ಇಟ್ ಇಸ್ ಎ ಬಾಯ್ ಎಂದು ಮಗನ ಆಗಮನವನ್ನು ತಿಳಿಸಿದ ಕಿರುತೆರೆ ನಟಿ ಇವರೇ ನೋಡಿ
ಈ ಲಾಕ್‌ಡೌನ್‌ನಲ್ಲಿ ಅನೇಕ ನಟಿಯರು ಮಾತೃತ್ವದ ಸವಿಯನ್ನು ಅನುಭವಿಸಿದ್ದಾರೆ. ಈ ಸಾಲಿಗೆ ಇನ್ನೊಬ್ಬ ನಟಿ ಕೂಡಾ ಸೇರುತ್ತಿದ್ದಾರೆ. ಕಿರುತೆರೆ ಹಿರಿತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ನಯನಾ ಪುಟ್ಟಸ್ವಾಮಿ ಇದೀಗ ತಾಯಿಯಾದ ಸಂಭ್ರಮದಲ್ಲಿದ್ದಾರೆ. ಮದುವೆ ಬಳಿಕ ಸಿನಿರಂಗದಿಂದ ದೂರ ಇರುವ ನಯನ ತನ್ನ ಪತಿ ಚರಣ್ ಜೊತೆಗೆ ಅಮೆರಿಕಾಗೆ ತೆರಳಿದರು. ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿರುವ ನಯನಾ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ಇಂತಿಪ್ಪ ನಯನಾ ನಿನ್ನೆ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಅಮೇರಿಕಾದ ಟೆಂಪಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಚೊಚ್ಚಲ ಹೆರಿಗೆಯಾಗಿದ್ದು ಮಗುವಿನ ಪುಟ್ಟ ಕೈ ಫೋಟೋ ಹಂಚಿಕೊಂಡಿರುವ ನಯನಾ ಇಟ್ ಈಸ್ ಎ ಬಾಯ್ ಎಂದು ಬರೆದುಕೊಂಡಿದ್ದಾರೆ. ಜನವರಿಯಲ್ಲಿ ತಾನು ತಾಯಿಯಾಗುತ್ತಿರುವ ಸಂತಸದ ವಿಚಾರವನ್ನು ನಯನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಮಾತ್ರವಲ್ಲ ಕೊರೊನಾ ವ್ಯಾಕ್ಸಿನ್ ಪಡೆದ ಫೋಟೋವೊಂದನ್ನೂ ಕೂಡಾ ಇತ್ತೀಚೆಗೆ ಅಪ್‌ಡೇಟ್ ಮಾಡಿದ್ದರು.