ENTERTAINMENT

ಮಗ ರಾಯನ್ ರಾಜ್ ಸರ್ಜಾ ನಾಮಕರಣದ ಎರಡೇ ದಿನಕ್ಕೆ ಕಣ್ಣೀರಿಟ್ಟ ಮೇಘನಾ ರಾಜ್..ಕಾರಣವೇನು ಗೊತ್ತಾ?

ಕಳೆದ ವರ್ಷ ಆಕ್ಟೊಬರ್ 22 ರಂದು ಜ್ಯೂನಿಯರ್ ಚಿರು ಸರ್ಜಾರ ಆಗಮನವಾಗಿತ್ತು. ಚಿರಂಜೀವಿ ಸರ್ಜಾರನ್ನು ಕಳೆದುಕೊಂಡ ನೋ-ವನ್ನು ಸರ್ಜಾ ಕುಟುಂಬದಿಂದ ಸ್ವಲ್ಪ ಮಟ್ಟಿಗಾದರೂ ದೂರ ಮಾಡಲು ಪುಟ್ಟ ಚಿರು ಜನನ ಕಾರಣವಾಗಿತ್ತು. ಹುಟ್ಟಿದ ಕ್ಷಣದಿಂದಲೇ ಎಲ್ಲರ ಪ್ರೀತಿಗೂ ಪಾತ್ರವಾಗಿದ್ದಾರೆ ಜ್ಯೂನಿಯರ್ ಚಿರು. ಇನ್ನೂ ಜೂನಿಯರ್ ಚಿರು ಆಗಮನದ ನಂತರ, ಚಿರು ಮೇಘನಾ ಅಭಿಮಾನಿಗಳು ಜೂನಿಯರ್ ಚಿರುವಿನ ನಾಮಕರಣ ಯಾವಾಗ, ಏನೆಂದು ಹೆಸರಿಡುತ್ತೀರಾ ಎಂದು ಕೇಳುತ್ತಿದ್ದರು.

ಇವತ್ತು, ಚಿರು ಸರ್ಜಾ ಮೇಘನಾ ರಾಜ್ ಪುತ್ರ ಜೂನಿಯರ್ ಚಿರುವಿನ ನಾಮಕರಣವಾಗಿದ್ದು, ಸರ್ಜಾ ಹಾಗು ರಾಜ್ ಕುಟುಂಬದವರು ಜೂನಿಯರ್ ಚಿರುವಿಗೆ ರಾಯಾನ್ ರಾಜ್ ಸರ್ಜಾ ಎಂದು ಹೆಸರಿಟ್ಟಿದ್ದಾರೆ. ಇನ್ನೂ ನಾಮಕರಣ ಆದ ನಂತರ, ಸುದ್ದಿ ಗೋಷ್ಠಿ ಯಲ್ಲಿ ಎಲ್ಲರೂ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಚಿರುವನ್ನು ಈ ಸಂದರ್ಭದಲ್ಲಿ ನೆನೆದು ಭಾವುಕರಾಗಿದ್ದಾರೆ.

ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿಯ ಪ್ರೀತಿಯ ಪುತ್ರನಿಗೆ ಶುಕ್ರವಾರ ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರ ನಾಮಕರಣ ಮಾಡಲಾಗಿತ್ತು. ಈ ಕುರಿತಂತೆ ಕೆಲವು ಮಂದಿ ರಾಯನ್ ರಾಜ್ ಸರ್ಜಾ ಎಂಬ ಹೆಸರಿನ ಬಗ್ಗೆ ಸೋಶಿಯಲ್ ಮೀಡಿಯಾ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು. ಸದ್ಯ ಈ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ ನೀಡಿದ್ದಾರೆ.

ಇನ್‍ಸ್ಟಾಗ್ರಾಮ್‍ನಲ್ಲಿ ನಾಮಕರಣದ ಕ್ಯೂಟ್ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋ ಜೊತೆಗೆ, ಒಬ್ಬ ತಾಯಿಯಾಗಿ ನಾನು ನನ್ನ ಮಗನಿಗೆ ಉತ್ತಮವಾದುದನ್ನು ನೀಡುವುದು ಬಹಳ ಮುಖ್ಯ. ಅವನ ತಂದೆ, ತಾಯಿ ಖುಷಿಪಟ್ಟಂತೆ ಎರಡು ಧರ್ಮದಲ್ಲಿರುವ ಒಳ್ಳೆಯ ಅಂಶ ಅವನಿಗೆ ಯಾಕೆ ಸಿಗಬಾರದು? ಜನರು ತಮ್ಮ ಜಾತಿ, ಧರ್ಮವನ್ನು ಲೆಕ್ಕಿಸದೇ ಅವನಿಗಾಗಿ ಹಾಗೂ ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ.

ದೇವರಿಂದಲೂ ನಾವು ಆಶೀರ್ವಾದವನ್ನು ಕೋರುತ್ತೇವೆ. ಎರಡು ಸಂಪ್ರದಾಯದ ಪ್ರಕಾರ ಇದನ್ನು ಮಾಡುವುದು ನನಗೆ ಬಹಳ ಮುಖ್ಯವಾಗಿತ್ತು. ಏಕೆಂದರೆ ಇದಕ್ಕೆ ಕಾರಣ ಅವನ ತಂದೆ, ನಮ್ಮ ರಾಜ ಚಿರು ಎಲ್ಲದಕ್ಕಿಂತ ಹೆಚ್ಚಾಗಿ ಮಾನವೀಯತೆ ಮುಖ್ಯ ಎಂದು ನಂಬಿದ್ದರು. ಹೀಗಾಗಿ ಎರಡು ಸಂಪ್ರದಾಯದಲ್ಲಿ ಉತ್ತಮವಾಗಿರುವುದನ್ನು ಆಚರಿಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಾದ ದರ್ಶನ್, ಎಲ್ಲರೂ ಕೂಡ ಪುಟ್ಟ ಚಿರುಗೆ ವಿಶೇಷವಾದ ಗಿಫ್ಟ್ಸ್ ಗಳನ್ನು ಕಳಿಸಿಕೊಟ್ಟಿದ್ದರು. ಜೊತೆಗೆ, ಸಾಹಸಸಿಂಹ ವಿಷ್ಣುವರ್ಧನ್ ಅವರ ಕುಟುಂಬ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಅವರ ಕುಟುಂಬದಿಂದ ಕೂಡ ಭರ್ಜರಿ ಉಡುಗೊರೆ ಬಂದಿದೆ. ಮೇಘನಾ ಅವರು ಮಗನಿಗೆ 9 ತಿಂಗಳು ತುಂಬಿದಾಗ ಮತ್ತೆ ಬಣ್ಣ ಹಚ್ಚುವ ಮೂಲಕ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

Related Articles

Leave a Reply

Your email address will not be published. Required fields are marked *

Back to top button