ತುಂಡುಡುಗೆಯಲ್ಲಿ ಮಗಳ ಜೊತೆ ಕಾಣಿಸಿಕೊಂಡ ಶ್ವೇತಾ ಶ್ರೀವಾತ್ಸವ್ ಗೆ ನೆಟ್ಟಿಗರು ಏನು ಮಾಡಿದ್ದಾರೆ ನೋಡಿ
ಸಿಂಪಲ್ ನಟಿ ಶ್ವೇತಾ ಶ್ರೀವಾತ್ಸವ ಅವರು ತಮ್ಮ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮಗಳು ಹಾಗೂ ಗಂಡನ ಜೊತೆ ಕಡಲ ತೀರದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಲ್ಲೇ ಸಖತ್ ಎಂಜಾಯ್ ಮಾಡುತ್ತಾ ಕಾಲ ಕಳೆದಿದ್ದಾರೆ. ಇನ್ನು ಕಡಲ ತೀರದಲ್ಲಿ ಶ್ವೇತಾ ಶ್ರೀವಾತ್ಸವ ತುಂಡುಡುಗೆ ತೊಟ್ಟು ನೀರಿನಲ್ಲಿ ಆಡುತ್ತಾ ಪೋಸ್ ಕೊಟ್ಟಿರುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟಿ ಶ್ವೇತಾ ಶ್ರೀವಾತ್ಸವ್ ಅವರು ತಮ್ಮ ಹುಟ್ಟುಹಬ್ಬವನ್ನು ಸಿಂಪಲ್ಲಾಗಿ ಗಂಡ ಹಾಗೂ ಮಗಳ ಜೊತೆ ಆಚರಿಸಿಕೊಂಡಿದ್ದಾರೆ. ಜೊತೆಗೆ ಕುಟುಂಬದೊಂದಿಗೆ ಕಡಲ ತೀರಕ್ಕೆ ಹೋಗಿರುವ ನಟಿ ಅಲ್ಲಿ ನೀರಲ್ಲಿ ಆಡುತ್ತಾ ಸಂತಸ ಪಟ್ಟಿದ್ದಾರೆ. ಶ್ವೇತಾ ಶ್ರೀವಾತ್ಸವ ಅವರು ಕಡಲ ತೀರದಲ್ಲಿ ತುಂಡುಡುಗೆ ತೊಟ್ಟು ನೀರಿನಲ್ಲಿ ಆಡುತ್ತಾ ಎಂಜಾಯ್ ಮಾಡಿದ್ದಾರೆ. ಈ ವೇಳೆ ಅವರ ಕೆಲವು ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.
ಶ್ವೇತಾ ಶ್ರೀವಾತ್ಸವ ಅವರು ಕಡಲ ತೀರದಲ್ಲಿ ತೆಗೆದ ಚಿತ್ರಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶ್ವೇತಾ ಶ್ರೀವಾತ್ಸವ ಅವರ ಈ ಪೋಸ್ಟ್ಗೆ ನೆಟ್ಟಿಗರೊಬ್ಬರು ಕೊಂಚ ಖಾರವಾಗಿ ಟೀಕಿಸಿದ್ದಾರೆ. ಹೀಗೆ ತುಂಡುಡುಗೆ ತೊಟ್ಟು ಪೋಸ್ ಕೊಟ್ಟಿರುವುದು ಸರಿಯಲ್ಲ. ದಯವಿಟ್ಟು ನಮ್ಮ ಸಂಸ್ಕೃತಿ ಉಳಿಸಿ ಎಂದಿದ್ದಾರೆ.
ಕೆಲವರು ಟೀಕಿಸಿದವರನ್ನು ಸಮರ್ಥಿಸಿಕೊಂಡರೆ, ಶ್ವೇತಾ ಶ್ರೀವಾತ್ಸವ ಅವರ ಅಭಿಮಾನಿಗಳು ನಟಿಯ ಪರ ಬೆಂಬಲ ಸೂಚಿಸಿದ್ದಾರೆ. ನಿಮಗೆ ಇಷ್ಟವಿದ್ದರೆ ಹಿಂಬಾಲಿಸಿ, ಇಲ್ಲವಾದಲ್ಲಿ ಅನ್ಫಾಲೋ ಮಾಡಿ, ಹೀಗೆಲ್ಲ ಕಮೆಂಟ್ ಮಾಡಬೇಡಿ ಎಂದು ಕಿವಿ ಹಿಂಡಿದ್ದಾರೆ. ಮಗಳ ಲಾಲನೆ-ಪಾಲನೆ ಜೊತೆ ಅಭಿನಯವನ್ನೂ ಮುಂದುವರೆಸುತ್ತಿರುವ ನಟಿ ಶ್ವೇತಾ ಶ್ರೀವಾತ್ಸವ ಅವರ ಹೊಸ ಸಿನಿಮಾದ ಪೋಸ್ಟರ್ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಿದೆ.
ಸ್ನೂಕರ್ ಆಟಗಾರ್ತಿ ವರ್ಷಾ ಸಂಜೀವ್ ಅವರು ನಿರ್ಮಾಣ ಮಾಡಿರುವ ಈ ಹೋಪ್ ಸಿನಿಮಾದಲ್ಲಿ ಶ್ವೇತಾ ಶ್ರೀವಾತ್ಸವ್ ಅವರು ಕೆಎಎಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಮೋಷನ್ ಪೋಸ್ಟರ್ ಸಿನಿಪ್ರಿಯರ ಗಮನ ಸೆಳೆದಿದೆ. ಈಗಾಗಲೇ ಹೋಪ್ ಸಿನಿಮಾದ ಚಿತ್ರೀಕರಣ ಮುಗಿದು ಹೋಗಿದೆ. ಲಾಕ್ಡೌನ್ನಲ್ಲೇ ಸಿನಿಮಾದ ಕೆಲಸಗಳು ಪೂರ್ಣಗೊಂಡಿವೆ. ಆದರೆ ಕೇವಲ 34 ದಿನಗಳಲ್ಲೇ ಶೂಟಿಂಗ್ ಮುಕ್ತಾಯವಾಗಿದೆಯಂತೆ.
ಕನ್ನಡ ಚಿತ್ರರಂಗದಲ್ಲಿ ಸಿಂಪಲ್ ಹುಡುಗಿ ಅಂತಾನೆ ಗುರುತಿಸಿಕೊಂಡಿರುವ ಶ್ವೇತಾ ಶ್ರೀವಾಸ್ತವ್, ಸೋಷಿಯಲ್ ಮೀಡಿಯಾದಲ್ಲಿ ಮಗಳ ಜೊತೆಗಿನ ವಿಡಿಯೋ ಹಂಚಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಸದ್ಯ ಶ್ವೇತಾ ಶ್ರೀವಾಸ್ತವ್ ಕೆಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ‘ಹೋಪ್’ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಮೇಕಿಂಗ್ ವಿಡಿಯೋವನ್ನ ಚಿತ್ರತಂಡ ರಿವೀಲ್ ಮಾಡಿದೆ. ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಶ್ವೇತಾ ಜೊತೆಗೆ ಸುಮಲತಾ ಅಂಬರೀಶ್, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ ಸೇರಿದಂತೆ ಮುಂತಾದ ಕಲಾವಿದರು ನಟಿಸಿದ್ದಾರೆ.
ಈ ಹಿಂದೆ ಜಲ್ವಂತ ಸಿನಿಮಾ ನಿರ್ದೇಶಿಸಿದ ಅಂಬರೀಶ್ ಈ ಚಿತ್ರದ ನಿರ್ದೇಶಕರು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.