ENTERTAINMENT

ಮೇಘನಾರಾಜ್ ಪುತ್ರ ಜೂನಿಯರ್‌ ಚಿರು ನಾಮಕರಣ ಹಾಗೂ ಹೆಸರು ಫಿಕ್ಸ್..ಎಲ್ಲ ಕುತೂಹಲಕ್ಕೂ ಬ್ರೇಕ್..ನೀಡಿದ ಮೇಘನಾ..!!!

ದಿವಂಗತ ನಟ, ಸ್ಯಾಂಡಲ್‌ವುಡ್‌ನ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪುತ್ರ ಹುಟ್ಟಿ ಇನ್ನೇನು 11 ತಿಂಗಳಾಗುತ್ತಾ ಬಂತು. ಇದೀಗ ತಮ್ಮ ಪುತ್ರನಿಗೆ ನಾಮಕರಣ ಮಾಡಲು ಮೇಘನಾ ರಾಜ್ ಮುಂದಾಗಿದ್ದಾರೆ. ಜೂನಿಯರ್ ಚಿರುಗೆ ಮೇಘನಾ ರಾಜ್ ಮತ್ತು ಕುಟುಂಬ ಇಟ್ಟಿರುವ ಹೆಸರೇನು ಎಂಬುದು ನಾಳೆ (ಸೆಪ್ಟೆಂಬರ್ 3) ಬಹಿರಂಗವಾಗಲಿದೆ.

ತಮ್ಮ ಮುದ್ದು ಮಗನಿಗೆ ಹೆಸರಿಡುತ್ತಿರುವ ಕುರಿತು ನಟಿ ಮೇಘನಾ ರಾಜ್ ಇನ್ಸ್ಟಾಗ್ರಾಮ್ ಮೂಲಕ ತಿಳಿಸಿದ್ದಾರೆ. ಜೊತೆಗೆ ಒಂದು ಸ್ಪೆಷಲ್ ವಿಡಿಯೋವನ್ನೂ ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಜೂನಿಯರ್ ಚಿರುಗೆ ಇದುವರೆಗೂ ಕರೆಯುತ್ತಿದ್ದ ಹೆಸರುಗಳನ್ನೆಲ್ಲಾ ಉಲ್ಲೇಖಿಸಿ, ಅಧಿಕೃತ ನಾಮಧ್ಯೇಯವನ್ನು ಸೆಪ್ಟೆಂಬರ್ 3 ರಂದು ರಿವೀಲ್ ಮಾಡುವುದಾಗಿ ಮೇಘನಾ ರಾಜ್ ತಿಳಿಸಿದ್ದಾರೆ.

ಪುಟಾಣಿ ಪ್ರಿನ್ಸ್‌ಗೆ ಈಗ ಹೆಸರು ಸಿಕ್ಕಿದೆ. ಜೂನಿಯರ್ ಚಿರು ಬಗ್ಗೆ ನನಗೆ ಮೊದಲು ತೂರಿಬಂದ ಪ್ರಶ್ನೆ ”ಏನು ಹೆಸರು ಜೂನಿಯರ್‌ದು?”. ಇದೀಗ ಅದಕ್ಕೆ ಉತ್ತರ ಹೇಳುವ ಸಮಯ ಬಂದಿದೆ. ಮಗನ ಹೆಸರನ್ನು ಸೆಪ್ಟೆಂಬರ್ 3, 2021 ರಂದು ರಿವೀಲ್ ಮಾಡುತ್ತೇವೆ” ಎಂದು ಮೇಘನಾ ರಾಜ್ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

ಜೂನಿಯರ್ ಚಿರುಗೆ ಇಲ್ಲಿಯವರೆಗೂ ಜೂನಿಯರ್ ಸಿ, ಸಿಂಬಾ, ಚಿಂಟು, ಬರ್ಫಿ, ಚಿರು ಬಚ್ಚಾ, ಮರಿ ಸಿಂಗಾ, ಮಿನಿಮಂ, ಕುಟ್ಟಿ ಪಾಪ, ಚಿರು ಬೇಬಿ, ಮರಿ ಸಿಂಗಾ ಅಂತೆಲ್ಲಾ ಕರೆಯಲಾಗುತ್ತಿತ್ತು ಎಂದು ತಾವು ಹಂಚಿಕೊಂಡಿರುವ ಸ್ಪೆಷಲ್ ವಿಡಿಯೋ ಮೂಲಕ ಮೇಘನಾ ರಾಜ್ ತಿಳಿಸಿದ್ದಾರೆ. ತಮ್ಮ ಪ್ರೀತಿಯ ಪುತ್ರನಿಗೆ ಮೇಘನಾ ರಾಜ್ ಏನಂತ ಹೆಸರಿಟ್ಟಿರಬಹುದು ಎಂದು ತಿಳಿದುಕೊಳ್ಳುವ ಕಾತರ ಅಭಿಮಾನಿಗಳಿಗಿದೆ. ಜೂನಿಯರ್ ಚಿರುಗೆ ಒಳ್ಳೇದಾಗಲಿ ಅಂತ ಅಭಿಮಾನಿಗಳು ಹಾಗೂ ತಾರೆಯರು ಹಾರೈಸುತ್ತಿದ್ದಾರೆ.

ಜೂನಿಯರ್ ಚಿರುಗೆ ಮೇಘನಾ ರಾಜ್ ಜನ್ಮ ನೀಡಿದ್ದು ಅಕ್ಟೋಬರ್ 22, 2020ರಂದು. ಇದೀಗ ಜೂನಿಯರ್ ಚಿರು ಹನ್ನೊಂದು ತಿಂಗಳ ಕಂದಮ್ಮ. ಮುಂದಿನ ತಿಂಗಳಿಗೆ ಜೂನಿಯರ್ ಚಿರುಗೆ ಒಂದು ವರ್ಷ ತುಂಬುತ್ತದೆ. ಈ ಸಂಭ್ರಮದಲ್ಲಿ ಸದ್ಯ ಮೇಘನಾ ರಾಜ್ ಮತ್ತು ಕುಟುಂಬವಿದೆ. ಕಳೆದ ವರ್ಷ ಜೂನ್ 7 ರಂದು ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮೃತಪಟ್ಟರು. ಚಿರಂಜೀವಿ ಸರ್ಜಾ ಸಾವನ್ನಪ್ಪಿದಾಗ ಪತ್ನಿ ಮೇಘನಾ ರಾಜ್ ಐದು ತಿಂಗಳ ಗರ್ಭಿಣಿಯಾಗಿದ್ದರು

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ ಶ್ರೀ ಪಂಡಿತ್ ದಾಮೋದರ್ ಭಟ್ ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ ಅಂಜನ ಶಾಸ್ತ್ರ ದೈವಪ್ರಶ್ನೆ ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳದ ವಿದ್ಯೆ ಆರೋಗ್ಯ ವ್ಯಾಪಾರ ಭೂಮಿ ವಿಚಾರ ಹಣಕಾಸು ವಿದೇಶಿ ಪ್ರಯಾಣ ನಿಮ್ಮ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಹ

ಶಾಶ್ವತ ಪರಿಹಾರ ಶತಸಿದ್ಧ ( ಪರಿಹಾರದಲ್ಲಿ .9008993001

Related Articles

Leave a Reply

Your email address will not be published. Required fields are marked *

Back to top button