲಿಂಗಿಗಳನ್ನು ಮನೆಯಿಂದ ಹೊರ ಹಾಕಿ ಮನಸ್ಸನ್ನು ಕಲ್ಲು ಮಾಡಿಕೊಳ್ಳುತ್ತಾರೆ.

ಹಾಗೆಯೇ ನೆದರ್‌ಲ್ಯಾಂಡ್‌ನ ಮಹಿಳೆಯೊಬ್ಬಳು ತಾನು ಪುರುಷನಾಗಬೇಕೆಂದು ಆಸೆಪಟ್ಟು ಆಪರೇಶನ್ ಮಾಡಿಸಿಕೊಂಡು ಆಕೆ ಪುರುಷನಾಗಿ ಬದಲಾಗುತ್ತಾಳೆ. ಆರಂಭದಲ್ಲಿ ಈ ಪ್ರಕ್ರಿಯೆಗೆ ವ್ಯಾಪಕ ವಿರೋಧ ಬಂದರೂ ಪ್ರಕ್ರಿಯೆ ಕಾನೂನು ಬದ್ಧವಾಗುತ್ತದೆ. ಈ ಎಲ್ಲದರ ಮಧ್ಯೆ ನಮ್ಮಂತೆ ಬದುಕುವ ಹಕ್ಕು ಈ ಸೃಷ್ಟಿಯಲ್ಲಿ ಇನ್ನೊಂದು ಜೀವಕ್ಕೂ ಇದ್ದೇ ಇರುತ್ತದೆ ಎಂಬುದು ಮಾತ್ರ ಸುಳ್ಳಲ್ಲ. ಮುಗ್ಧ ಮನಸ್ಸುಗಳ ಭಾವವನ್ನು ಅರ್ಥೈಸಿಕೊಂಡು ಅವರ ಭಾವನೆಗಳಿಗೆ ಬೆಲೆ ಕೊಟ್ಟು ಅವರಿಗೂ ಎಲ್ಲರಂತೆ ಬದುಕಲು ಅವಕಾಶ ಮಾಡಿಕೊಡಬೇಕಿದೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button